ವಿವಿಧ ಸಂತರಲ್ಲಿ ಅರಿವಾದ ಅಲೌಕಿಕ ತೇಜ !

೧. ಪ.ಪೂ. ಭಕ್ತರಾಜ ಮಹಾರಾಜರು ಸ್ನಾನ ಮಾಡದಿದ್ದರೂ, ಕೇವಲ ಮುಖದ ಮೇಲೆ ಕೈಯಾಡಿಸಿದ ಕೂಡಲೇ ಮುಖ ಕೆಂಪು-ಗುಲಾಬಿ ಮತ್ತು ತೇಜಸ್ವಿ ಕಾಣಿಸುವುದು ! : ಒಮ್ಮೆ ನಾವು ಪ.ಪೂ. ಭಕ್ತರಾಜ ಮಹಾರಾಜರ ಜೊತೆಗೆ ಉಜ್ಜೈನ್‌ಗೆ ಹೋದಾಗ ರಾತ್ರಿ ಪ.ಪೂ. ಬಾಬಾರವರ (ಪ.ಪೂ. ಭಕ್ತರಾಜ ಮಹಾರಾಜರ) ಅಲ್ಲಿನ ಭಕ್ತರಾದ ಶ್ರೀ. ಚೋರೆಯವರ ಮನೆಯಲ್ಲಿ ನಿವಾಸಕ್ಕಿದ್ದೆವು. ಬೆಳಗ್ಗೆ ಎದ್ದಾಗ ನಮಗೆ ಪ.ಪೂ. ಬಾಬಾರವರ ಮುಖದ ಮೇಲೆ ಸ್ವಲ್ಪ ನೀರಿಗೆಗಳು ಬಿದ್ದಹಾಗೆ ಮತ್ತು ಅವರ ಕೂದಲುಗಳು ಅಸ್ತವ್ಯಸ್ಥವಾಗಿ ಕಾಣಿಸಿದವು. ಯಾರೋ, ಒಬ್ಬರು ಪ.ಪೂ. ಬಾಬಾರಿಗೆ, “ಪ.ಪೂ. ಬಾಬಾ, ಈಗ ಸ್ನಾನ ಮಾಡಬೇಕು, ಎಂದು ಹೇಳಿದರು. ಆಗ ಪ.ಪೂ. ಬಾಬಾರವರು ಕೂದಲು ಮತ್ತು ಮುಖದ ಮೇಲೆ ತಮ್ಮ ಕೈಯನ್ನಾಡಿಸಿದರು. ಅವರು ತಮ್ಮ ಬಲಗೈಯನ್ನು ಎಡಗೈ ಮೇಲಿನಿಂದ ಕೆಳಗಿನವರೆಗೆ ಮತ್ತು ಎಡಗೈಯನ್ನು ಬಲಗೈ ಮೇಲಿನಿಂದ ಕೆಳಗಿನವರೆಗೆ ಸವರಿದರು ಮತ್ತು “ಈಗ ಸ್ನಾನ ಮಾಡಿದಂತೆ ಅನಿಸುತ್ತಿದೆಯಲ್ಲ ?, ಎಂದು ಎಲ್ಲರಿಗೂ ಕೇಳಿದರು. ಆಗ ಪ.ಪೂ. ಬಾಬಾರವರ ಮುಖದಲ್ಲಿ ಒಮ್ಮೆಲೆ ಹೊಳಪು ಬಂದು ತೇಜಸ್ವಿಯಾಗಿತ್ತು. ಅವರ ಮುಖ ಒಮ್ಮೆಲೆ ಕೆಂಪು ಗುಲಾಬಿಯಾಗಿತ್ತು. ಆಗ ನನಗೆ ಪ.ಪೂ. ಧಾಂಡೆ ಶಾಸ್ತ್ರೀಯವರ ಶಬ್ದಗಳು ನೆನಪಾದವು. ಅವರು, ‘ನನಗೆ ಭಕ್ತರಾಜನು ಬಹಳ ಇಷ್ಟವಾಗುತ್ತಾನೆ. ಅವನು ಬಹಳ ಸುಂದರವಾಗಿದ್ದಾನೆ, ಆ ಸೌಂದರ್ಯ ಇಂದಿಗೂ ನನ್ನ ಕಣ್ಣುಗಳ ಮುಂದೆ ಬರುತ್ತದೆ ಎಂದು ಹೇಳುತ್ತಿದ್ದರು.

ಶ್ರೀ. ಅನಿಲ ವಾಮನ ಜೋಗ

೨. ಪ.ಪೂ. ಧಾಂಡೆ ಶಾಸ್ತ್ರಿಗಳ ಮುಖದ ಮೇಲೆ ಕಾಣಿಸುವ ಅಲೌಕಿಕ ತೇಜ ! : ಪ.ಪೂ. ಧಾಂಡೆ ಶಾಸ್ತ್ರಿಗಳ (ಇಂದೂರಿನ ಸಂತರು) ವಿಷಯವೂ ಬಹಳಷ್ಟು ಹೀಗೇ ಇತ್ತು. ಕುಳಿತಲ್ಲಿಯೇ ಅವರ ಮುಖದ ಮೇಲೆ ಒಮ್ಮೆಲೆ ಬಹಳಷ್ಟ ತೇಜ ಬಂದು ಮುಖ ಹೊಳೆಯುತ್ತಿತ್ತು. ಅವರ ಗಡ್ಡ ಬೆಳೆದಿದ್ದರೂ, ಅವರ ಮುಖದ ಮೇಲೆ ಬಹಳ ತೇಜ ಕಾಣಿಸುತ್ತಿತ್ತು. ನಾನು ಅದನ್ನು ವರ್ಣಿಸಲಾರೆ. ಅವರಿಗೆ ೧೦೦ ವರ್ಷಗಳು (ಅವರು ೧೦೧ ವರ್ಷಗಳ ನಂತರ ದೇಹತ್ಯಾಗ ಮಾಡಿದರು) ಪೂರ್ಣವಾದ ನಂತರವೂ ಅವರ ಮುಖದ ಮೇಲೆ ಇಂತಹ ತೇಜವೇ ಕಾಣಿಸುತ್ತಿತ್ತು.

೩. ಪ.ಪೂ. ಡೊಂಗರೆ ಮಹಾರಾಜರಲ್ಲಿನ ಬ್ರಹ್ಮಚರ್ಯದ ತೇಜ ಅರಿವಾಗಿ ಗೌರವದಿಂದ ನನ್ನ ತಲೆ ಬಾಗುವುದು : ‘ನಾನು ನನ್ನ ತಾಯಿ ಸೌ. ನಲಿನಿ ಮತ್ತು ನನ್ನ ಪತ್ನಿ ಸೌ. ಆಶಾ ಇವರನ್ನು ಕರೆದುಕೊಂಡು ಬಡೊದಾಗೆ ಹೋಗಿದ್ದೆ. ಅಲ್ಲಿಂದ ಬಿಳಿಮೊರಾಗೆ ನನ್ನ ಸಹೋದರನ ಕಡೆಗೆ ಹೋಗಬೇಕೆಂದು ನನ್ನ ಮನಸ್ಸಿನಲ್ಲಿತ್ತು ; ಆದರೆ ಬಡೊದಾಗೆ ಹೋದ ನಂತರ ‘ಇಂದು ಪ.ಪೂ. ಡೊಂಗರೆ ಮಹಾರಾಜರು ಮನೆಗೆ (ಪ.ಪೂ. ಡೊಂಗರೆ ಮಹಾರಾಜರ ತಂದೆಯವರ ಮನೆಗೆ) ಬರುವವರಿದ್ದಾರೆ, ಎಂದು ನನಗೆ ತಿಳಿಯಿತು; ಹಾಗಾಗಿ ನಾನು ಸಹೋದರನ ಬಳಿ ಹೋಗಲಿಲ್ಲ. ಮರುದಿನ ಬೆಳಗ್ಗೆ ನಾನು ಪ.ಪೂ. ಡೊಂಗರೆ ಮಹಾರಾಜರ ಮನೆಗೆ ಹೋದೆ, ಆಗ ಅವರು ಪೂಜೆಯನ್ನು ಮಾಡುತ್ತಿದ್ದರು. ನನಗೆ ಅವರ ಮುಖದ ಮೇಲೆ ಬಹಳಷ್ಟು ತೇಜ ಕಾಣಿಸಿತು. ‘ಬ್ರಹ್ಮಚರ್ಯದ ತೇಜ ಹೇಗಿರುತ್ತದೆ ?, ಎಂಬುದು ನನಗೆ ಗೊತ್ತಿಲ್ಲ; ಆದರೆ ‘ಅವರ ಮುಖದ ಮೇಲೆ ಆ ತೇಜವೇ ಇದೆ, ಎಂದು ನನಗೆ ಅನಿಸಿತು. ನಾನು ಆ ತೇಜದ ವರ್ಣನೆಯನ್ನು ಮಾಡಲಾರೆ. ಆ ತೇಜವನ್ನು ನೋಡಿ ನನ್ನ ತಲೆ ಸಹಜವಾಗಿಯೇ ಗೌರವದಿಂದ ಕೆಳಗೆ ಬಾಗಿತು.
– ಶ್ರೀ. ಅನಿಲ ವಾಮನ ಜೋಗ, ಇಂದೂರ, ಮಧ್ಯಪ್ರದೇಶ. (೨೯.೩.೨೦೨೩)