ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವರೂಪಿ ನಕ್ಷತ್ರಪುಂಜದಲ್ಲಿನ ಏಕೈಕ ಸೂರ್ಯ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ್ ಆಠವಲೆ !

ಪ್ರತಿಭಾವಂತ ಮತ್ತು ಚಾರಿತ್ರ್ಯಸಂಪನ್ನ ಹಿಂದೂನಿಷ್ಠರ ಸಂಘಟನೆಯಾಗಿರುವ ಈ ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವವನ್ನು ನಕ್ಷತ್ರಪುಂಜಕ್ಕೆ ಹೋಲಿಸಬಹುದು. ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು ಈ ನಕ್ಷತ್ರಪುಂಜವನ್ನು ಸಾಧನೆಯೆಂಬ ಜ್ಞಾನದಿಂದ ಬೆಳಗಿಸುವ ಏಕೈಕ ಸ್ವಯಂಪ್ರಕಾಶಿ ಸೂರ್ಯರಾಗಿದ್ದಾರೆ. ನಾನು ಅವರ ಚರಣಗಳಲ್ಲಿ ನಮಸ್ಕರಿಸುತ್ತೇನೆ. ಇಲ್ಲಿ ನೇರೆದಿರುವ ಸಂತರು ಮತ್ತು ಸದ್ಗುರುಗಳು ಈ ನಕ್ಷತ್ರಪುಂಜದಲ್ಲಿ ಸಪ್ತರ್ಷಿಗಳ ರೂಪದಲ್ಲಿ ಬೇರೆ ಬೇರೆ ಸ್ಥಳದಲ್ಲಿದ್ದಾರೆ. ಹೇಗೆ ತೇಜಸ್ವಿ ಧ್ರುವನಕ್ಷತ್ರ ಸ್ಥಿರವಾಗಿದ್ದು ರಾತ್ರಿಯಲ್ಲಿ ಮಾರ್ಗ ತೋರಿಸಿದಂತೆ ಈ ಅಧಿವೇಶನಕ್ಕೆ ಸದ್ಗುರು ಡಾ. ಚಾರುದತ್ತ ಪಿಂಗಳೆ, ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ್ ಸಿಂಗಬಾಳ ಈ ಸಂತರ ಸಮೂಹ ಈ ಅಧಿವೇಶನಕ್ಕೆ ಆಧ್ಯಾತ್ಮಿಕ ಮಟ್ಟದಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಚಂದ್ರನ ಶೀತಲತೆಯು ಸಹ ಅಷ್ಟೇ ಮಹತ್ವದಾಗಿದೆ. ಅದರಂತೆಯೇ ವಿನಮ್ರ ಸ್ವಭಾವ ಮತ್ತು ಚಾರಿತ್ರ್ಯವಂತರಾಗಿರುವ ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕರು ಮತ್ತು ಸನಾತನದ ಸಾಧಕರು ಈ ಮಹೋತ್ಸವದ ಆರಂಭದಿಂದಲೂ ಆಹಾರ, ವಾಹನ, ವಸತಿಯ ವ್ಯವಸ್ಥೆಯನ್ನು ಮಾಡುತ್ತಿದ್ದಾರೆ. ಚಿತ್ರೀಕರಣದ ಮೂಲಕ ಈ ಮಹೋತ್ಸವವನ್ನು ಇಡೀ ಜಗತ್ತಿಗೆ ಸಾರುತ್ತಿದ್ದಾರೆ. ಅವರೆಲ್ಲರಿಗೂ ನಾವು ಅಭಿನಂದನೆ ಸಲ್ಲಿಸೋಣ. ಎಲ್ಲಕ್ಕಿಂತ ಮುಖ್ಯವಾಗಿ, ಈ ಮಹೋತ್ಸವಕ್ಕೆ ವಿವಿಧ ಪ್ರಾಂತ್ಯಗಳಿಂದ ಬರುವ ಹಿಂದೂತ್ವನಿಷ್ಠರು ಈ ನಕ್ಷತ್ರಪುಂಜದಲ್ಲಿನ ಹೊಳೆಯುವ ನಕ್ಷತ್ರಗಳಾಗಿದ್ದಾರೆ !

– ಶ್ರೀ. ಕಮಲೇಶ ಕಟಾರಿಯಾ, ಅಧ್ಯಕ್ಷ, ‘ಸಂಕಲ್ಪ ಹಿಂದೂ ರಾಷ್ಟ್ರ ಅಭಿಯಾನ’, ಛತ್ರಪತಿ ಸಂಭಾಜಿನಗರ