ಪ್ರತಿಯೊಂದು ಸಮಯದಲ್ಲಿ ಹಿಂದೂಗಳ ಸಹಿಷ್ಣುತೆಯ ಪರೀಕ್ಷೆ ಏಕೆ ? ಸುದೈವದಿಂದ ಹಿಂದುಗಳು ಕಾನೂನು ಮೀರಿಲ್ಲ !

  • ‘ಆದಿಪುರುಷ’ ಸಿನೆಮಾದ ಕುರಿತು ಅಲಹಾಬಾದ ಉಚ್ಚ ನ್ಯಾಯಾಲಯದಿಂದ ನಿರ್ಮಾಪಕರಿಗೆ ತಪರಾಕಿ !

  • ಕೇಂದ್ರ ಚಲನಚಿತ್ರ ಪರೀಕ್ಷಾ ಮಂಡಳಿ ತಮ್ಮ ಜವಾಬ್ದಾರಿಯನ್ನು ನಿಭಾಯಿಸಿದ್ದಾರೆಯೆ ? – ಉಚ್ಚ ನ್ಯಾಯಾಲಯದ ಪ್ರಶ್ನೆ

ಲಕ್ಷ್ಮಣಪುರಿ (ಉತ್ತರಪ್ರದೇಶ) – ಪ್ರತಿಸಲ ಹಿಂದುಗಳ ಸಹಿಷ್ಣುತೆಯ ಪರೀಕ್ಷೆ ಏಕೆ ನಡೆಯುತ್ತದೆ ? ಸುದೈವದಿಂದ ಅವರು (ಹಿಂದುಗಳು) ಚಲನಚಿತ್ರ ವಿರೋಧಿಸುವಾಗ ಕಾನೂನು ಮೀರಲಿಲ್ಲ, ಇಂತಹ ಕಠೋರ ಪದದಲ್ಲಿ ‘ಆದಿಪುರುಷ’ ಚಲನಚಿತ್ರದ ಕುರಿತು ಅಲಹಾಬಾದ್ ಉಚ್ಚ ನ್ಯಾಯಾಲಯದ ಲಖನೌ ಖಂಡಪೀಠವು ಚಲನಚಿತ್ರದ ನಿರ್ಮಾಪಕರಿಗೆ ತಪರಾಕಿ ನೀಡಿದೆ. ಈ ಚಲನಚಿತ್ರದಲ್ಲಿನ ಆಕ್ಷೇಪಾರ್ಹ ಸಂಭಾಷಣೆಯ ಪ್ರಕರಣದ ಬಗ್ಗೆ ದಾಖಲಿಸಲಾಗಿರುವ ಅರ್ಜಿಯ ಕುರಿತು ವಿಚಾರಣೆ ಮಾಡುವಾಗ ನ್ಯಾಯಾಲಯವು ಈ ಅಭಿಪ್ರಾಯ ವ್ಯಕ್ತಪಡಿಸಿತು. ನ್ಯಾಯಾಲಯವು ಚಲನಚಿತ್ರದ ಸಹಲೇಖಕ ಮನೋಜ ಮುಂತಶೀರ ಶುಕ್ಲ ಇವರಿಗೆ ಈ ಮೊಕದ್ದಮೆಯ ಕಕ್ಷಿದಾರರೆಂದು ಇರಲು ಆದೇಶ ನೀಡಿದೆ. ಅವರಿಗೆ ನೋಟಿಸ್ ಜಾರಿಗೊಳಿಸುವುದರ ಜೊತೆಗೆ ಒಂದುವಾರದಲ್ಲಿ ಉತ್ತರ ನೀಡಲು ಹೇಳಲಾಗಿದೆ.

ನ್ಯಾಯಾಲಯವು ಖೇದ ವ್ಯಕ್ತಪಡಿಸುತ್ತಾ ನೀಡಿದ ಟಿಪ್ಪಣಿಗಳು !

೧. ಸಜ್ಜನರನ್ನು ಹತ್ತಿಕ್ಕುವುದು ಯೋಗ್ಯವೇ ? ಯಾವುದು ಒಳ್ಳೆಯದಾಗಿದೆ, ಅಂತಹ ಧರ್ಮದ ಬಗ್ಗೆ ಅವರ ಅನುಯಾಯಿಗಳು ಸಾಮಾಜಿಕ ಸುವ್ಯವಸ್ಥೆಗೆ ಯಾವುದೇ ಸಮಸ್ಯೆ ನಿರ್ಮಾಣ ಮಾಡಲಿಲ್ಲ. ನಾವು ಅವರಿಗೆ ಆಭಾರಿಯಾಗಿರಬೇಕು. ನಾವು ವಾರ್ತೆಯಲ್ಲಿ, ಕೆಲವು ಜನರು ಚಿತ್ರಮಂದಿರಕ್ಕೆ ಹೋಗಿ ಜನರು ಚಲನಚಿತ್ರ ನಿಲ್ಲಿಸಿದ್ದಾರೆ ಎಂಬುದು ನೋಡಿದ್ದೇವೆ. ಈ ಸಮಯದಲ್ಲಿ ಅವರು ಏನು ಬೇಕಿದ್ದರೂ ಮಾಡಬಹುದಾಗಿತ್ತು.

೨. ಯಾವ ರೀತಿ ಈ ಚಲನಚಿತ್ರ ನಿರ್ಮಿಸಲಾಗಿದೆ ಅದರ ಬಗ್ಗೆ ಈ ಅರ್ಜಿ ಇದೆ. ಕೆಲವು ಧರ್ಮಗ್ರಂಥಗಳು ಪೂಜನೀಯವಾಗಿವೆ. ಅನೇಕರು ಮನೆಯಿಂದ ಹೊರಗೆ ಹೊರಡುವ ಮುನ್ನ ‘ಶ್ರೀರಾಮಚರಿತಮಾನಸ’ ಓದುತ್ತಾರೆ. ಅರ್ಜಿದಾರರ ಪ್ರಕಾರ, ಚಲನಚಿತ್ರದಲ್ಲಿ ಶ್ರೀರಾಮನ ಕಥೆ ಸಂಪೂರ್ಣವಾಗಿ ಬದಲಾಯಿಸಲಾಗಿದೆ. ಧರ್ಮದ ಅಪಹಾಸ್ಯ ಮಾಡಲಾಗಿದೆ.

೩. ಸೆನ್ಸಾರ್ ಬೋರ್ಡ್ ಅದರ ಜವಾಬ್ದಾರಿಯನ್ನು ನಿಭಾಯಿಸಿದೆಯೇ ? ಹನುಮಂತ ಮತ್ತು ಮಾತಾ ಸೀತೆಯನ್ನು ಅಯೋಗ್ಯ ರೀತಿಯಲ್ಲಿ ತೋರಿಸಿ ಸಮಾಜಕ್ಕೆ ಯಾವ ಸಂದೇಶ ನೀಡಬೇಕಾಗಿದೆ ? ಭಗವಾನ್ ಹನುಮಂತ, ಭಗವಾನ್ ಶ್ರೀರಾಮ, ಲಕ್ಷ್ಮಣ ಮತ್ತು ಸೀತಾ ಮಾತೆಯನ್ನು ಅವರು ಏನು ಆಗಿರಲೆಯಿಲ್ಲ ಎಂಬಂತೆ ಚಿತ್ರಿಸಲಾಗಿದೆ.

೪. ಸಾಲೀಸಿಟರ್ ಜನರಲ್ ರಿಂದ ಉತ್ತರ ಕೇಳುತ್ತಾ ನ್ಯಾಯಾಲಯವು, ಇದು ಗಂಭೀರ ವಿಷಯವಾಗಿದೆ, ನೀವು ಸೆನ್ಸಾರ್ ಬೋರ್ಡ್ ಗೆ, ಇದು ಹೇಗೆ ಮಾಡಿದ್ದೀರಾ ?; ಎಂದು ಕೇಳಬಹುದು. ರಾಜ್ಯ ಸರಕಾರ ಈ ಪ್ರಕರಣದಲ್ಲಿ ಏನು ಮಾಡಲು ಸಾಧ್ಯವಿಲ್ಲ ಎಂದು ಹೇಳಿದೆ.

೫. ಚಲನಚಿತ್ರದ ಕಥೆಯ ಬಗ್ಗೆ ‘ಡಿಸ್ಕಲೆಮರ್’ (ಚಲನಚಿತ್ರದಲ್ಲಿನ ಘಟನೆಯ ತಥ್ಯದ ಬಗ್ಗೆ ಸ್ಪಷ್ಟೀಕರಣ ನೀಡುವ ಸೂಚನೆ) ಜೋಡಿಸಲಾಗಿರುವ ಬಗ್ಗೆ ಚಲನಚಿತ್ರ ನಿರ್ಮಾಪಕರು ಹೇಳಿದ ನಂತರ ನ್ಯಾಯಾಲಯವು, ಡಿಸ್ಕಲೆಮರ್ ತೋರಿಸುವ ಜನರು ದೇಶವಾಸಿಯರನ್ನು ಮತ್ತು ಯುವಕರನ್ನು ಮೂರ್ಖರೆಂದು ತಿಳಿದಿದ್ದಾರೆಯೆ ? ನೀವು ರಾಮ, ಲಕ್ಷ್ಮಣ, ಭಗವಂತ ಹನುಮಾನ, ರಾವಣ, ಲಂಕೆ ತೋರಿಸುತ್ತೀರಾ ಮತ್ತು ಇದು ರಾಮಾಯಣ ಅಲ್ಲ ಎಂದು ಹೇಳುತ್ತೀರಾ ? ಎಂದು ಹೇಳಿದೆ.

ಸಂಪಾದಕೀಯ ನಿಲುವು

ನ್ಯಾಯಾಲಯವು ತಪರಾಕಿ ನೀಡುವುದರ ಜೊತೆಗೆ ಸಂಬಂಧಿತರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಕೂಡ ಆದೇಶ ನೀಡಬೇಕು, ಇದರಿಂದ ಮುಂದೆ ಈ ರೀತಿ ಹಿಂದುಗಳ ದೇವತೆಯ, ಧರ್ಮಗ್ರಂಥಗಳ ಅವಮಾನ ಮಾಡುವ ಧೈರ್ಯ ಯಾರು ತೋರುವುದಿಲ್ಲ, ಎಂದು ಹಿಂದುಗಳಿಗೆ ಅನಿಸುತ್ತದೆ !