೧. ಮನಸ್ಸಿನ ಸ್ಥಿತಿ ಸರಿ ಇಲ್ಲದಿರುವುದರಿಂದ ‘ಸಾಧನೆ ಅಥವಾ ಸೇವೆಯನ್ನು ಮಾಡಬಾರದು, ಎಂದೆನಿಸುವುದು
‘ಒಮ್ಮೆ ನನಗೆ ಪ.ಪೂ. ಡಾಕ್ಟರರ (ಪರಾತ್ಪರ ಗುರು ಡಾ. ಆಠವಲೆ ಯವರ) ಸತ್ಸಂಗ ಸಿಕ್ಕಿತು. ನನ್ನ ಮನಸ್ಸಿನ ಸ್ಥಿತಿ ಸರಿ ಇಲ್ಲದಿರುವುದರಿಂದ ನನಗೆ ‘ಸಾಧನೆ ಅಥವಾ ಸೇವೆಯನ್ನು ಮಾಡುವುದು ಬೇಡ, ಎಂದೆನಿಸುತ್ತಿತ್ತು. ‘ಎಲ್ಲವನ್ನು ಬಿಟ್ಟು ಎಲ್ಲಿಯಾದರೂ ಹೋಗಿ ಶಾಂತ ಕುಳಿತುಕೊಳ್ಳೋಣ, ಎಂದೆನಿಸುತ್ತಿತ್ತು. ನಾನು ಆ ಭೇಟಿಯಲ್ಲಿ ಇದೆಲ್ಲವನ್ನು ಪ.ಪೂ. ಗುರುದೇವರಿಗೆ ಹೇಳಿದೆ. ಕಳೆದ ೧೪-೧೫ ವರ್ಷಗಳಿಂದ ನನ್ನಲ್ಲಿ ದೇವದ ಆಶ್ರಮದಲ್ಲಿನ ಚಿಕಿತ್ಸಾಲಯದ ಸೇವೆಯ ಜವಾಬ್ದಾರಿಯಿದೆ. ಸಾಧಕರ ಅನೇಕ ಸಮಸ್ಯೆಗಳು, ವಿವಿಧ ಪ್ರಕೃತಿಯ ಸಾಧಕರನ್ನು ನೋಡಿಕೊಳ್ಳುವುದು ಇತ್ಯಾದಿ ವಿಷಯಗಳನ್ನು ಬಹಳಷ್ಟು ಕಾಲ ನನಗೊಬ್ಬನಿಗೆ ನೋಡಿಕೊಳ್ಳಬೇಕಾಗಿದ್ದರಿಂದ ನನಗೆ ಆ ವಿಷಯದ ಒತ್ತಡವಾಗುತ್ತಿತ್ತು. ಆದ್ದರಿಂದ ನನಗೆ ‘ಈ ಸೇವೆಯನ್ನು ಮಾಡುವುದು ಬೇಡ, ಎಂದೆನಿಸುತ್ತಿತ್ತು. ಅದಕ್ಕೆ ಪ.ಪೂ. ಗುರುದೇವರು, “ನೀವು ಒತ್ತಡವನ್ನು ಮಾಡಿ ಕೊಳ್ಳಬೇಡಿ, ಒತ್ತಡವನ್ನು ನಿರ್ವಹಿಸಲು ಕಲಿಯಿರಿ ಎಂದರು.
೨. ‘ಒಮ್ಮೆ ಒಳಗಿನ ಆನಂದದ ಅನುಭೂತಿ ಬಂದರೆ, ನಿನ್ನ ತಂದೆ ಎಲ್ಲೇ ಇದ್ದರೂ ಆನಂದದಿಂದ ಇರಬಹುದು, ಎಂದು ಪ.ಪೂ. ಗುರುದೇವರು ಸಾಧಕನ ಮಗಳಿಗೆ ಹೇಳುವುದು
ಪ.ಪೂ. ಗುರುದೇವರ ಒಂದು ಭೇಟಿಯಲ್ಲಿ ನನ್ನ ಮಗಳು ಪ.ಪೂ. ಗುರುದೇವರಿಗೆ, “ಈಗ ಗೋವಾದಲ್ಲಿಯೇ ನಾವು ಮನೆ ಮಾಡಿದ್ದೇವೆ. ಈಗ ತಾಯಿ-ತಂದೆ ಗೋವಾದಲ್ಲಿಯೇ ಇರಬಹುದೇ ? ಎಂದು ಕೇಳಿದಳು. ಆಗ ಅವರು, “ನಿನ್ನ ತಂದೆಗೆ ಒಳಗಿನಿಂದ ಆನಂದದ ಅನುಭೂತಿ ಬಂದರೆ, ಅವರು ಎಲ್ಲಿದ್ದರೂ, ಆನಂದದಿಂದ ಇರಬಹುದು. ಇದರಿಂದ ‘ದೇವದ ಆಶ್ರಮದಲ್ಲಿರಬೇಕೋ ಅಥವಾ ರಾಮನಾಥಿ ಆಶ್ರಮದಲ್ಲಿರಬೇಕೋ ?, ಎಂಬ ಪ್ರಶ್ನೆಯೇ ಬರುವುದಿಲ್ಲ. ಅದಕ್ಕಾಗಿ ನಾನು ಪ್ರಯತ್ನಿಸುತ್ತಿದ್ದೇನೆ ಎಂದು ಹೇಳಿದರು.
೩. ಸಂತರು ಮಾಡಿದ ಸಹಾಯ
೩ ಅ. ‘ನೀವು ನಿಮ್ಮ ಎಲ್ಲ ಸಮಸ್ಯೆಗಳನ್ನು ಮುಂದೆ ಹೇಳುತ್ತಿರಬೇಕು, ಎಂದು ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರು ಹೇಳುವುದು ಮತ್ತು ‘ಒತ್ತಡ ಮಾಡಿಕೊಳ್ಳುವುದು, ಈ ಸ್ವಭಾವದೋಷದಿಂದಾಗಿ ನನ್ನ ಮುಖದ ಮೇಲೆ ಯಾವತ್ತೂ ಆನಂದ ಕಾಣಿಸುವುದಿಲ್ಲ, ಎಂಬುದು ನನ್ನ ಗಮನಕ್ಕೆ ಬರುವುದು : ಈ ಮೊದಲು ನನಗೆ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು, “ಆಶ್ರಮವೆಂದರೆ ಪ್ರತ್ಯಕ್ಷ ಶ್ರೀವಿಷ್ಣುಸ್ವರೂಪ ಶ್ರೀ ಗುರುಗಳ ವಿಷ್ಣುಲೋಕವಾಗಿದೆ. ಇಲ್ಲಿ ‘ಯಾವುದೇ ಸಮಸ್ಯೆಗೆ ಪರಿಹಾರ ಸಿಗಲಿಲ್ಲ ಎಂದು ಯಾವಾಗಲೂ ಆಗುವುದೇ ಇಲ್ಲ ನೀವು ನಿಮ್ಮ ಎಲ್ಲ ಸಮಸ್ಯೆಗಳನ್ನು ಮುಂದೆ ಹೇಳುತ್ತಿರಬೇಕು ಎಂದು ಹೇಳಿದರು. ಆಗ ‘ಒತ್ತಡವನ್ನು ಮಾಡಿಕೊಳ್ಳುವುದು, ಇದು ನನ್ನ ಸ್ವಭಾವದೋಷವಾಗಿದ್ದು ಅದನ್ನು ಹೋಗಲಾಡಿಸಲು ನನಗೆ ಪ್ರಯತ್ನ ಮಾಡಬೇಕಾಗುವುದು. ಅದಕ್ಕಾಗಿ ಸಂತರ ಸಂಕಲ್ಪವೂ ಆಗಿದೆ, ಎಂಬುದು ನನ್ನ ಗಮನಕ್ಕೆ ಬಂದಿತು. ಒತ್ತಡವನ್ನು ಮಾಡಿಕೊಳ್ಳುವುದರಿಂದಲೇ ನನ್ನ ಮುಖದ ಮೇಲೆ ಎಂದಿಗೂ ಆನಂದ ಕಾಣಿಸುವುದಿಲ್ಲ. ‘ನನ್ನ ಮುಖ ಯಾವಾಗಲೂ ತೊಂದರೆದಾಯಕ ಕಾಣಿಸುತ್ತದೆ ಮತ್ತು ನನ್ನ ವರ್ತನೆ ಮತ್ತು ನನ್ನ ಮಾತುಗಳಿಂದ ತೊಂದರೆಯು ವ್ಯಕ್ತವಾಗುತ್ತದೆ, ಎಂದು ನನ್ನ ಗಮನಕ್ಕೆ ಬಂತು. ಒತ್ತಡದಿಂದ ನನ್ನ ಮನಸ್ಸು ಅಸ್ಥಿರವಾಗಿ ನಾನು ಎಂದೂ ಆನಂದ ಮತ್ತು ಶಾಂತಿಯನ್ನು ಅನುಭವಿಸುತ್ತಿರಲಿಲ್ಲ ಹಾಗೂ ಸಾಧಕರಿಗೂ ಎಂದಿಗೂ ಆನಂದವನ್ನು ಕೊಡುತ್ತಿರಲಿಲ್ಲ.
೩ ಆ. ಪೂ. (ಸೌ.) ಅಶ್ವಿನಿ ಪವಾರ ಇವರು ಪ್ರತಿಯೊಂದು ಕೃತಿ ಯನ್ನು ಕೇಳಿಕೊಂಡು ಮಾಡುವುದರ ಅಭ್ಯಾಸವನ್ನು ಮಾಡಿಸುವುದು : ಕೆಲವು ವರ್ಷಗಳ ಹಿಂದೆ ಪೂ. ಅಶ್ವಿನಿಅಕ್ಕ (ಪೂ. (ಸೌ.) ಅಶ್ವಿನಿ ಪವಾರ) ಇವರೊಂದಿಗೆ ನನಗೆ ಪ.ಪೂ. ಗುರುದೇವರ ಸತ್ಸಂಗ ಲಭಿಸಿತ್ತು. ಆಗ ನಾನು ಪ.ಪೂ. ಗುರುದೇವರಿಗೆ, “ಪೂ. ಅಶ್ವಿನಿಅಕ್ಕನವರ ಪ್ರಯತ್ನಗಳಿಂದಲೇ ನನ್ನಲ್ಲಿ ಬದಲಾವಣೆಗಳಾಗಿವೆ, ಅವರು ನನಗೆ ಪ್ರತಿಯೊಂದು ಕೃತಿಯನ್ನು ಕೇಳಿಕೊಂಡು ಮಾಡುವ ಅಭ್ಯಾಸವನ್ನು ಮಾಡಿಸಿದ್ದಾರೆ ಎಂದು ಹೇಳಿದ್ದೆ. ಆಗ ಪ.ಪೂ. ಗುರುದೇವರು ನನಗೆ, “ನಿಮ್ಮ ವಿಚಾರಪ್ರಕ್ರಿಯೆಯು ಪೂ. ಅಶ್ವಿನಿಅಕ್ಕನವರಂತೆ ಆಗಬೇಕು, ಅದಕ್ಕಾಗಿ ಪ್ರಯತ್ನಿಸಿ ಎಂದು ಹೇಳಿದ್ದರು.
೩ ಆ ೧. ನನ್ನಲ್ಲಿರುವ ಅಹಂನಿಂದಾಗಿ ಪ.ಪೂ. ಗುರುದೇವರ ಆಜ್ಞೆಯ ಕಡೆಗೆ ನಿರ್ಲಕ್ಷ ಮಾಡುವುದು : ನನ್ನಲ್ಲಿನ ಅಹಂನಿಂದಾಗಿ ಈ ಮೊದಲು ನನಗೆ ‘ನಾನು ಆಧುನಿಕ ವೈದ್ಯನಾಗಿದ್ದೇನೆ. ನನಗೆ ವೈದ್ಯಕೀಯ ಕ್ಷೇತ್ರದಲ್ಲಿನ ಜ್ಞಾನ ಮತ್ತು ಇಷ್ಟು ವರ್ಷಗಳ ಅನುಭವವಿದೆ. ಅದರಲ್ಲಿ ಪೂ. ಅಶ್ವಿನಿಅಕ್ಕನವರಿಗೆ ಏನು ಕೇಳುವುದು ? ತದ್ವಿರುದ್ಧ ಅವರೇ ನನ್ನನ್ನು ತಿಳಿದುಕೊಳ್ಳಬೇಕು, ಎಂದೆನಿಸುತ್ತಿರುವುದರಿಂದ ನಾನು ಪ.ಪೂ. ಗುರುದೇವರ ಈ ಆಜ್ಞೆಯ ಕಡೆಗೆ ನಿರ್ಲಕ್ಷ ಮಾಡುತ್ತಿದ್ದೆ. ಸುಮಾರು ೪ ವರ್ಷಗಳ ನಂತರ ಈ ವಿಷಯವು ನನ್ನ ಗಮನಕ್ಕೆ ಬಂದಿತು. ೪ ವರ್ಷಗಳ ಹಿಂದೆಯೇ ಗುರುದೇವರು ನನ್ನಲ್ಲಿ ಈ ವಿಷಯದ ಬೀಜವನ್ನು ಬಿತ್ತಿದ್ದರು. ‘ಇಂದಲ್ಲದಿದ್ದರೆ, ಯಾವಾಗಲಾದರೂ ಅದು ನನ್ನ ಗಮನಕ್ಕೆ ಬರುವುದು, ಎಂದು ಅವರು ಸಂಯಮದಿಂದ ನಿರಂತರವಾಗಿ ಪ್ರಯತ್ನಿಸುತ್ತಿದ್ದರು. ಇಂತಹ ಶ್ರೀ ಗುರುಗಳ ಶ್ರೇಷ್ಠತೆಯನ್ನು ಶಬ್ದಗಳಲ್ಲಿ ವ್ಯಕ್ತಪಡಿಸಲು ಬರುವುದಿಲ್ಲ.
೩ ಇ. ದೇವದ ಆಶ್ರಮಕ್ಕೆ ಮರಳಿ ಬಂದನಂತರ ಸದ್ಗುರು ರಾಜೇಂದ್ರ ಶಿಂದೆಯವರು ಪರಿಸ್ಥಿತಿಯನ್ನು ಸ್ವೀಕರಿಸಲು ಹೇಳುವುದು, ಸಮಸ್ಯೆಗಳನ್ನು ಮುಂದೆ ಮಂಡಿಸಲು ಕಲಿಸುವುದು ಮತ್ತು ಇದರಿಂದಾಗಿ ಒತ್ತಡ ಕಡಿಮೆ ಆಗತೊಡಗುವುದು : ಒಮ್ಮೆ ಚಿಕಿತ್ಸಾಲಯದಲ್ಲಿನ ಸಹಸಾಧಕನು ಕೆಲವು ಕಾರಣಗಳಿಂದ ಚಿಕಿತ್ಸಾಲಯಕ್ಕೆ ಬರದೇ ಇರುವುದರಿಂದ ನನಗೆ ಒತ್ತಡ ಬಂದಿತು. ನಾನು ವರದಿ ಸತ್ಸಂಗದಲ್ಲಿ ಸದ್ಗುರು ರಾಜೇಂದ್ರದಾದಾರವರಿಗೆ (ಸದ್ಗುರು ರಾಜೇಂದ್ರ ಶಿಂದೆಯವರಿಗೆ) ಹಾಗೆ ಹೇಳಿದೆ. ಅವರು ನನಗೆ ‘ಆ ಪರಿಸ್ಥಿತಿಯನ್ನು ಸ್ವೀಕರಿಸಿ, ಎಂದು ಹೇಳಿದರು. ಆಗ ‘ದೇವರೇ ನನ್ನ ಸ್ವಭಾವದೋಷವನ್ನು ತೆಗೆದುಹಾಕಲು ಈ ಪರಿಸ್ಥಿತಿಯನ್ನು ನಿರ್ಮಿಸಿದ್ದಾನೆ, ಎಂಬುದು ನನ್ನ ಗಮನಕ್ಕೆ ಬಂದಿತು ಮತ್ತು ನಾನು ಆ ದೃಷ್ಟಿಯಿಂದ ಪ್ರಯತ್ನ ಮಾಡತೊಡಗಿದೆ. ನಾನು ಪೂ. ಅಶ್ವಿನಿಅಕ್ಕನವರಿಗೆ ನನ್ನ ಸಮಸ್ಯೆಗಳನ್ನು ಹೇಳತೊಡಗಿದೆ, ಇದರಿಂದ ನನ್ನ ಮನಸ್ಸಿನ ಮೇಲಿನ ಒತ್ತಡವು ಕಡಿಮೆ ಆಗುತ್ತಾಹೋಯಿತು. ನನಗೆ ಪೂ. ಅಶ್ವಿನಿಅಕ್ಕನವರಿಂದ ‘ಸಮಸ್ಯೆಗಳನ್ನು ಹೇಗೆ ಪರಿಹರಿಸಬೇಕು ?, ಎಂಬುದು ಕಲಿಯಲು ಸಿಕ್ಕಿತು.
೪. ಪ.ಪೂ. ಗುರುದೇವರ ಸರ್ವಜ್ಞತೆಯನ್ನು ತೋರಿಸುವ ಹಿಂದಿನ ಕೆಲವು ಪ್ರಸಂಗಗಳು
ಈ ಪ್ರಸಂಗದ ಮೇಲಿನಿಂದ ನನಗೆ ‘ಒತ್ತಡ ಮಾಡಿಕೊಳ್ಳುವುದು ಈ ಸ್ವಭಾವದೋಷದ ಬಗ್ಗೆ ಪ.ಪೂ. ಗುರುದೇವರು ನನಗೆ ಈ ಮೊದಲೇ ಹೇಳಿದ್ದರು, ಈ ಸಂದರ್ಭದಲ್ಲಿನ ಕೆಲವು ಹಳೆಯ ಪ್ರಸಂಗಗಳು ನೆನಪಾದವು. ಇದರಿಂದ ಅವರ ಸರ್ವಜ್ಞತೆ ಮತ್ತು ತ್ರಿಕಾಲಜ್ಞಾನಿ ಅವಸ್ಥೆಯು ನನ್ನ ಗಮನಕ್ಕೆ ಬಂದಿತು.
೪ ಅ. ಒಂದು ಬಹಿರಂಗ ಪ್ರವಚನದ ಸಮಯದಲ್ಲಿ ‘ಈ ಸಲ ನಿಮ್ಮ ಬಳಿ ಆಯೋಜನೆಯ ಸೇವೆ ಇಲ್ಲದಿರುವುದರಿಂದ ನಿಮಗೆ ಒತ್ತಡವಾಗಲಿಲ್ಲ. ಆದ್ದರಿಂದ ನಿಮಗೆ ಸಭೆಯ ಆನಂದವನ್ನು ಅನುಭವಿಸಲು ಸಾಧ್ಯವಾಯಿತು, ಎಂದು ಪ.ಪೂ. ಗುರುದೇವರು ಹೇಳುವುದು : ೧೯೯೭ ರಲ್ಲಿ ನನಗೆ ಪುಣೆ ಜಿಲ್ಲೆಯಲ್ಲಿ ಪ.ಪೂ. ಗುರುದೇವರ ಒಂದು ಬಹಿರಂಗ ಪ್ರವಚನದ ಆಯೋಜನೆಯ ಜವಾಬ್ದಾರಿಯು ಸಿಕ್ಕಿತ್ತು. ಆ ಪ್ರವಚನದ ನಂತರ ಜಿಲ್ಲೆಯಲ್ಲಿನ ಬೇರೆ ಸ್ಥಳದಲ್ಲಿ ಇನ್ನೊಂದು ಪ್ರವಚನವಿತ್ತು. ಆ ಪ್ರವಚನಕ್ಕೆ ಸಮಾಜದಲ್ಲಿನ ಬಹಳಷ್ಟು ಜನರ ಉಪಸ್ಥಿತಿ ಇತ್ತು. ಅದರ ಆಯೋಜನೆಯು ಬೇರೆ ಸಾಧಕನ ಬಳಿಯಿತ್ತು. ಆ ಪ್ರವಚನ ಮುಗಿದ ನಂತರ ನಾನು ಪ.ಪೂ. ಗುರುದೇವರಿಗೆ, “ಇಂದಿನ ಕಾರ್ಯಕ್ರಮ ತುಂಬಾ ಚೆನ್ನಾಗಿ ಆಯಿತು. ಆನಂದ ಸಿಕ್ಕಿತು ಎಂದು ಹೇಳಿದೆನು. ಆಗ ಪ.ಪೂ. ಗುರುದೇವರು ನನಗೆ, “ಹೌದು. ಇಂದು ನಿಮಗೆ ಯಾವುದೇ ಒತ್ತಡವಾಗಲಿಲ್ಲವಲ್ಲ; ಆದ್ದರಿಂದ ನಿಮಗೆ ಆನಂದ ಸಿಕ್ಕಿತು ಎಂದು ಹೇಳಿದರು. ನಿಜವಾಗಿಯೂ ಆ ಸಮಯದಲ್ಲಿಯೇ ಅವರು ನನಗೆ ‘ನನ್ನಲ್ಲಿನ ‘ಒತ್ತಡ ಮಾಡಿಕೊಳ್ಳುವುದು ಈ ಸ್ವಭಾವದೋಷದ ಬಗ್ಗೆ ಹೇಳಿದ್ದರು, ಎಂಬುದು ಈಗ ನನ್ನ ಗಮನಕ್ಕೆ ಬಂದಿತು.
೪ ಆ. ‘ಒತ್ತಡ ಮಾಡಿಕೊಳ್ಳುವುದು, ಈ ಸ್ವಭಾವದೋಷದಿಂದಾಗಿ ಬಹಳಷ್ಟು ಸೇವೆಯನ್ನು ಮಾಡಿದರೂ ಆನಂದ ಸಿಗದಿರುವುದು, ಇದನ್ನು ಪ.ಪೂ. ಗುರುದೇವರು ಗಮನಕ್ಕೆ ತಂದುಕೊಡುವುದು : ಆ ಕಾಲಾವಧಿಯಲ್ಲಿ ನಾನು ತುಂಬಾ ಶ್ರಮಪಟ್ಟು ಸೇವೆಯನ್ನು ಮಾಡುತ್ತಿದೆ. ಪ.ಪೂ. ಗುರುದೇವರು ಓರ್ವ ಸಾಧಕನಿಗೆ, “ಡಾ. ಕುಲಕರ್ಣಿ ಎಷ್ಟೊಂದು ಸೇವೆಯನ್ನು ಮಾಡುತ್ತಾರೆ; ಆದರೂ ಅವರ ಮುಖದಲ್ಲಿ ಆನಂದ ಏಕೆ ಕಾಣಿಸುವುದಿಲ್ಲ ?, ಎಂದು ಕೇಳಿದರು. ಪ.ಪೂ. ಡಾಕ್ಟರರು ನನ್ನ ವ್ಯಕ್ತಿತ್ವ (ಗುಣ ಮತ್ತು ಸ್ವಭಾವದೋಷಗಳನ್ನು)ವನ್ನು ಗುರುತಿಸಿ ಯೋಗ್ಯ ದೃಷ್ಟಿಕೋನದ ಬೀಜವನ್ನು ನನ್ನ ಅಂತರ್ಮನದಲ್ಲಿ ಬಿತ್ತಿದ್ದರು. ಅವರು ನನ್ನ ‘ಒತ್ತಡ ಮಾಡಿಕೊಳ್ಳುವುದು ಇದೇ ಸ್ವಭಾವ ದೋಷದ ಬಗ್ಗೆ ಅನೇಕ ಸಂತರ ಮಾಧ್ಯಮದಿಂದ ನನಗೆ ಮಾರ್ಗದರ್ಶನ ಮಾಡಿದರು.
೪ ಇ. ‘ಸಾಧಕರ ಸಮಸ್ಯೆಗಳನ್ನು ಪರಿಹರಿಸುವುದು ಇದು ಶ್ರೇಷ್ಠ ಮಟ್ಟದ ಸಾಧನೆಯಾಗಿದೆ, ಎಂದು ಪ.ಪೂ. ಗುರುದೇವರು ಹೇಳುವುದು : ೧೯೯೯ ರಲ್ಲಿ ಒಮ್ಮೆ ನಾನು ಪ.ಪೂ. ಗುರುದೇವರೊಂದಿಗೆ ಪ್ರವಾಸದಲ್ಲಿದ್ದೆ. ಆಗ ಅವರು ನನಗೆ ಕೆಲವು ಜಿಲ್ಲೆಗಳಲ್ಲಿನ ಸಮಸ್ಯೆಗಳ ಕುರಿತು ಹೇಳಿದರು. ಅವರು, “ಸಾಧಕರ ಸಮಸ್ಯೆಗಳನ್ನು ಪರಿಹರಿಸುವುದು, ಶ್ರೇಷ್ಠ ಮಟ್ಟದ ಸಾಧನೆಯಾಗಿದೆ ಎಂದು ಹೇಳಿದರು.
ಆಗ ಅಂತರ್ಮುಖವಾಗಿ ನನ್ನಿಂದಲೂ ಚಿಂತನೆ ಆಯಿತು.
೪ ಈ. ಪ.ಪೂ. ಗುರುದೇವರು ‘ಸಾಧಕನ ಪ್ರಗತಿಯು ಯಾವ ಸೇವೆಯ ಮಾಧ್ಯಮದಿಂದ ಆಗಲಿದೆ ?, ಎಂಬುದನ್ನು ಗುರುತಿಸಿ ಯೋಗ್ಯ ಸೇವೆಯನ್ನು ಕೊಡುವುದು
೪ ಈ ೧. ಪುನಃ ಪುನಃ ದೇವದ ಆಶ್ರಮದಲ್ಲಿ ವೈದ್ಯಕೀಯ ಸೇವೆಗಾಗಿ ಕಳುಹಿಸುವುದು : ವೈದ್ಯಕೀಯ ಸೇವೆಯ ಹೊರತು ನಾನು ಮರಾಠಿ ಗ್ರಂಥ, ಧರ್ಮಸತ್ಸಂಗ ಮತ್ತು ಹಿಂದಿ ಪಾಕ್ಷಿಕಕ್ಕಾಗಿ ಹಿಂದಿ ಭಾಷೆಯಲ್ಲಿ ಅನುವಾದ ಮಾಡುವುದು ಇತ್ಯಾದಿ ಸೇವೆ ಗಳನ್ನು ಮಾಡುತ್ತಿದ್ದೆ. ಆ ನಿಮಿತ್ತದಿಂದ ನನಗೆ ಶಾಶ್ವತವಾಗಿ ರಾಮನಾಥಿ ಆಶ್ರಮದಲ್ಲಿ ಬರಲು ಹೇಳಿದ್ದರು. ಹೀಗಿದ್ದರೂ ಕೆಲವೊಮ್ಮೆ ಎಂತಹ ಪರಿಸ್ಥಿತಿ ಉತ್ಪನ್ನವಾಗುತ್ತಿತ್ತೆಂದರೆ, ನನಗೆ ಪುನಃ ದೇವದ ಆಶ್ರಮದಲ್ಲಿನ ಚಿಕಿತ್ಸಾಲಯದ ಸೇವೆಗಾಗಿ ಬರಬೇಕಾಗುತ್ತಿತ್ತು. ಆಗ ‘ನಾನು ಸಾಧನೆ ಮಾಡಲು ವೈದ್ಯಕೀಯ ವ್ಯವಸಾಯವನ್ನು ಬಿಟ್ಟರೂ ಪ.ಪೂ. ಗುರುದೇವರು ನನ್ನನ್ನು ಪುನಃ ಪುನಃ ವೈದ್ಯಕೀಯ ಸೇವೆಗಾಗಿಯೇ ಏಕೆ ಕಳುಹಿಸುತ್ತಾರೆ ?, ಎಂದು ನನ್ನ ಮನಸ್ಸಿನಲ್ಲಿ ಪ್ರಶ್ನೆ ಬರುತ್ತಿತ್ತು. ಅವರು ಪ್ರತಿಸಲ ನನಗೆ, ‘ಡಾಕ್ಟರ್, ದೇವದ ಆಶ್ರಮಕ್ಕೆ ಹೋಗಿರಿ. ಅಲ್ಲಿ ನಿಮ್ಮ ರೋಗಿಗಳು ನಿಮ್ಮ ದಾರಿಯನ್ನು ಕಾಯುತ್ತಿದ್ದಾರೆ, ಎಂದು ಹೇಳುತ್ತಿದ್ದರು. ನಾನು ದೇವದ ಆಶ್ರಮವನ್ನು ತಲುಪಿದ ನಂತರ ಪ.ಪೂ. ಗುರುದೇವರು ಅಲ್ಲಿನ ಸಂತರಿಗೆ, “ಡಾ. ಕುಲಕರ್ಣಿ ದೇವದ ಆಶ್ರಮವನ್ನು ತಲುಪಿದರಾ ? ಒಳ್ಳೆಯದಾಯಿತು, ಈಗ ನನ್ನ ಕಾಳಜಿ ಮುಗಿಯಿತು ಎಂದು ಹೇಳುತ್ತಿದ್ದರು.
೪ ಈ ೨. ಸಾಧಕನಲ್ಲಿನ ಅಹಂಭಾವದಿಂದಾಗಿ ಅವನಿಗೆ ಪ.ಪೂ. ಗುರುದೇವರ ಮಾತುಗಳ ಹಿಂದಿನ ಕಾರಣವು ತಿಳಿಯದಿರುವುದು, ಆಗ ಸದ್ಗುರು ರಾಜೇಂದ್ರದಾದಾರವರು ‘ವೈದ್ಯಕೀಯ ಸೇವೆ ಯಿಂದಲೇ ನಿಮ್ಮ ಸಾಧನೆ ಆಗಲಿದೆ, ಎಂದು ಅದರ ಭಾವಾರ್ಥ ವನ್ನು ಹೇಳುವುದು : ನನ್ನ ಮನಸ್ಸಿನಲ್ಲಿ ‘ನನ್ನಲ್ಲಿ ಕೌಶಲ್ಯವಿದೆ. ನಾನು ಉತ್ತಮ ಆಧುನಿಕ ವೈದ್ಯನಾಗಿದ್ದೇನೆ; ಆದ್ದರಿಂದ ಪ.ಪೂ. ಗುರುದೇವರು ನನಗೆ ಪುನಃ ಪುನಃ ವೈದ್ಯಕೀಯ ಸೇವೆಯನ್ನು ಮಾಡಲು ದೇವದ ಆಶ್ರಮಕ್ಕೆ ಹೋಗಲು ಹೇಳುತ್ತಾರೆ, ಎಂಬ ಅಹಂಯುಕ್ತ ವಿಚಾರವೂ ಬರುತ್ತಿತ್ತು. ಒಮ್ಮೆ ಸದ್ಗುರು ರಾಜೇಂದ್ರದಾದಾರವರ ವ್ಯಷ್ಟಿ ವರದಿಯಲ್ಲಿ ನಾನು ಈ ಅಂಶವನ್ನು ಅವರಿಗೆ ಹೇಳಿದೆ. ಆಗ ಅವರು ನನಗೆ ಅದರ ಕಾರಣ ವನ್ನು ತಿಳಿಸಿ ಹೇಳಿದರು. “ನೀವು ಒಳ್ಳೆಯ ವೈದ್ಯರಾಗಿರುವಿರಿ, ಇದಕ್ಕಿಂತ ಹೆಚ್ಚು ‘ವೈದ್ಯಕೀಯ ಸೇವೆಯಿಂದಲೇ ನಿಮ್ಮ ಸಾಧನೆಯಾಗಲಿದೆ, ಎಂಬುದು ಗುರುದೇವರಿಗೆ ಗೊತ್ತಿದೆ; ಆದ್ದರಿಂದ ನೀವು ದೇವದ ಆಶ್ರಮಕ್ಕೆ ಬಂದನಂತರ ಅವರು ‘ನನ್ನ ಕಾಳಜಿ ಮುಗಿಯಿತು, ಎಂದು ಹೇಳುತ್ತಾರೆ. ಪ.ಪೂ. ಗುರುದೇವರಿಗೆ ‘ಉತ್ತಮ ವೈದ್ಯ ಅಲ್ಲ, ‘ಉತ್ತಮ ಸಾಧಕ ಬೇಕಾಗಿದ್ದಾನೆ ಎಂದು ಸದ್ಗುರು ರಾಜೇಂದ್ರದಾದಾರವರು ನನಗೆ ಈ ಭಾವಾರ್ಥವನ್ನು ತಿಳಿಸಿ ಹೇಳಿದ್ದರಿಂದ ನನಗೆ ಈ ಸೇವೆಯನ್ನು ಮನಃಪೂರ್ವಕವಾಗಿ ಸ್ವೀಕರಿಸಲು ಸಾಧ್ಯವಾಯಿತು.
೫. ಪ.ಪೂ. ಗುರುದೇವರ ಅರಿವಾದ ಶ್ರೇಷ್ಠತೆ !
೫ ಅ. ಪ.ಪೂ. ಗುರುದೇವರ ಪ್ರತಿಯೊಂದು ವಾಕ್ಯವು ಬ್ರಹ್ಮವಾಕ್ಯವೇ ಆಗಿರುವುದು : ಪ.ಪೂ. ಗುರುದೇವರ ಪ್ರತಿಯೊಂದು ವಾಕ್ಯವು ಬ್ರಹ್ಮವಾಕ್ಯವೇ ಆಗಿರುತ್ತದೆ. ಮುಂದೆ ಅದರಂತೆಯೇ ಘಟಿಸುತ್ತದೆ. ಅದು ಅವರ ಸಂಕಲ್ಪವಾಗಿರುತ್ತದೆ. ಪ.ಪೂ. ಗುರುದೇವರಲ್ಲಿ ಸಾಧಕರ ಸಾಧನೆಯಲ್ಲಿನ ಅಡಚಣೆಗಳನ್ನು ಬಿಡಿಸುವ ತುಂಬಾ ತಳಮಳವಿದೆ. ಯಾವಾಗ ಅವರು ಸಾಧಕರಿಗೆ ಮಾರ್ಗದರ್ಶನ ಮಾಡುತ್ತಾರೆಯೋ, ಆಗ ಆವರಣ ಅಥವಾ ನಮ್ಮ ಅಲ್ಪಬುದ್ಧಿಯಿಂದ ನಮಗೆ ಅವರು ಹೇಳಿದ್ದು ತಿಳಿಯುವುದಿಲ್ಲ; ಆದರೆ ಅದಕ್ಕನುಸಾರ ಪ್ರಯತ್ನಿಸಿದಾಗ ಕೆಲವು ಕಾಲಾವಧಿಯ ನಂತರ ಆ ವಾಕ್ಯಗಳ ಅನುಭವದಿಂದ ಅವುಗಳ ಭಾವಾರ್ಥ ತಿಳಿಯುತ್ತದೆ.
೫ ಆ. ಪ.ಪೂ. ಗುರುದೇವರು ಸಾಧಕನಲ್ಲಿನ ಸ್ವಭಾವದೋಷ ಮತ್ತು ಅಹಂ ಕಡಿಮೆ ಮಾಡಲು ಸಹಾಯ ಮಾಡಿ ಅವನ ಸಾಧನೆಯ ಹಾನಿಯನ್ನು ತಡೆಯುವುದು : ಪ.ಪೂ. ಗುರುದೇವರು ನನ್ನ ‘ಒತ್ತಡ ತೆಗೆದುಕೊಳ್ಳುವುದು ಈ ಸ್ವಭಾವದೋಷದಿಂದಾಗಿ ನಿರ್ಮಾಣವಾಗುವ ಒತ್ತಡ, ನಿರಾಶೆ, ನಕಾರಾತ್ಮಕತೆ, ಭಯ ಮತ್ತು ಸಮಷ್ಟಿಯ ಮೇಲಾಗುವ ಅದರ ಪರಿಣಾಮ ಇವುಗಳಿಂದ ನನ್ನ ಸಾಧನೆಯಲ್ಲಿ ಆಗುವ ಹಾನಿಯನ್ನು ದೂರಗೊಳಿಸಿದರು.
೫ ಇ. ಪರಿಸ್ಥಿತಿಯನ್ನುಂಟು ಮಾಡಿ ಕಲಿಸುವುದು : ದೇವರು (ಪ.ಪೂ. ಗುರುದೇವರು) ಪರಿಸ್ಥಿತಿಯನ್ನುಂಟು ಮಾಡಿ ನನ್ನನ್ನು ‘ಕೇಳುವುದು, ಸ್ವೀಕರಿಸುವುದು ಮತ್ತು ಕಲಿಯುವುದು ಈ ಸ್ಥಿತಿಗೆ ತಂದರು. ‘ಶಿಷ್ಯನಿಗೆ ಬಹಳಷ್ಟು ಸೇವೆಯನ್ನು ಕೊಟ್ಟು ಮತ್ತು ವಿವಿಧ ಪ್ರಸಂಗಗಳ ಮಾಧ್ಯಮದಿಂದ ಶ್ರೀ ಗುರುಗಳು ಹೇಗೆ ರೂಪಿಸುತ್ತಾರೆ ?, ನನಗೆ ಇದರ ಅನುಭವ ಬಂದಿತು.
೬. ಕೃತಜ್ಞತೆ
ಪ.ಪೂ. ಗುರುದೇವರ ಚರಣಗಳಲ್ಲಿ ಕೃತಜ್ಞತೆಯನ್ನು ವ್ಯಕ್ತ ಪಡಿಸಲು ಶಬ್ದಗಳೂ ಕಡಿಮೆ ಬೀಳುತ್ತಿವೆ. ಅವರು ನನಗೆ ‘ಈ ಕೃತಜ್ಞತೆಯನ್ನು ಅನುಭವಿಸಲು ಕೊಟ್ಟರು, ಇದೇ ನನ್ನ ಪರಮ ಭಾಗ್ಯವಾಗಿದೆ. ಈಗ ನನಗೆ ಒತ್ತಡರಹಿತ ಸೇವೆ ಮಾಡಲು ಬರುತ್ತಿದೆ. ನನಗೆ ಆನಂದ ಮತ್ತು ಶಾಂತಿಯನ್ನು ಅನುಭವಿಸಲು ಬರುತ್ತಿದೆ. ಇದಕ್ಕಾಗಿ ಪ.ಪೂ. ಗುರುದೇವರು, ಸದ್ಗುರು ರಾಜೇಂದ್ರದಾದಾ ಮತ್ತು ಪೂ. ಅಶ್ವಿನಿ ಅಕ್ಕನವರ ಚರಣಗಳಲ್ಲಿ ಕೃತಜ್ಞತೆಗಳು.
– ಆಧುನಿಕ ವೈದ್ಯ ಮಂಗಲಕುಮಾರ ಕುಲಕರ್ಣಿ, ಸನಾತನ ಆಶ್ರಮ, ದೇವದ, ಪನವೇಲ.(೧೪.೧೨.೨೦೨೧)