ಹುಡುಗಿಯರ ಶೌಚಾಲಯದಲ್ಲಿ ‘ಸಿ.ಸಿ.ಟಿ..ವಿ. ಕೆಮೆರಾ’ ಅಳವಡಿಸಿರುದು ಮತ್ತು ಕ್ರೈಸ್ತರ ಪ್ರಾರ್ಥನೆ ಹೇಳಿಸಿಕೊಳ್ಳುವ ಶಾಲೆಯ ಪ್ರಾಚಾರ್ಯನಿಗೆ ಥಳಿತ !

ತಳೆಗಾವ (ಪುಣೆ) ಇಲ್ಲಿಯ ಘಟನೆ !

ಅಲೆಕ್ಸಾಂಡರ್ ಕೋಟ್ಸ್

ಪುಣೆ – ತಳೆಗಾವದಲ್ಲಿನ ಮಾವಳ ತಾಲೂಕಿನ ಅಂಬಿ ಗ್ರಾಮದಲ್ಲಿನ ‘ಡಿ ವೈ ಪಾಟೀಲ್ ಸ್ಕೂಲ್’ ನಲ್ಲಿ ಹೆಣ್ಣು ಮಕ್ಕಳ ಶೌಚಾಲಯದಲ್ಲಿ ಶಾಲೆಯ ಆಡಳಿತದಿಂದ ‘ಸಿ.ಸಿ.ಟಿ.ವಿ.ಕ್ಯಾಮೆರಾ’ ಅಳವಡಿಸಿರುವುದು ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲದೆ, ವಿದ್ಯಾರ್ಥಿಗಳಿಂದ ಕ್ರೈಸ್ತ ಸಮಾಜದ ಪ್ರಾರ್ಥನೆ ಕೂಡ ಮಾಡಿಸಲಾಗುತ್ತದೆ. ಈ ವಿಷಯ ಭಜರಂಗದಳ ಮತ್ತು ಹಿಂದುತ್ವನಿಷ್ಠ ಸಂಘಟನೆಗಳಿಗೆ ತಿಳಿಯುತ್ತಲೇ ಅವರು ಈ ಶಾಲೆಯ ಪ್ರಾಚಾರ್ಯರಿಗೆ ಪ್ರಶ್ನೆ ಕೇಳಿದರು. ಆಗ ಅವರು ಸಮಾಧಾನಕಾರಕ ಉತ್ತರ ನೀಡದೇ ಇದ್ದರಿಂದ ಜುಲೈ ೪ ರಂದು ಪ್ರಾಚಾರ್ಯರನ್ನು ಥಳಿಸಲಾಯಿತು.

‘ಅಲೆಕ್ಸಾಂಡರ್ ಕೋಟ್ಸ್’ ಎಂದು ಈ ಪ್ರಾಚಾರ್ಯರ ಹೆಸರಾಗಿದೆ. ಹಿಂದುತ್ವನಿಷ್ಠ ಸಂಘಟನೆಗಳು ಈ ಪ್ರಾಚಾರ್ಯರ ಮೇಲೆ ವಿದ್ಯಾರ್ಥಿಗಳಿಗೆ ಬಲವಂತವಾಗಿ ಕ್ರೈಸ್ತ ಧರ್ಮದ ಬಗ್ಗೆ ಕಲಿಸುತ್ತಿರುವ ಆರೋಪ ಮಾಡಿದ್ದಾರೆ. (ಇದು ಕ್ರೈಸ್ತರ ನಿಜವಾದ ಸ್ವರೂಪ ! ಹಿಂದೂಗಳ ಮತಾಂತರ ತಡೆಯುವದಕ್ಕಾಗಿ ಹಿಂದುಗಳಿಗೆ ಧರ್ಮಶಿಕ್ಷಣ ನೀಡುವುದರ ಜೊತೆಗೆ ದೇಶದಲ್ಲಿ ಕಠಿಣ ಮತಾಂತರ ನಿಷೇಧ ಕಾನೂನು ಜಾರಿಗೊಳಿಸುವುದು ಕೂಡ ಅತ್ಯಾವಶ್ಯಕವಾಗಿದೆ ! – ಸಂಪಾದಕರು) ಇತರ ಶಿಕ್ಷಕರ ಸಹಾಯದಿಂದ ಅವರು ಇದನ್ನು ಮಾಡುತ್ತಿದ್ದರು. ಈ ಪ್ರಕರಣದಲ್ಲಿ ದೂರು ನೀಡಲಾಗಿದೆ; ಆದರೆ ಈ ಪ್ರಕರಣದ ಕುರಿತು ಯಾವುದೇ ದೂರು ದಾಖಲಿಸಲಾಗಿಲ್ಲ. ಪ್ರಾಚಾರ್ಯರಿಗೆ ಕಡ್ಡಾಯವಾಗಿ ರಜೆನೀಡಿ ಕಳುಹಿಸಲಾಗಿದೆ.

ಕ್ಯಾಮೆರಾದ ಸಂದರ್ಭದಲ್ಲಿನ ಕುರಿತು ಶಾಲೆಯಲ್ಲಿನ ಹುಡುಗಿಯರು ತಮ್ಮ ಪೋಷಕರಿಗೆ ಹೇಳಿದರು. ಅದರ ಬಗ್ಗೆ ಪೋಷಕರು ಶಾಲೆಯ ಆಡಳಿತಕ್ಕೆ ಪ್ರಶ್ನೆ ಕೇಳಿದ್ದರು. ಆ ಸಮಯದಲ್ಲಿ ಪ್ರಾಚಾರ್ಯರೇ ಈ ಕ್ಯಾಮೆರಾ ಅಳವಡಿಸಲು ಸೂಚನೆ ನೀಡಿದ್ದರು ಎಂದು ಹೇಳಲಾಯಿತು. ಆದ್ದರಿಂದ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗುವವರೆಗೆ ಶಾಲೆ ಮುಚ್ಚುವ ನಿರ್ಣಯ ಪೋಷಕರು ತೆಗೆದುಕೊಂಡಿದ್ದಾರೆ. ಶಾಲೆಯ ಆಡಳಿತವು ಈ ಕುರಿತು ಮೌನವಾಗಿದೆ.

ಸಂಪಾದಕೀಯ ನಿಲುವು

ಈ ರೀತಿಯ ಬಹಳಷ್ಟು ಘಟನೆಗಳು ಇಂಗ್ಲೀಷ್ ಶಾಲೆಯಲ್ಲಿ ಬೆಳಕಿಗೆ ಬಂದಿರುತ್ತವೆ. ಇಂತಹ ಶಾಲೆಗಳಲ್ಲಿ ಮಕ್ಕಳ ಮೇಲೆ ಯಾವ ಸಂಸ್ಕಾರ ಆಗುತ್ತಿರಬಹುದು ? ಪೋಷಕರೇ, ಇಂತಹ ಶಾಲೆಗಳಿಗೆ ಮಕ್ಕಳನ್ನು ಕಳಿಸಬೇಕೇ ಅಥವಾ ಬೇಡವೋ ಅದನ್ನು ನೀವೇ ನಿಶ್ಚಯಿಸಿ !