ಇಂತಹವರ ವಿರುದ್ಧ ಕ್ರಮ ಕೈಗೊಳ್ಳಿ ! – ದೇವಸ್ಥಾನದ ಆಡಳಿತದಿಂದ ಪೊಲೀಸರಿಗೆ ಪತ್ರ
ಕೇದಾರನಾಥ (ಉತ್ತರಾಖಂಡ) – ಇಲ್ಲಿನ ಪವಿತ್ರ ಕೇದಾರನಾಥ ದೇವಸ್ಥಾನದ ಪರಿಸರದಲ್ಲಿ ಯುವತಿಯೊಬ್ಬಳು ತನ್ನ ಪ್ರಿಯಕರನಿಗೆ ಮದುವೆ ಪ್ರಸ್ತಾವ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದನ್ನು ಟೀಕಿಸಿದ ಜನರು ದೇವಸ್ಥಾನದ ಆವರಣದಲ್ಲಿ ಸಂಚಾರವಾಣಿ ಒಯ್ಯುವುದನ್ನು ನಿಷೇಧಿಸುವಂತೆ ಒತ್ತಾಯಿಸಿದ್ದಾರೆ. ದೇವಸ್ಥಾನದ ಆಡಳಿತ ಮಂಡಳಿಯು ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಇಂತಹವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.
ದೇವಾಲಯದ ಆವರಣದಲ್ಲಿ ವಿಡಿಯೋ ಮಾಡುವವರ ಮೇಲೆ ತೀವ್ರ ನಿಗಾ ಇಡಬೇಕು. ಇಂಥವರು ದೇಶ-ವಿದೇಶಗಳ ಭಕ್ತರ ಭಾವನೆಗಳಿಗೆ ಧಕ್ಕೆ ತರುತ್ತಿದ್ದಾರೆ ಎಂದು ಬದರಿನಾಥ-ಕೇದಾರನಾಥ ದೇವಾಲಯ ಸಮಿತಿಯು ಪೊಲೀಸರಿಗೆ ಪತ್ರದಲ್ಲಿ ನಮೂದಿಸಿದೆ.
One of the Reasons why Smartphones should be Banned from All Leading Temples & Shrines
Just a Basic Phone within 20 KMs from the Main Temple, Eliminates Unnecessary Crowd
PS – I’m writing this from Kedarnath 🛕
— Ravisutanjani (@Ravisutanjani) July 1, 2023
ಸಂಪಾದಕರ ನಿಲುವುಹಿಂದೂಗಳಿಗೆ ಧರ್ಮಶಿಕ್ಷಣ ಇಲ್ಲದಿರುವುದರಿಂದ ಇಂತಹ ಘಟನೆಗಳು ನಡೆಯುತ್ತಿವೆ ಎಂಬುದನ್ನು ಹಿಂದೂ ಸಂಘಟನೆಗಳು ಗಮನದಲ್ಲಿಟ್ಟು ಹಿಂದೂಗಳಿಗೆ ಧರ್ಮಶಿಕ್ಷಣ ನೀಡಲು ಪ್ರಯತ್ನಿಸಬೇಕು ! |