ಪಾಕಿಸ್ತಾನದಲ್ಲಿ, ಗುರುದ್ವಾರವನ್ನು ಪ್ರವೇಶಿಸಿ ಗುರು ಗ್ರಂಥ ಸಾಹಿಬ್ ಅನ್ನು ಅವಮಾನಿಸಿ ಮತಾಂಧ ಮುಸ್ಲಿಮರು !

ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದ ಮತಾಂಧರನ್ನು ಬಿಡುಗಡೆ ಮಾಡಿದರು !

ಸುಕ್ಕೂರ್ (ಪಾಕಿಸ್ತಾನ) – ಪಾಕಿಸ್ತಾನದಲ್ಲಿನ ಸಿಂಧ್ ಪ್ರಾಂತ್ಯದ ಸುಕ್ಕೂರ ನಗರದ ಸಿಂಗ್ ಸಭಾ ಗುರುದ್ವಾರದ ಪರಿಸರದಲ್ಲಿ ಮತಾಂಧ ಮುಸಲ್ಮಾನರು ಪ್ರವೇಶಿಸಿ ಅಲ್ಲಿನ ಸೇವಕರಿಗೆ ತಳ್ಳಿ ಅಲ್ಲಿನ ಕೀರ್ತನೆಯನ್ನು ನಿಲ್ಲಿಸಿದರು, ಮತ್ತು ಗುರು ಗ್ರಂಥ ಸಾಹಿಬನ್ನೂ ಅವಮಾನಿಸಿದರು. ಸ್ಥಳೀಯ ಸಿಖ್ಖರು ಈ ಮತಾಂಧರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರು; ಆದರೆ ಪೊಲೀಸರು ಅವರನ್ನು ವಿಚಾರಣೆ ನಡೆಸದೆ ಬಿಟ್ಟುಕೊಟ್ಟರು.

ವಿದೇಶದಲ್ಲಿರುವ ‘ಯುನೈಟೆಡ್ ಸಿಖ್’ ಸಂಘಟನೆಯು ಈ ಘಟನೆಯನ್ನು ನಿಷೇಧಿಸಿದೆ. ಈ ಸಂಘಟನೆಯು ಟ್ವೀಟ್ ಮಾಡುತ್ತಾ, “ನಾವು ಇತರ ಸಿಖ್ ಸಂಘಟನೆಗಳೊಂದಿಗೆ ಪಾಕಿಸ್ತಾನ ರಾಯಭಾರಿ ಕಛೇರಿ ಅಧಿಕಾರಿಗಳೊಂದಿಗೆ ಚರ್ಚಿಸಿ ತಾವು ಹಸ್ತಕ್ಷೇಪ ಮಾಡುವಂತೆ ಒತ್ತಾಯಿಸುತ್ತೇವೆ” ಎಂದು ಹೇಳಿದೆ.

ಸಂಪಾದಕೀಯ ನಿಲುವು

ಪಾಕಿಸ್ತಾನದ ನೆರವಿನಿಂದ ಖಲಿಸ್ತಾನಕ್ಕೆ ಬೇಡಿಕೆಯನ್ನು ಮಾಡುತ್ತಿರುವ ಖಲಿಸ್ತಾನಿ ಭಯೋತ್ಪಾದಕರ ಸಂಘಟನೆಗಳು ಈ ಬಗ್ಗೆ ಏಕೆ ಮಾತನಾಡುವುದಿಲ್ಲ ? ಪಾಕಿಸ್ತಾನದ ಮತಾಂಧರ ಪ್ರಕಾರ ಸಿಖ್ಖರೂ ಕಾಫಿರರು, ಇದು ಅವರಿಗೆ ಗೊತ್ತಿದಿಯೆ ?