ಫ್ರಾನ್ಸಿನಲ್ಲಿ ಹಿಂಸಾಚಾರ ಮುಂದುವರಿಕೆ : ೧೩೦೦ ಕ್ಕಿಂತಲೂ ಹೆಚ್ಚಿನ ನಾಗರಿಕರ ಬಂಧನ

ಪ್ರತಿಭಟನಕಾರರಿಂದ ಅಪಾರ್ಟ್ಮೆಂಟ್ ಮತ್ತು ಅಂಗಡಿಗಳ ಲೂಟಿ

(ಫ್ರಾನ್ಸನಲ್ಲಿ ನಡೆಯುತ್ತಿರುವ ಹಿಂಸಾಚಾರದ ಸಂಗ್ರಹಿತ ಛಾಯಾಚಿತ್ರಗಳು)

ಪ್ಯಾರಿಸ್ – ಸಂಚಾರ ನಿಯಮ ಉಲ್ಲಂಘಿಸಿರುವ ಓರ್ವ ೧೭ ವರ್ಷದ ಹುಡುಗನ ಮೇಲೆ ಪೊಲೀಸು ಗುಂಡು ಹಾರಿಸಿದ್ದರಿಂದ ಅವನು ಸಾವನ್ನಪ್ಪಿರುವ ಘಟನೆಯಿಂದ ಫ್ರಾನ್ಸ್ ನಲ್ಲಿ ಭೂಗಿಲೆದ್ದಿರುವ ಹಿಂಸಾಚಾರ ಇಲ್ಲಿಯವರೆಗೆ ಮುಂದುವರೆದಿದೆ. ಈ ಹಿಂಸಾಚಾರದ ಪ್ರಕರಣದಲ್ಲಿ ಪೊಲೀಸರು ಇಲ್ಲಿಯವರೆಗೆ ೧೩೦೦ ಕ್ಕಿಂತಲೂ ಹೆಚ್ಚಿನ ನಾಗರಿಕರನ್ನು ಬಂಧಿಸಲಾಗಿದೆ.

ಈ ಘಟನೆಯನ್ನು ನಿಷೇಧಿಸುತ್ತ ನಾಗರೀಕರು ಪ್ಯಾರಿಸ್ ಉಪನಗರದಲ್ಲಿ ಮತ್ತು ಫ್ರಾನ್ಸ್ ನಲ್ಲಿ ಬೀದಿಗೆ ಇಳಿದಿದ್ದಾರೆ. ಮಾರ್ಸಿಲ್ ಶಹರದಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಸಂಘರ್ಷ ನಡೆದಿದೆ. ಪ್ರತಿಭಟನಾಕಾರರಿಂದ ವಾಹನಗಳನ್ನು ಸುಟ್ಟಾಕುವುದರ ಜೊತೆಗೆ ಅಪಾರ್ಟ್ಮೆಂಟ್ ಮತ್ತು ಅಂಗಡಿಗಳನ್ನು ಲೂಟಿ ಮಾಡುತ್ತಿದ್ದಾರೆ. ಪ್ರತಿಭಟನಾಕಾರರನ್ನು ತಡೆಯುವುದಕ್ಕಾಗಿ ಪೊಲೀಸರು ಅರ್ಶುವಾಯುವಿನ ಉಪಯೋಗ ಮಾಡಲಾಗುತ್ತಿದೆ.