ಫ್ರಾನ್ಸನ ಮಾರ್ಸೆಲಿಸ್ ನಗರದಲ್ಲಿ ಮುಸಲ್ಮಾನ ಯುವಕನೊಬ್ಬನ ನೋವನ್ನು ಹೇಳುವ ಮೂಲಕ ಮುಸ್ಲಿಮರ ಹಿಂಸಾಚಾರಕ್ಕೆ ಫ್ರೆಂಚ್ ರಾಜಕಾರಣಿಯೇ ಹೊಣೆ ಎಂದು ತೀರ್ಮಾನ !
ಲಂಡನ್ (ಇಂಗ್ಲೆಂಡ್) – `ಬಿಬಿಸಿ’ಯು ಫ್ರಾನ್ಸನಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಅಲ್ಲಿಯ ರಾಜಕಾರಣಿಗಳೇ ಹೊಣೆಗಾರರು ಎಂದು ವರದಿಯನ್ನು ಪ್ರಕಟಿಸಿದೆ. `ಫ್ರಾನ್ಸನ ಗಲಭೆ : ರಾಜಕಾರಣಿಗಳಿಗೆ ನಾವು ಯಾರೂ ಅಲ್ಲ’ ಈ ಶೀರ್ಷಿಕೆಯಡಿಯಲ್ಲಿ ಪ್ರಕಟವಾಗಿರುವ ಸುದ್ದಿಯಲ್ಲಿ ಫ್ರಾನ್ಸನ ಮಾರ್ಸೆಲಿಸ್ ನಗರದ ಅಮಿನೆ ಹೆಸರಿನ 19 ವರ್ಷದ ಮುಸಲ್ಮಾನ ಹುಡುಗನ ವ್ಯಥೆಯನ್ನು ಮಂಡಿಸಿದೆ. ಈ ವಾರ್ತೆಯಲ್ಲಿ `ನಾನು ಹಿಂಸಾಚಾರವನ್ನು ಬೆಂಬಲಿಸುವುದಿಲ್ಲ; ಆದರೆ ಇಲ್ಲಿಯ ಯುವಕರನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆನು’’, ಎನ್ನುವ ರೀತಿಯಲ್ಲಿ ಅಮಿನೆಯ ಹೇಳಿಕೆವನ್ನು ಪ್ರಕಟಿಸಲಾಗಿದೆ.
ರಾಜಧಾನಿ ಪ್ಯಾರಿಸ್ ನಲ್ಲಿ ಪೊಲೀಸರಿಂದ ನಾಹೆಲ್ ಎಂ. ಈ ಅರಬ್ಬಿ ಹುಡುಗನ ಹತ್ಯೆಯ ಬಳಿಕ ಸಂಪೂರ್ಣ ಫ್ರಾನ್ಸನಲ್ಲಿ ಹಿಂಸಾಚಾರ ಭುಗಿಲೆದ್ದಿತು. ಕಡಲತೀರದ ಮಾರ್ಸೆಲಿಸ್ ನಗರದಲ್ಲಿ ದೊಡ್ಡ ಪ್ರಮಾಣದಲ್ಲಿ ಅಗ್ನಿ ಅವಘಡಗಳು ಮತ್ತು ವಿಧ್ವಂಸಕ ಕೃತ್ಯಗಳೂ ನಡೆದಿವೆ. ಇದೆಲ್ಲವನ್ನು ಬಿಬಿಸಿ ವಿವರವಾಗಿ ಪ್ರಕಟಿಸಿದ್ದು, ಸಂಬಂಧಪಟ್ಟ ವಾರ್ತೆಯಲ್ಲಿ ಅಮಿನೆ ಮಾತನಾಡುತ್ತಾ, ಈ ನಗರದಲ್ಲಿ ಮಾದಕ ಪದಾರ್ಥಗಳ ಕಳ್ಳಸಾಗಾಣಿಕೆ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಬಡ (ಮುಸಲ್ಮಾನ) ಯುವವರ್ಗಕ್ಕೆ ಶಿಕ್ಷಣದ ಯಾವುದೇ ಮಾಧ್ಯಮಗಳು ಉಳಿದಿಲ್ಲ, ಅವರ ಎದುರು ಕೇವಲ ಮಾದಕ ಪದಾರ್ಥಗಳೊಂದಿಗೆ ಸಂಬಂಧಿಸಿದ ವ್ಯವಹಾರವನ್ನು ಮಾಡುವ ಪರ್ಯಾಯವೊಂದೇ ಉಳಿದಿದೆ. ರಾಷ್ಟ್ರಾಧ್ಯಕ್ಷ ಇಮ್ಯಾನುಯೆಲ್ ಮೆಕ್ರಾನ್ ಇವರು ನಗರಕ್ಕೆ ಎರಡು ಬಾರಿ ಭೇಟಿ ನೀಡಿದ್ದು, ಅವರು ನಮಗಾಗಿ ವಿವಿಧ ಯೋಜನೆಗಳನ್ನು ಘೋಷಿಸಿದರು; ಆದರೆ ನಮ್ಮ ಗೋಳನ್ನು ಮಾತ್ರ ಕೇಳಲಿಲ್ಲ ಎಂದು ಅಮಿನೆ ಈ ವರದಿಯ ಕೊನೆಯಲ್ಲಿ ಹೇಳಿದ್ದಾರೆ. ಒಟ್ಟಾರೆ ಈ ವಾರ್ತೆಯಲ್ಲಿ `ಮುಸ್ಲಿಂ ಯುವಕರ ಅಸಮಾಧಾನಕ್ಕೆ ಫ್ರೆಂಚ್ ರಾಜಕಾರಣಿಗಳೇ ಕಾರಣ ಮತ್ತು ಅದಕ್ಕಾಗಿಯೇ ಈ ಯುವಕರು ಗಲಭೆ ಮಾಡುತ್ತಿದ್ದಾರೆ’ ಎಂದು ನಿಶ್ಕರ್ಷ ತೆಗೆಯಲಾಗಿದೆ.
ಸಂಪಾದಕರ ನಿಲುವು`ಪತ್ರಿಕೋದ್ಯಮ ಏಕತಾನತೆಯಿಂದ ಕೂಡಿರಬಾರದು’ ಇದು ನಿಜ; ಆದರೆ ಅದರ ಸಮತೋಲನವನ್ನು ಕಾಪಾಡಲು ಹಿಂಸಾಚಾರವನ್ನು ಬೆಂಬಲಿಸುವುದು ಯಾವಾಗಲೂ ಖಂಡನೀಯವೇ ಆಗಿದೆ. ಅಂದರೆ ಭಾರತದ ಮತಾಂಧ ಮುಸಲ್ಮಾನರನ್ನು ಯಾವಾಗಲೂ ಬೆಂಬಲಿಸುವ ಬಿಬಿಸಿಯಿಂದ ಫ್ರಾನ್ಸ ಸಂದರ್ಭದಲ್ಲಿ ಇನ್ನೇನನ್ನು ನಿರೀಕ್ಷಿಸಬಹುದು ? |