ಹಿಂದೂದ್ವೇಷಿ ಸಾಮಾಜಿಕ ಕಾರ್ಯಕರ್ತ ತಿಸ್ತಾ ಸೆಟಲವಾಡ್ ಇವರಿಗೆ ತಾತ್ಕಾಲಿಕ ಬಂಧನದಿಂದ ಸಂರಕ್ಷಣೆ

ಸರ್ವೋಚ್ಚ ನ್ಯಾಯಾಲಯದಿಂದ ಒಂದು ವಾರಕ್ಕಾಗಿ ಮಧ್ಯಂತರ ಜಾಮೀನು ಮಂಜೂರು

ತಿಸ್ತಾ ಸೆಟಲವಾಡ್ : ತಾತ್ಕಾಲಿಕ ಬಂಧನದಿಂದ ಸಂರಕ್ಷಣೆ

ನವದೆಹಲಿ – ಇಲ್ಲಿ ಜುಲೈ 1 ರಂದು ತಡರಾತ್ರಿ ನಡೆದಿರುವ ವಿಚಾರಣೆಯಲ್ಲಿ ಸರ್ವೋಚ್ಚ ನ್ಯಾಯಾಲಯದಿಂದ ೩ ನ್ಯಾಯಾಧೀಶರನ್ನು ಒಳಗೊಂಡ ಖಂಡ ಪೀಠವು ಹಿಂದೂ ದ್ವೇಷಿ ಸಾಮಾಜಿಕ ಕಾರ್ಯಕರ್ತೆ ತಿಸ್ತಾ ಸೆಟಲವಾಡ್ ಇವರ ಜಾಮೀನು ಅರ್ಜಿ ತಿರಸ್ಕರಿಸುತ್ತಾ ಇತ್ತೀಚಿಗೆ ಅವರಿಗೆ ಪೊಲೀಸರಿಗೆ ಶರಣಾಗಲು ಆದೇಶ ನೀಡಲಾಗಿತ್ತು. ಈ ಆದೇಶವನ್ನು ಪ್ರಶ್ನಿಸಿ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದರು. ಈ ಬಗ್ಗೆ ಸರ್ವೋಚ್ಚ ನ್ಯಾಯಾಲಯದಿಂದ ನೀಡಿರುವ ಮೇಲಿನ ನಿರ್ಣಯದಿಂದ ಸೆಟಲವಾಡ್ ಇವರಿಗೆ ತತ್ಕಾಲಿನ ಬಂಧನದಿಂದ ಸಂರಕ್ಷಣೆ ಸಿಕ್ಕಿದೆ. ಅವರ ಮೇಲೆ ೨೦೦೨ ರಲ್ಲಿ ನಡೆದಿರುವ ಗುಜರಾತ ಗಲಭೆಯಲ್ಲಿ ನಿರಪರಾಧಿ ವ್ಯಕ್ತಿಗಳನ್ನು ಸುಳ್ಳು ಆರೋಪದಲ್ಲಿ ಸಿಲುಕಿಸಿರುವ ಆರೋಪ ಇದೆ. ಈ ಪ್ರಕರಣದಲ್ಲಿ ಜೂನ್ ೨೫, ೨೦೨೨ ರಂದು ಅವರಿಗೆ ಬಂದಿಸಲಾಗಿತ್ತು, ಹಾಗೂ ಸಪ್ಟೆಂಬರ್ ೨೦೨೨ ರಲ್ಲಿ ಅವರಿಗೆ ಜಾಮೀನು ಮಂಜೂರ ಮಾಡಲಾಗಿತ್ತು.