ಗುಜರಾತ ಗಲಭೆ, ೨೦ ವರ್ಷಗಳ ನಂತರ ೩೫ ಹಿಂದುಗಳ ಖುಲಾಸೆ !

ಡೋಂಗಿ ಜಾತ್ಯತೀತ ಪ್ರಸಾರ ಮಾಧ್ಯಮ ಮತ್ತು ಸಂಘಟನೆಗಳ ಒತ್ತಡದಿಂದ ಹಿಂದುಗಳಿಗೆ ಅನಾವಶ್ಯಕ ಮೊಕದ್ದಮೆ ಎದುರಿಸಬೇಕಾಯಿತು ! – ನ್ಯಾಯಾಲಯದ ಟೀಕೆ

ಕರ್ಣಾವತಿ (ಗುಜರಾತ) – ಗುಜರಾತ ರಾಜ್ಯದಲ್ಲಿ ಹಲೋಲ ಇಲ್ಲಿಯ ಸೆಶನ್ಸ್ ನ್ಯಾಯಾಲಯವು ೨೦೦೨ ರ ಗುಜರಾತ ಗಲಭೆಯಲ್ಲಿನ ೪ ಪ್ರಕರಣಗಳಲ್ಲಿನ ೩೫ ಹಿಂದೂ ಆರೋಪಿಗಳ ಖುಲಾಸೆ ಗೊಳಿಸಿದ್ದಾರೆ. ಒಟ್ಟು ೫೨ ಜನರ ಮೇಲೆ ಆರೋಪಪತ್ರ ದಾಖಲಿಸಲಾಗಿತ್ತು; ಆದರೆ ಕಳೆದ ೨೦ ವರ್ಷಗಳಲ್ಲಿ ಇದರಲ್ಲಿನ ೧೭ ಜನರು ಸಾವನ್ನಪ್ಪಿದ್ದಾರೆ. ಹೆಚ್ಚುವರಿ ಸೆಶನ್ಸ್ ನ್ಯಾಯಾಧೀಶ ಹರ್ಷ ಬಾಲಕೃಷ್ಣ ತ್ರಿವೇದಿ ಇವರು ತೀರ್ಪ ನೀಡುವಾಗ, ಪೊಲೀಸರು ಡಾಕ್ಟರ್, ಪ್ರಾಧ್ಯಾಪಕರು, ಶಿಕ್ಷಕರು, ಉದ್ಯೋಗಿಗಳು, ಪಂಚಾಯತ ಅಧಿಕಾರಿಗಳು ಮುಂತಾದ ಪ್ರಮುಖ ಹಿಂದೂ ವ್ಯಕ್ತಿಗಳನ್ನು ಸಿಲುಕಿಸಿದ್ದಾರೆ ಮತ್ತು ಡೋಂಗಿ ಜಾತ್ಯತೀತ ಪ್ರಸಾರ ಮಾಧ್ಯಮಗಳು ಮತ್ತು ಸಂಘಟನೆಯ ಒತ್ತಡದಿಂದ ಆರೋಪಿಗಳಿಗೆ ಅನಾವಶ್ಯಕ ದಿರ್ಘಾವಧಿ ಮೊಕದ್ದಮೆ ಎದುರಿಸಬೇಕಾಯಿತು. ಗಲಭೆಯಲ್ಲಿನ ತಥಾಕಥಿತ ಸಂತ್ರಸ್ತರು ವಿವಿಧ ಅಧಿಕಾರಿಗಳ ಎದುರು ನಮೂದಿಸಿರುವ ಸಾಕ್ಷಿಗಳು ವಿರೋಧಭಾಸಗಳದಾಗಿದೆ. ಅವರಿಗೆ ಆರೋಪ ಪತ್ರದಲ್ಲಿ ನಮೂದಿಸಿರುವ ರೀತಿಯಲ್ಲಿ ಯೋಗ್ಯ ಸಾಕ್ಷಿಗಳು ನೀಡಲು ಸಾಧ್ಯವಾಗಿಲ್ಲ ಎಂದು ಹೇಳಿದರು.

ಸಂಪಾದಕರ ನಿಲುವು

ಇಂತಹವರಿಗೆ ನ್ಯಾಯಾಲಯದಿಂದ ಶಿಕ್ಷೆ ವಿಧಿಸಬೇಕು

ತಡವಾಗಿ ಸಿಕ್ಕಿರುವ ನ್ಯಾಯ ಇದು ಕೂಡ ಅನ್ಯಾಯ ಅಲ್ಲವೇ ? ಧರ್ಮಾಭಿಮಾನಿ ಹಿಂದುಗಳಿಗೆ ಅನಿಸುತ್ತದೆ !