ಪಾಕಿಸ್ತಾನದಲ್ಲಿರುವ ಚೀನಾ ರಾಯಭಾರಿ ಕಚೇರಿಗೂ ಗೊತ್ತಿರಲಿಲ್ಲ !
ಇಸ್ಲಾಮಬಾದ (ಪಾಕಿಸ್ತಾನ) – ಚೀನಾದ ಬಿಲಿಯನೇರ್ ಹಾಗೂ “ಆಲಿಬಾಬ ಗ್ರೂಪ್’ನ ಸಹ ಸಂಸ್ಥಾಪಕ ಜಾಕ್ ಮಾ ಇತ್ತೀಚೆಗೆ ಪಾಕಿಸ್ತಾನಕ್ಕೆ ರಹಸ್ಯ ಭೇಟಿ ನೀಡಿದ್ದಾರೆ. ಪಾಕಿಸ್ತಾನದಲ್ಲಿರುವ ಚೀನಾದ ರಾಯಭಾರಿ ಕಚೇರಿಗೂ ಈ ಪ್ರವಾಸದ ಕಲ್ಪನೆ ಇರಲಿಲ್ಲ ಎಂದು ಎಲ್ಲೆಡೆ ಆಶ್ಚರ್ಯ ವ್ಯಕ್ತವಾಗಿದೆ. ಆ ವೇಳೆ ಮಾ ಇವರ ಜೊತೆ ೧ ಅಮೇರಿಕನ್ ಮತ್ತು ೫ ಚೀನಾ ನಾಗರೀಕರು ಉಪಸ್ತಿತರಿದ್ದರು. “ಬೋರ್ಡ್ ಆಫ್ ಇನ್ವೆಸ್ಟಮೆಂಟ್” ನ ಮಾಜಿ ಅಧ್ಯಕ್ಷ ಮಹಮ್ಮದ್ ಅಫಸರ ಅಹಸನ ಈ ಬಗ್ಗೆ ಅಧೀಕೃತ ಮಾಹಿತಿ ನೀಡಿದ್ದು, ಜಾಕ್ ಮಾ ರವರು ಜೂನ್ ೨೯ ರಂದು ಲಾಹೋರ್ ತಲುಪಿದರು. ಅವರು ಸಾಧಾರಣ ೨೩ ಘಂಟೆ ಪಾಕಿಸ್ತಾನದಲ್ಲಿದ್ದರು. ಜಾಕ್ ಮಾ ಇತ್ತೀಚೆಗೆ ನೇಪಾಳಕ್ಕೂ ಹೋಗಿದ್ದರು. ಅಲ್ಲಿ ಅವರು ಪ್ರಧಾನಿ ಪ್ರಚಂಡ ಇವರ ಭೇಟಿ ಮಾಡಿದ್ದರು.
#VantageOnFirstpost: #Alibaba founder and Chinese billionaire #JackMa made a surprise visit to #Pakistan. He was in Lahore for less than 24 hours.@palkisu tells you the whole storyhttps://t.co/0UzVEHAP0x
— Firstpost (@firstpost) July 3, 2023