ಏಕರೂಪ ನಾಗರಿಕ ಸಂಹಿತೆಯ 15 ಅಂಶಗಳ ಕರಡನ್ನು ಸಿದ್ಧ ಗೊಳಿಸಿದ ಉತ್ತರಾಖಂಡ ಸರ್ಕಾರ!

  • ‘ನಿಕಾಹ್ ಹಲಾಲಾ’ ಮತ್ತು ‘ಇದ್ದತ್’ ಇವುಗಳ ಮೇಲೆ ನಿಷೇಧ

  • ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ ವಾಸಿಸುವ ದಂಪತಿಗಳಿಗೆ ನೋಂದಣಿ ಕಡ್ಡಾಯ

  • ಜನಸಂಖ್ಯಾ ನಿಯಂತ್ರಣ ಅಂಶವನ್ನು ಸಹ ಸೇರಿಸಲಾಗಿದೆ

ಡೆಹ್ರಾಡೂನ್ (ಉತ್ತರಾಖಂಡ) – ಕಳೆದ ವರ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ, ಮುಖ್ಯಮಂತ್ರಿ ಪುಷ್ಕರಸಿಂಹ ಧಾಮಿ ಅವರು ಚುನಾವಣಾ ಪೂರ್ವ ಭರವಸೆಯಂತೆ ಏಕರೂಪ ನಾಗರಿಕ ಸಂಹಿತೆಯತ್ತ ಹೆಜ್ಜೆ ಹಾಕಲು ಪ್ರಾರಂಭಿಸಿದ್ದರು. ಇದೀಗ ಉತ್ತರಾಖಂಡ ರಾಜ್ಯ ಸರ್ಕಾರವು ಏಕರೂಪ ನಾಗರಿಕ ಸಂಹಿತೆಯ 15 ಅಂಶಗಳ ಕರಡನ್ನು ಅನುಮೋದಿಸಿದೆ. ಕಾನೂನಿಗಾಗಿ ರಾಜ್ಯ ಸರ್ಕಾರ ರಚಿಸಿರುವ ಸಮಿತಿಯು ಕರಡು ಪ್ರತಿಯನ್ನು ಶೀಘ್ರವೇ ಸರಕಾರಕ್ಕೆ ಹಸ್ತಾಂತರಿಸಲಿದೆ.
ಮೂಲಗಳ ಪ್ರಕಾರ, ಕರಡು ಪ್ರತಿಯಲ್ಲಿ ಮದುವೆಗಳ ನೋಂದಣಿಯನ್ನು ಕಡ್ಡಾಯಗೊಳಿಸುವುದು, ಹಲಾಲಾ ಮತ್ತು ಇದ್ದತ್ ನಿಷೇಧ ಮತ್ತು ‘ಲಿವ್-ಇನ್ ಸಂಬಂಧಗಳ’ ನೋಂದಣಿ ಮಾಡುವುದು ಆವಶ್ಯಕ ಇತ್ಯಾದಿ ಶಿಫಾರಸುಗಳನ್ನು ಒಳಗೊಂಡಿದೆ. ಇದರೊಂದಿಗೆ ಜನಸಂಖ್ಯಾ ನಿಯಂತ್ರಣದ ಅಂಶವನ್ನೂ ಈ ಕರಡಿನಲ್ಲಿ ಸೇರಿಸಲಾಗಿದೆ.

ಏಕರೂಪ ನಾಗರಿಕ ಕಾನೂನಿನಲ್ಲಿ ಪ್ರಮುಖ ಅಂಶಗಳು!

1. ಹೆಣ್ಣು ಮಕ್ಕಳ ವಿವಾಹ ವಯೋಮಿತಿಯನ್ನು ಹೆಚ್ಚಿಸಲಾಗುವುದು.

2. ನೋಂದಣಿ ಇಲ್ಲದೆ ಯಾವುದೇ ಸರ್ಕಾರಿ ಯೋಜನೆಯ ಪ್ರಯೋಜನ ಪಡೆಯಲು ಸಾಧ್ಯವಾಗುವುದಿಲ್ಲ.

3. ತಲಾಖ್ ನೀಡಲು ಪತಿ ಮತ್ತು ಪತ್ನಿ ಇಬ್ಬರಿಗೂ ಸಮಾನ ಅಧಿಕಾರ ವಿರಲಿದೆ.

4. ಬಹುವಿವಾಹಕ್ಕೆ ನಿಷೇಧ ಹೇರಲಾಗುವುದು.

5. ಉತ್ತರಾಧಿಕಾರಿಯಾಗಿ ಪುತ್ರರೊಂದಿಗೆ,ಪುತ್ರಿಗೂ ಸಮಾನ ಅಧಿಕಾರ.

6. ಒಂದು ಮಗು ಅನಾಥವಾದರೆ ಆ ಮಗುವಿನ ಪೋಷಕರಾಗುವ ಪ್ರಕ್ರಿಯೆ ಸರಳಗೊಳಿಸಲಾಗುವುದು.

7. ಪತಿ ಮತ್ತು ಪತ್ನಿ ನಡುವೆ ಸಂಘರ್ಷ ನಡೆದರೆ ಅಜ್ಜ ಅಜ್ಜಿಯರಿಗೆ ಮೊಮ್ಮಕ್ಕಳ ಜವಾಬ್ದಾರಿ ಇರಲಿದೆ.

8. ಜನಸಂಖ್ಯೆ ನಿಯಂತ್ರಿಸಲು ಮಕ್ಕಳ ಸಂಖ್ಯೆಯ ಸಂದರ್ಭದಲ್ಲಿ ಕಾನೂನು ತರಲಾಗುವುದು.

‘ನಿಕಾಹ್ ಹಲಾಲಾ’ ಮತ್ತು ‘ಇದ್ದತ್’ ಎಂದರೇನು?

1. ‘ನಿಕಾಹ್ ಹಲಾಲಾ’ ಎಂದರೆ ವಿಚ್ಛೇದನದ ನಂತರ ಮೊದಲ ಪತಿಗೆ ಅವಳೊಂದಿಗೆ ಮರುಮದುವೆಯಾಗಲಿಕ್ಕಿದ್ದರೆ ಇದ್ದರೆ ಆ ಮಹಿಳೆ ಬೇರೊಬ್ಬರನ್ನು ಮದುವೆಯಾಗುವುದು ಮತ್ತು ಅವನೊಂದಿಗೆ ದೈಹಿಕ ಸಂಬಂಧವನ್ನು ಹೊಂದಬೇಕು ಅದರ ನಂತರ ಅವಳು ಆತನಿಗೆ ವಿಚ್ಛೇದನ ನೀಡಿ ತನ್ನ ಮೊದಲ ಪತಿಯನ್ನು ಮರುಮದುವೆಯಾಗುವ ರೂಢಿ!

2. ಇಸ್ಲಾಂ ಧರ್ಮದ ಪ್ರಕಾರ, ವಿಧವೆಯು ತನ್ನ ಗಂಡನ ಮರಣದ ನಂತರ ತಕ್ಷಣವೇ ಮರುಮದುವೆಯಾಗಲು ಸಾಧ್ಯವಿಲ್ಲ ನಿಗದಿತ ಅವಧಿಯ ನಂತರವೇ ಆಕೆ ಮದುವೆಯಾಗಬಹುದು. ಇದನ್ನು ಇದ್ದತ್ ಎನ್ನುತ್ತಾರೆ.

 

ಸಂಪಾದಕೀಯ ನಿಲುವು

ಉತ್ತರಾಖಂಡದ ಬಿಜೆಪಿ ಸರ್ಕಾರದ ಶ್ಲಾಘನೀಯ ನಿರ್ಧಾರ. ನಿಜವಾಗಿ ಪ್ರತಿಯೊಂದು ರಾಜ್ಯವೂ ಇಂತಹ ಕಾನೂನನ್ನು ಮಾಡುವ ಬದಲು ಕೇಂದ್ರ ಸರಕಾರವೇ ಈ ಕಾನೂನನ್ನು ರಾಷ್ಟ್ರಮಟ್ಟದಲ್ಲಿ ತರಬೇಕು ಎಂಬುದು ದೇಶಭಕ್ತರಿಗೆ ಅನಿಸುತ್ತದೆ!