ಅಮೆರಿಕಾದ ಶಾಲೆಗಳಲ್ಲಿ ಹಿಂದಿ ಭಾಷೆ ಕಲಿಸಲು ಪ್ರಸ್ತಾವನೆ !

ವಾಷಿಂಗ್ಟನ್ – ಭಾರತದೊಂದಿಗೆ ವ್ಯಾಪಾರವನ್ನ ಹೆಚ್ಚಿಸಲು ಹಿಂದಿ ಭಾಷೆ ಕಡ್ಡಾಯವಾಗಿದೆ. ಹಾಗಾಗಿ ‘ಇಂಡಿಯನ್ ಅಮೆರಿಕನ್ ಇಂಪ್ಯಾಕ್ಟ್’ ಮತ್ತು ‘ಏಷ್ಯಾ ಸೊಸೈಟಿ’ ಸಂಘಟನೆಗಳ ೧೦೦ ಮಂದಿ ಅಮೆರಿಕಾದ ಶಾಲೆಗಳಲ್ಲಿ ಹಿಂದಿ ಭಾಷೆಯನ್ನು ಕಲಿಸುವ ಪ್ರಸ್ತಾವನೆಯನ್ನು ಅಮೆರಿಕದ ಅಧ್ಯಕ್ಷ ಜೋ ಬಾಯಡೆನ್ ಅವರ ಮುಂದಿಟ್ಟಿದ್ದಾರೆ.

(ಸೌಜನ್ಯ – DV News India)

ಭಾರತದ ಆರ್ಥಿಕ ಸ್ಥಿತಿ ವಿಶ್ವದಲ್ಲಿ ಮೂರನೇ ಸ್ಥಾನದಲ್ಲಿದೆ. ಆದ್ದರಿಂದ, ಭವಿಷ್ಯದಲ್ಲಿ ಅಮೆರಿಕಾ ಮತ್ತು ಭಾರತದ ನಡುವೆ ಅನೇಕ ಕ್ಷೇತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡುವ ನಿರೀಕ್ಷೆಯು ಹೆಚ್ಚಾಗಬಹುದು. ಇದೇ ಉದ್ದೇಶದಿಂದಲೇ ಅಮೆರಿಕಾದಲ್ಲಿರುವ ವಿದ್ಯಾರ್ಥಿಗಳಿಗೆ ಹಿಂದಿ ವಿಷಯವನ್ನು ಕಲಿಸಬೇಕೆಂದು ಈ ಸಂಗಟನೆಗಳು ಸ್ಪಷ್ಟಪಡಿಸಿವೆ. ಅಮೆರಿಕಾದ ೪ ರಾಜ್ಯಗಳಾದ ಕ್ಯಾಲಿಫೋರ್ನಿಯಾ, ಟೆಕ್ಸಾಸ್, ನ್ಯೂಯಾರ್ಕ್ ಮತ್ತು ನ್ಯೂಜೆರ್ಸಿಯಲ್ಲಿ ಹಿಂದಿ ಭಾಷೆಯನ್ನು ಕಲಿಸಲಾಗುತ್ತದೆ.