ಸ್ವೀಡನ್ ನಲ್ಲಿ ಈಗ ಕುರಾನ್, ಬೈಬಲ್ ಮತ್ತು ಜ್ಯೂ ಧರ್ಮದ ‘ಟೋರಾ’ ಈ ಧಾರ್ಮಿಕ ಪುಸ್ತಕಗಳನ್ನು ಸುಡುವ ಬೇಡಿಕೆಯ ಅರ್ಜಿ !

ಸ್ಟಾಕಹೋಮ (ಸ್ವೀಡನ) – ಒಂದು ವಾರದ ಹಿಂದೆ ಇಲ್ಲಿ ಸಲವಾನ್ ಮೇಮಿಕ್ ಈ ವ್ಯಕ್ತಿ ನ್ಯಾಯಾಲಯದ ಅನುಮತಿ ಪಡೆದು ಕುರಾನ್ ಸುಟ್ಟು ಹಾಕಿದ್ದನು. ಇದು ಸಂಪೂರ್ಣ ಜಗತ್ತಿನಲ್ಲಿ ವಿಶೇಷವಾಗಿ ಇಸ್ಲಾಮಿ ದೇಶದಲ್ಲಿ ಪ್ರತಿಧ್ವನಿಸಿತು. ಈಗ ಸ್ಟಾಕಹೋಮ್ ನಲ್ಲಿ ಒಬ್ಬ ೩೦ ವರ್ಷದ ವ್ಯಕ್ತಿ ಜುಲೈ ೧೫ ರಂದು ಇಸ್ರೈಲ್ ನ ರಾಯಭಾರಿ ಕಚೇರಿಯ ಹೊರಗೆ ಜ್ಯೂ ಧರ್ಮದ ಪುಸ್ತಕ ‘ಟೋರಾ’ ಮತ್ತು ಕ್ರೈಸ್ತ ಧರ್ಮದ ‘ಬೈಬಲ್’ ಸುಡಲು ಪೊಲೀಸರಿಗೆ ಅನುಮತಿ ಕೇಳಿದ್ದಾನೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಈ ಅನುಮತಿ ಕೇಳಲಾಗಿದೆ. ಇನ್ನೊಂದು ಕಡೆಗೆ ಒಬ್ಬ ೫೦ ವರ್ಷದ ಮಹಿಳೆ ಕೂಡ ಕುರಾನ್ ಸುಡಲು ಪೊಲೀಸರಿಗೆ ಅನುಮತಿ ಕೇಳಿದ್ದಾಳೆ. ಪೊಲೀಸರು, ನಾವು ಇಲ್ಲಿಯವರೆಗೆ ಯಾರ ಬೇಡಿಕೆಯು ತಿರಸ್ಕರಿಸಿಲ್ಲ. ಪ್ರತಿಯೊಬ್ಬರ ಬೇಡಿಕೆಯ ಸಮೀಕ್ಷೆ ಮಾಡಲಾಗುವುದು ಎಂದು ಹೇಳಿದ್ದಾರೆ.

ಸ್ವೀಡನಿನಲ್ಲಿ ಇಸ್ರೈಲ್ ನ ರಾಯಭಾರಿ ಜೀವ ನೇವೋ ಕೂಲಮನ್ ಇವರು ಈ ಬೇಡಿಕೆಗಳ ಬಗ್ಗೆ ಟ್ವಿಟ್ ಮಾಡುತ್ತಾ, ನಾನು ಸ್ವೀಡನ್ ನಲ್ಲಿ ಇನ್ನೂ ಧಾರ್ಮಿಕ ಪುಸ್ತಕಗಳ ಸುಡುವ ಸಾಧ್ಯತೆಯಿಂದ ಭಯಭೀತನಾಗಿದ್ದೇನೆ. ಅದು ‘ಕುರಾನ್’ ಆಗಿರಲಿ, ಟೋರಾ ಆಗಿರಲಿ ಅಥವಾ ಇತರ ಯಾವುದೇ ಪುಸ್ತಕವಾಗಿರಲಿ, ಅದು ಘೃಣಸ್ಪದ ಕೃತ್ಯವಾಗಿದೆ ಅದನ್ನು ತಡೆಯಬೇಕು ಎಂದು ಹೇಳಿದರು.