-
`ರಾ’ನ ಮಾಜಿ ನಿರ್ದೇಶಕ ಜಿ.ಬಿ.ಎಸ್. ಸಿದ್ಧೂ ಇವರ ಗಂಭೀರ ಆರೋಪ
-
ಭಿಂದ್ರನವಾಲೆಯನ್ನು ಕಾಂಗ್ರೆಸ್ಸಿಗರು ಬೆಳೆಸಿದವರು
ನವದೆಹಲಿ – ಖಲಿಸ್ತಾನಿ ಭಯೋತ್ಪಾದಕ ಭಿಂದ್ರನವಾಲೆಯನ್ನು ಇಂದಿರಾಗಾಂಧಿ, ಸಂಜಯಗಾಂಧಿ, ಜ್ಞಾನಿ ಝೇಲಸಿಂಹ, ಕಮಲನಾಥ ಇವರಂತಹ ಕಾಂಗ್ರೆಸ್ ನವರೇ ಬೆಳೆಸಿದರು ಎಂದು ಭಾರತದ ಗೂಢಚಾರ ಸಂಸ್ಥೆ `ರಿಸರ್ಚ ಅಂಡ್ ಅನಾಲಿಸಿಸ್ ವಿಂಗ’ ನ (‘ರಾ’ ನ) ಮಾಜಿ ಹೆಚ್ಚುವರಿ ನಿರ್ದೇಶಕ ಜಿ.ಬಿ. ಎಸ್. ಸಿದ್ಧೂ ಇವರು `ಎ.ಎನ್.ಐ.’ ಈ ವಾರ್ತಾ ಸಂಸ್ಥೆಯ ಸಂಪಾದಕಿ ಸ್ಮಿತಾ ಪ್ರಕಾಶ ಇವರಿಗೆ ನೀಡಿರುವ ಸಂದರ್ಶನದಲ್ಲಿ ಆರೋಪ ಮಾಡಿದರು. `ಹಿಂದೂ ಮತ್ತು ಸಿಖ್ ಇವರಲ್ಲಿ ಬಿರುಕು ಮೂಡಿಸಲೆಂದೇ ಕಾಂಗ್ರೆಸ್ ಖಲಿಸ್ತಾನದ ಅಂಶಗಳ ನಿರ್ಮಾಣ ಮಾಡಿ ಭಿಂದ್ರನ್ ವಾಲೆಯನ್ನು ಬೆಳೆಸಿದರು’, ಎಂದೂ ಸಿದ್ದೂ ಇವರು ಹೇಳಿದರು.
ಜಿ.ಬಿ.ಎಸ್. ಸಿದ್ದೂ ಇವರು ಸಂದರ್ಶನದಲ್ಲಿ ಮಂಡಿಸಿದ ಅಂಶಗಳು
1. `ಆಪರೇಶನ ಭಿಂದ್ರನವಾಲೆ’ ಯ ಪ್ರಾರಂಭ ಮತ್ತು ಅವನ ವ್ಯವಸ್ಥಾಪನೆಯನ್ನು ದೆಹಲಿಯ ಕೆಲವು ಮುಖಂಡರು `1, ಅಕಬರ ರೋಡ’ ನಲ್ಲಿರುವ ನಿವಾಸಸ್ಥಾನದಿಂದ ಮಾಡುತ್ತಿದ್ದರು. ಇದರಲ್ಲಿ ಇಂದಿರಾಗಾಂಧಿ, ಅವರ ಪುತ್ರ ಸಂಜಯ ಗಾಂಧಿ, ನಾಯಕ ಕಮಲನಾಥ, ಜ್ಞಾನಿ ಝೇಲಸಿಂಹ ಮುಂತಾದವರ ಸಮಾವೇಶವಿತ್ತು. ಇದೆಲ್ಲವೂ 1978 ರಲ್ಲಿ ಪ್ರಾರಂಭವಾಯಿತು. ಜ್ಞಾನಿ ಝೇಲಸಿಂಹ ಮತ್ತು ಸಂಜಯ ಗಾಂಧಿಯವರು ಅಕಾಲಿ ದಳ ಮತ್ತು ಜನತಾ ಪಕ್ಷದಲ್ಲಿ ಬಿಗುವಿನ ವಾತಾವರಣವನ್ನು ನಿರ್ಮಾಣ ಮೂಡಿಸಲು ಈ ಷಡ್ಯಂತ್ರವನ್ನು ರೂಪಿಸಿದರು.
2. ಸಂಜಯ ಗಾಂಧಿ ಮತ್ತು ಜ್ಞಾನಿ ಝೇಲಸಿಂಹ ಇವರು ಒಂದು ಪ್ರತಿಷ್ಠಿತ `ಸಂತ’ ರನ್ನು ಪಂಜಾಬಗೆ ಕಳುಹಿಸಲು ನಿರ್ಧರಿಸಿದರು. ಇದರ ಹಿಂದೆ `ಈ ಸಂತ ಅಕಾಲಿ ದಳದ ಮೃದು ಧೋರಣೆಯ ಮೇಲೆ ಟೀಕಿಸುವುದು ಮತ್ತು ಅದಕ್ಕೆ ಪ್ರತ್ಯುತ್ತರವೆಂದು ಜನತಾ ಪಕ್ಷದಿಂದ ಪ್ರತಿಕ್ರಿಯೆ ವ್ಯಕ್ತಪಡಿಸುವುದು. ಇದರಿಂದ ಅಕಾಲಿ ದಳ ಮತ್ತು ಜನತಾ ಪಕ್ಷದ ನಡುವಿನ ಸಂಬಂಧ ಬಿರುಕು ಮೂಡುವುದು’ ಎನ್ನುವ ಉದ್ದೇಶವಿತ್ತು.
3. ಕಾಂಗ್ರೆಸ್ ಪಂಜಾಬಿನಲ್ಲಿರುವ ಹಿಂದೂಗಳನ್ನು ಹೆದರಿಸಲು ಭಿಂದ್ರನವಾಲೆಯನ್ನು ಎತ್ತಿ ಕಟ್ಟಿ ನಿಲ್ಲಿಸಿತು. ಮತ್ತು ಖಲಿಸ್ತಾನದ ವಿಷಯಕ್ಕೆ ಜನ್ಮ ನೀಡಿತು. ಇದರಿಂದ ದೇಶದ ಜನತೆಗೆ ಈ ರೀತಿ ಭಾರತದ ಅಖಂಡತೆಗೆ ಅಪಾಯವೆನಿಸತೊಡಗಿತು.
4. ಪೊಲೀಸರು ಮತ್ತು ಆಡಳಿತ ವರ್ಗದ ಅಧಿಕಾರಿಗಳು ಭಿಂಧ್ರನವಾಲೆಯನ್ನು `ಸರ್’ ಎಂದು ಹೇಳುತ್ತಿದ್ದರು. ಅವನನ್ನು ಒಬ್ಬ ದೊಡ್ಡ ವ್ಯಕ್ತಿಯನ್ನಾಗಿ ಮಾಡಲಾಯಿತು. ಆಗಿನ ಕೇಂದ್ರೀಯ ಗೃಹಮಂತ್ರಿ ಜ್ಞಾನಿ ಝೇಲಸಿಂಹ ಇವರೇ ಪ್ರಸಾರ ಮಾಧ್ಯಮದಲ್ಲಿ ಭಿಂದ್ರನ್ ವಾಲೆಯ ಒಂದು ಪ್ರತಿಮೆಯನ್ನು ನಿರ್ಮಾಣ ಮಾಡಿದರು.
5. ಆ ಸಮಯದಲ್ಲಿ ನನಗೆ ಕೆನಡಾಕ್ಕೆ ಕಳುಹಿಸಲಾಯಿತು. ಆ ಕಾಲದಲ್ಲಿ ಕೆನಡಾದಲ್ಲಿ ಖಲಿಸ್ತಾನದ ಚರ್ಚೆ ಬಹಳ ಕನಿಷ್ಠವಾಗಿತ್ತು. 1979 ರಲ್ಲಿ ಭಾರತಕ್ಕೆ ಮರಳಿದಾಗ ನನಗೆ `ರಾ’ ನಲ್ಲಿ ಕಳುಹಿಸಲಾಯಿತು. ಐ.ಎಸ್.ಐ. ಮತ್ತು ಸಿಖ್ ಕಟ್ಟಾವಾದಿಗಳ ಸಂಬಂಧದ ವಿಚಾರಣೆಗಾಗಿ `ರಾ’ ದ ಒಂದು ಹೊಸ ವಿಭಾಗ ಡಿಸೆಂಬರ 1980 ರಲ್ಲಿ ನಿರ್ಮಾಣ ಮಾಡಲಾಯಿತು; ಆದರೆ ಆ ಸಮಯದಲ್ಲಿ `ಇಬ್ಬರಲ್ಲಿ ಏನೋ ಸಂಬಂಧವಿದೆಯೆಂದು’ ಒಂದೇ ಒಂದು ಉದಾಹರಣೆ ಕಂಡು ಬಂದಿಲ್ಲ.
6. ಕಾಂಗ್ರೆಸ್ ನ ಅಕಾಲಿ ದಳದೊಂದಿಗೆ ಚರ್ಚಿಸಲು ಯೋಜನೆಯನ್ನು ಮಾಡಲಾಯಿತು. ಅವರಿಗೆ ಇಂತಹ ಚರ್ಚೆಯಿಂದ ಸಮಸ್ಯೆಯಿಂದ ದೂರವಾಗಬಹುದು. ಇಬ್ಬರಲ್ಲಿ 26 ಬಾರಿ ಚರ್ಚೆಗಳು ನಡೆದರು. ಕೆಲವೊಮ್ಮೆ ಇದರಲ್ಲಿ ಇಂದಿರಾಗಾಂಧಿ ಮತ್ತು ಸಂಜಯ ಗಾಂಧಿಯವರು ಭಾಗವಹಿಸಿದ್ದರು. ಸಂಜಯ ಗಾಂಧಿಯವರು ಖಲಿಸ್ತಾನ ಮತ್ತು ಭಿಂದ್ರನವಾಲೆ ಈ ಪ್ರಕರಣದಿಂದ ಪಂಜಾಬನಲ್ಲಿ ಚುನಾವಣೆಯನ್ನು ಗೆಲ್ಲುವ ಯೋಜನೆಯನ್ನು ರಚಿಸಿದ್ದರು.
7. 1982 ರಲ್ಲಿ ನಮಗೆ ಸಿಕ್ಕ ಮಾಹಿತಿಯಂತೆ ಇಂದಿರಾ ಗಾಂಧಿಯವರ ಜೀವಕ್ಕೆ ಅಪಾಯವಿದೆಯೆಂದು ದೊರಕಿತ್ತು. ಆಗ ಭಿಂದ್ರನ್ ವಾಲೆ ಸ್ವರ್ಣಮಂದಿರದಲ್ಲಿ ವಾಸಿಸುತ್ತಿದ್ದನು. ಅವನನ್ನು ಬಂಧಿಸಲು ನಿರ್ಧರಿಸಲಾಗಿತ್ತು.
GBS Sidhu is a former official of India’s external intelligence agency, the Research and Analysis Wing, and has authored two books, ‘Sikkim Dawn of Democracy” & ‘The Khalistan Conspiracy’. pic.twitter.com/RPxFqIlznI
— Eagle Eye (@SortedEagle) June 24, 2023
ಸಂಪಾದಕರ ನಿಲುವುಕಾಂಗ್ರೆಸ್ ಖಲಿಸ್ತಾನದ ಭಸ್ಮಾಸುರನನ್ನು ನಿರ್ಮಾಣ ಮಾಡಿದರು ಮತ್ತು ಅವರೇ ಕಾಂಗ್ರೆಸ್ಸಿಗೆ ಮೋಸ ಮಾಡಿ ದೇಶಕ್ಕೂ ಹಾನಿ ಮಾಡಿದರು ! ಇಂತಹ ಕಾಂಗ್ರೆಸ್ ಇಲ್ಲಿಯವರೆಗೆ ನಿಷೇಧಿಸುವುದು ಆವಶ್ಯಕವಿತ್ತು ! ಕಾಂಗ್ರೆಸ್ ತನ್ನ ಅಧಿಕಾರವನ್ನು ಹೇಗೆ ದುರುಪಯೋಗಪಡಿಸಿಕೊಂಡಿತು? ಎನ್ನುವುದು ಇದರಿಂದ ಗಮನಕ್ಕೆ ಬರುತ್ತದೆ ! ಸ್ವಾರ್ಥಕ್ಕಾಗಿ ದೇಶದ ಮತ್ತು ಹಿಂದೂಗಳ ಬಲಿ ನೀಡುವ ಕಾಂಗ್ರೆಸ್ ರಾಜಕೀಯ ಅಸ್ತಿತ್ವ ಹಿಂದೂಗಳು ಮುಗಿಸಿದರೆ ಆಶ್ಚರ್ಯವೆನಿಸುವುದಿಲ್ಲ ! |