ಉತ್ತರ ಪ್ರದೇಶದಲ್ಲಿ ಪ್ರಶಿಕ್ಷಣ ಸಂಸ್ಥೆಯ ಹೆಸರಿನಲ್ಲಿ ಮದರಸ ನಡೆಸುವ ಮೌಲ್ವಿಯ ಬಂಧನ

(ಮೌಲ್ವಿ ಎಂದರೆ ಇಸ್ಲಾಮಿನ ಧಾರ್ಮಿಕ ಮುಖಂಡ)

ಗಾಝಿಯಾಬಾದ (ಉತ್ತರ ಪ್ರದೇಶ) – ಇಲ್ಲಿ ಪ್ರಶಿಕ್ಷಣ ಸಂಸ್ಥೆಯ ಹೆಸರಿನಲ್ಲಿ ಮದರಸಾ ನಡೆಸುವ ಶೌಕತ್ ಅಲಿ ಎಂಬ ಮೌಲ್ವಿಯನ್ನು ಗಾಝಿಯಾಬಾದ್ ಪೋಲಿಸರು ಬಂಧಿಸಿದ್ದಾರೆ. ಪ್ರಸಾರ ಮಾಧ್ಯಮಗಳು ನೀಡಿರುವ ವಾರ್ತೆಯ ಪ್ರಕಾರ, ಗಾಝಿಯಾಬಾದದ ಖೋಡಾ ಪರಿಸರದಲ್ಲಿನ ದೀಪಕ ವಿಹಾರ ಪ್ರದೇಶದಲ್ಲಿ ಶೌಕಾತ್ ಅಲಿ ಎಂಬ ಮೌಲ್ವಿ ‘ಫ್ಯೂಚರ್ ಟ್ರ್ಯಾಕ್’ ಹೆಸರಿನ ಪ್ರಶಿಕ್ಷಣ ಸಂಸ್ಥೆ ನಡೆಸುತ್ತಿದ್ದನು. ಈ ಸಂಸ್ಥೆಯ ರೂಪಾಂತರ ಮದರಸಾದಲ್ಲಿ ಆಯುತು. ದೀಪಕ ವಿಹಾರ ಪರಿಸರದಲ್ಲಿ ವಾಸಿಸುವ ಹಿಂದುಗಳು ಈ ಮದರಸದಲ್ಲಿ ನಡೆಯುವ ನಮಾಜ್ ಗೆ ವಿರೋಧಿಸಿದ್ದರು. ದೀಪಕ ವಿಹಾರದಲ್ಲಿ ಪ್ರೇಮ ಸಿಂಹ ಎಂಬ ವ್ಯಕ್ತಿಯು ಈ ಕಾನೂನ ಬಾಹಿರ ಮದರಸಾದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ಜೂನ್ ೨೩ ರಂದು ಪೊಲೀಸ ಪಡೆ ದೀಪಕ ವಿಹಾರ ಪರಿಸರದಲ್ಲಿ ಗಸ್ತು ಹಾಕುತ್ತಿರುವಾಗ ಈ ಸಂಸ್ಥೆಯ ಹತ್ತಿರ ಪೊಲೀಸರಿಗೆ ಗದ್ದಲ ಕಾಣಿಸಿತು. ಈ ಗುಂಪು ನಮಾಜ್ ಮಾಡುತ್ತಿರುವುದು ಪೊಲೀಸರ ಗಮನಕ್ಕೆ ಬಂದಿತು. ಮೌಲ್ವಿಯ ಈ ಕೃತ್ಯ ಸಾಮಾಜಿಕ ಸೌಹಾರ್ದ ಹದಗೆಡೆಸುವುದಾಗಿದೆ ಮತ್ತು ಎರಡು ಸಮುದಾಯದಲ್ಲಿ ಬಿರುಕು ಮೂಡಿಸುವದಾಗಿದೆ ಎಂದು ಪೊಲೀಸರು ಮೌಲ್ವಿ ವಿರುದ್ಧ ದೂರು ದಾಖಲಿಸಿ ಅವನನ್ನು ಬಂಧಿಸಿದರು.

ಆರೋಪಿ ಮೌಲ್ವಿ ಈ ಹಿಂದೆ ಕಾನೂನ ಬಾಹಿರ ಮದರಸಾ ನಡೆಸುತ್ತಿದ್ದನು. ಪೊಲೀಸರು ಅದನ್ನು ಮುಚ್ಚಿದ್ದರು. ಅದರ ನಂತರ ಅವನು ಈಗ ಬಾಡಿಗೆಯ ಮನೆ ಪಡೆದು ಮತ್ತೆ ಮದರಸಾ ಆರಂಭಿಸಿದನು. ಪೊಲೀಸರು ಈ ಪ್ರಕರಣದ ಮುಂದಿನ ತನಿಖೆ ನಡೆಸುತ್ತಿದ್ದಾರೆ.

ಸಂಪಾದಕರ ನಿಲುವು

ಪ್ರಶಿಕ್ಷಣ ಸಂಸ್ಥೆಯ ಹೆಸರಿನಲ್ಲಿ ಕಾನೂನಬಾಹಿರ ಮದರಸ ಆರಂಭಿಸುವವರೆಗೆ ಪೊಲೀಸರು ನಿದ್ರೆಸುತ್ತಿದ್ದರೆ ? ಇದಕ್ಕೆ ಕಾರಣಕರ್ತರಾಗಿರುವ ಪೊಲೀಸರ ಮೇಲೆ ಕೂಡ ಕಠಿಣ ಕ್ರಮ ಕೈಗೊಳ್ಳಬೇಕು !