ಖರೀದಿಸಿದ ಖಾದ್ಯಪದಾರ್ಥಕ್ಕಿಂತ ಮನೆಯಲ್ಲಿ ತಯಾರಿಸಿದ ಪೌಷ್ಠಿಕ ಖಾದ್ಯಪದಾರ್ಥ ಸೇವಿಸಿ

ಆರೋಗ್ಯಶಾಲಿ ಜೀವನಕ್ಕಾಗಿ ಆಯುರ್ವೇದ

ಬಿಸ್ಕತ್ತು, ಶೇವು, ಚೂಡಾ, ಚಿಪ್ಸ್, ಖಾರಾಶೇವು ಇವುಗಳಂತಹ ಖರೀದಿಸಿದ ಎಣ್ಣೆಯುಕ್ತ ತಿಂಡಿಗಳನ್ನು ಕೆಲವೊಮ್ಮೆ ಮನೋರಂಜನೆಗಾಗಿ ಅಥವಾ ಸ್ವಲ್ಪ ಬದಲಾವಣೆ ಎಂದು ತಿನ್ನಲು ಏನು ತೊಂದರೆಯಿಲ್ಲ; ಆದರೆ ಇಂತಹ ಪದಾರ್ಥಗಳನ್ನು ನಿಯಮಿತವಾಗಿ ತಿನ್ನುವುದು ಆರೋಗ್ಯಕ್ಕೆ ಹಾನಿಕರವಾಗಿದೆ. ಅವುಗಳಲ್ಲಿ ಪಾಮಎಣ್ಣೆಯಂತಹ ಕೆಳಮಟ್ಟದ ಎಣ್ಣೆಯನ್ನು ಉಪಯೋಗಿಸಲಾಗುತ್ತದೆ. ಇದರಿಂದ ಶರೀರಕ್ಕೆ ಪೌಷ್ಟಿಕಾಂಶ ಸಿಗುವುದಿಲ್ಲ. ಇಂತಹ ಪದಾರ್ಥಗಳನ್ನು ನಿಯಮಿತವಾಗಿ ತಿಂದರೆ ಹಸಿವು ಕಡಿಮೆಯಾಗುವುದು, ಕೂದಲು ಉದುರುವಿಕೆ, ಕೂದಲು ಬಿಳಿಯಾಗುವಿಕೆ, ಮಲಬದ್ಧತೆ, ವಾತ ಇಂತಹ ತೊಂದರೆಗಳಾಗುವವು. ಈ ಪದಾರ್ಥಗಳ ಬದಲಾಗಿ ಹೆಸರುಕಾಳು, ಗೋದಿ ಹಿಟ್ಟು, ರವೆ, ಮೆಂತೆಕಾಳು ಇತ್ಯಾದಿಗಳಿಂದ ಮಾಡಿದ ಉಂಡೆಗಳು, ಶೇಂಗಾ ಚಿಕ್ಕಿ, ಎಳ್ಳುಬೆಲ್ಲ ಇಂತಹ ಪೌಷ್ಠಿಕ ಪದಾರ್ಥಗಳನ್ನು ತಿನ್ನಬೇಕು.’

– ವೈದ್ಯ ಮೇಘರಾಜ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ.

ಹಸಿ ಎಣ್ಣೆ ತಿನ್ನುವುದು ತಪ್ಪು

ವೈದ್ಯ ಮೇಘರಾಜ ಪರಾಡಕರ

‘ಹಸಿ ಖಾದ್ಯ ಎಣ್ಣೆಯು ಅಗ್ನಿಯನ್ನು (ಜೀರ್ಣಕ್ರಿಯೆ) ಮಂದಗೊಳಿಸುತ್ತದೆ. ಇಂತಹ ಎಣ್ಣೆಯನ್ನು ನಿಯಮಿತವಾಗಿ ತಿಂದರೆ ಬಾಯಿ ಹುಣ್ಣಾಗುವುದು, ಪಿತ್ತದ ತೊಂದರೆಯಾಗುವುದು, ಮೈಮೇಲೆ ಗುಳ್ಳೆಗಳು ಬರುವುದು, ಇವುಗಳಂತಹ ತೊಂದರೆಗಳಾಗ ಬಹುದು. ಆದ್ದರಿಂದ ಚಟ್ನಿಯ ಮೇಲೆ ಅಥವಾ ಅನ್ನದಲ್ಲಿ ಹಸಿ ಎಣ್ಣೆ ಹಾಕಿ ತಿನ್ನಬಾರದು. ಎಣ್ಣೆಯ ಹಸಿತನವನ್ನು ತೆಗೆಯಲು ಒಂದು ಲೀಟರ್ ಖಾದ್ಯ ಎಣ್ಣೆಯಲ್ಲಿ ಕಾಲು ಚಮಚ ದಷ್ಟು ಶುಂಠಿ, ಅರಿಸಿಣ, ಅಜ್ವಾನ ಅಥವಾ ಜೀರಿಗೆ ಇವುಗಳಲ್ಲಿ ಯಾವುದಾದರೊಂದು ಮಸಾಲೆ ಪದಾರ್ಥವನ್ನು ಹಾಕಿ ಈ ಎಣ್ಣೆಯನ್ನು ಬಿಸಿ ಮಾಡಿ ತಣ್ಣಗಾದ ನಂತರ ಸೋಸಿಡಬೇಕು. ಒಗ್ಗರಣೆಯಲ್ಲಿ ಹಸಿ ಖಾದ್ಯ ಎಣ್ಣೆಯನ್ನು ಉಪಯೋಗಿಸಬಹುದು; ಏಕೆಂದರೆ ಒಗ್ಗರಣೆಯಲ್ಲಿನ ಮಸಾಲೆಯ ಪದಾರ್ಥಗಳಿಂದ ಎಣ್ಣೆಯ ಹಸಿತನವು ಹೊರಟು ಹೋಗುತ್ತದೆ.

– ವೈದ್ಯ ಮೇಘರಾಜ ಪರಾಡಕರ