|
ಭುಜ (ಗುಜರಾತ) – ಕಚ್ಚ ಜಿಲ್ಲೆಯಲ್ಲಿನ ಮುಂದ್ರಾದ ಪರ್ಲ್ ಶಾಲೆಯಲ್ಲಿ ಬಕ್ರಿದ್ ಆಚರಿಸುವಾಗ ಹಿಂದೂ ವಿದ್ಯಾರ್ಥಿಗಳಿಗೆ ನಮಾಜ್ ಮಾಡಲು ಹೇಳಲಾಯಿತು. ಈ ಘಟನೆಯ ವಿಚಾರಣೆ ನಡೆಸುವುದಕ್ಕಾಗಿ ಜಿಲ್ಲಾ ಶಿಕ್ಷಣಾಧಿಕಾರಿಗಳಿಂದ ಒಂದು ಸಮಿತಿ ಸ್ಥಾಪನೆ ಮಾಡಲಾಗಿದೆ. ‘ಈ ಘಟನೆಯಲ್ಲಿ ಏನಾದರೂ ಶಾಲೆಯೇ ತಪ್ಪಿತಸ್ಥ ಎಂದು ತಿಳಿದು ಬಂದರೆ ಕ್ರಮ ಕೈಗೊಳ್ಳಲಾಗುವುದು’, ಎಂದು ಜಿಲ್ಲಾ ಶಿಕ್ಷಣ ಅಧಿಕಾರಿಗಳು ಹೇಳಿದ್ದಾರೆ. ಇನ್ನೊಂದು ಕಡೆ ಶಾಲೆಯ ಮುಖ್ಯಾದ್ಯಪಕಿ ರಾಶಿ ಗೌತಮ್ ಇವರು ಇದರ ಬಗ್ಗೆ ಕ್ಷಮೆಯಾಚನೆ ಮಾಡಿದ್ದಾರೆ. ನಮಾಜ ಇದು ಕಾರ್ಯಕ್ರಮದ ಒಂದು ಭಾಗವಾಗಿತ್ತು ಯಾರ ಭಾವನೆಗೆ ಧಕ್ಕೆ ತರುವ ಉದ್ದೇಶ ನಮ್ಮದಾಗಿರಲಿಲ್ಲ. ಭವಿಷ್ಯದಲ್ಲಿ ಜನರ ಭಾವನೆಗೆ ಧಕ್ಕೆ ತರುವಂತಹ ಯಾವುದೇ ಕಾರ್ಯಕ್ರಮ ಶಾಲೆಯಲ್ಲಿ ಆಚರಿಸಲಾಗುವುದಿಲ್ಲ, ಎಂದು ಕೂಡ ಅವರು ಹೇಳಿದರು.
महेसाणा के एक प्राइवेट अंग्रेजी मीडियम स्कूल में बकरीद के मौके पर सेलिब्रेशन रखा गया था. #BakraEid2023 #Gujarat (@gopimaniar)https://t.co/gFIAz3tRw7
— AajTak (@aajtak) June 30, 2023
ಜೂನ್ ೨೮ ರಂದು ಬಕ್ರಿದ್ ಪ್ರಯುಕ್ತ ಒಂದು ಕಾರ್ಯಕ್ರಮದ ಆಯೋಜನೆ ಮಾಡಲಾಗಿತ್ತು. ಆ ಸಮಯದಲ್ಲಿ ಕೆಲವು ಹಿಂದೂ ಹುಡುಗರು ಕೂಡ ನಮಾಜ್ ಮಾಡುವ ವಿಡಿಯೋ ಶಾಲೆಯಿಂದಲೆ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿತ್ತು. ಅದನ್ನು ನೋಡಿದ ನಂತರ ಹಿಂದೂ ಸಂಘಟನೆಗಳು ವಿರೋಧಿಸಿದವು.
ಸಂಪಾದಕೀಯ ನಿಲುವುಶಾಲೆಯಲ್ಲಿ ಭಗವದ್ಗೀತೆ ಕಲಿಸುಲು ಯಾರಾದರೂ ಕೇವಲ ಹೇಳಿದರೂ ‘ಶಿಕ್ಷಣದ ಕೇರಿಕರಣವಾಗುತ್ತಿದೆ’, ಎಂದು ಬೊಬ್ಬೆ ಹಾಕುವವರು ಈಗ ಹಿಂದೂ ವಿದ್ಯಾರ್ಥಿಗಳಿಂದ ಪ್ರತ್ಯಕ್ಷ ನಮಾಜ್ ಮಾಡಿಸಿರುವುದರಿಂದ ‘ಶಿಕ್ಷಣದ ಇಸ್ಲಾಮಿಕರಣವಾಗುತ್ತಿದೆ’ ಹೀಗೆ ಹೇಳುತ್ತಿಲ್ಲ, ಇದನ್ನು ತಿಳಿಯಿರಿ ! |