ನೆದರ್ಲ್ಯಾಂಡ್ಸ್ ಸರಕಾರವು ಮುಂದಿನ ವರ್ಷದಿಂದ ಶಾಲೆಗಳಲ್ಲಿ ಮೊಬೈಲ್ ಫೋನ್ ಬಳಕೆಯನ್ನು ನಿಷೇಧಿಸಲಿದೆ !

ಅಮ್ಸ್ಟರಡ್ಯಾಮ್ (ನೆದರಲ್ಯಾಂಡ್ಸ್) – ನೆದರ್ಲ್ಯಾಂಡ್ಸ್ ಸರಕಾರವು ಮುಂದಿನ ವರ್ಷದಿಂದ ಶಾಲೆಗಳಲ್ಲಿ ಮೊಬೈಲ್ ಫೋನ್‌ಗಳು, ಸ್ಮಾರ್ಟ್‌ವಾಚ್‌ಗಳು ಮತ್ತು ಟ್ಯಾಬ್ಲೆಟ್‌ಗಳನ್ನು ಬಳಸುವುದನ್ನು ನಿಷೇಧಿಸುತ್ತದೆ. ಸರಕಾರವು ಈ ನಿಟ್ಟಿನಲ್ಲಿ ಪೋಷಕರು ಮತ್ತು ಶಿಕ್ಷಕರ ಒಪ್ಪಿಗೆ ಪಡೆಯಲು ಅಕ್ಟೋಬರ್ ತನಕ ಸಮಯ ಮೀತಿ ಹಾಕಿದೆ. ಯಂತ್ರಗಳು ಶಿಕ್ಷಣದ ಮೇಲೆ ಪರಿಣಾಮ ಬೀರುತ್ತಿವೆ ವಿದ್ಯಾರ್ಥಿಗಳು ಶಿಕ್ಷಣದತ್ತ ಗಮನ ಹರಿಸಲು ಸಾಧ್ಯವಿಲ್ಲ ಎಂದು ಸರಕಾರದ ಹೇಳಿಕೆಯಾಗಿದೆ.

ಈ ಮೊದಲು ಫ್ರಾನ್ಸ್ ಸರಕಾರವು ೨೦೧೮ ರಲ್ಲಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳಲ್ಲಿ ಮೊಬೈಲಗಳ ಬಳಕೆಯನ್ನು ನಿಷೇಧಿಸಿತು. ಬ್ರಿಟನ್‌ನಲ್ಲಿಯೂ ಹೆಚ್ಚಿನ ಶಾಲೆಗಳು ಹಿಂದಿನಿಂದಲೇ ಮೊಬೈಲ ಬಳಕೆಯನ್ನು ನಿಷೇಧಿಸಿವೆ.