ರಾಷ್ಟ್ರೀಯ ರಾಜಪೂತ ಕರಣಿ ಸೇನೆಯ ವತಿಯಿಂದ ಹಿಂದೂ ಧರ್ಮದ ಮೇಲಿನ ಆಘಾತವನ್ನು ತಡೆಯುವ ಕಾರ್ಯ ಪ್ರಾರಂಭ- ಮನೋಹರ ಸಿಂಹ ಘೋಡಿವಾರಾ, ಪ್ರದೇಶಾಧ್ಯಕ್ಷ, ರಾಷ್ಟ್ರೀಯ ರಾಜಪೂತ ಕರಣಿ ಸೇನಾ, ರಾಜಸ್ಥಾನ

ಮನೋಹರ ಸಿಂಹ ಘೋಡಿವಾರಾ, ಪ್ರದೇಶಾಧ್ಯಕ್ಷ, ರಾಷ್ಟ್ರೀಯ ರಾಜಪೂತ ಕರಣಿ ಸೇನಾ, ರಾಜಸ್ಥಾನ

ರಾಮನಾಥಿ,22 ಜೂನ್(ಸುದ್ದಿ)- ರಾಷ್ಟ್ರೀಯ ರಾಜಪೂತ ಕರಣಿ ಸೇನೆಯ ವತಿಯಿಂದ ಹಿಂದೂ ಧರ್ಮದ ಮೇಲಿನ ಆಘಾತವನ್ನು ತಡೆಯುವ ಕಾರ್ಯ ನಡೆಯುತ್ತಿದೆ. ಪದ್ಮಾವತಿ ಚಲನಚಿತ್ರದಲ್ಲಿ ತಾಯಿ ಪದ್ಮಾವತಿಯವರನ್ನು ಅಪಮಾನ ಮಾಡಿದ್ದರೆಂದು ಈ ಚಲನಚಿತ್ರದ ಕೊಲ್ಹಾಪುರದಲ್ಲಿ ನಿರ್ಮಿಸಿದ್ದ ಸೆಟ್ ಅನ್ನು ರಾಷ್ಟ್ರೀಯ ರಾಜಪೂತ ಕರಣಿ ಸೇನೆ ಧ್ವಂಸಗೊಳಿಸಿತ್ತು. ನ್ಯಾಶನಲ್ ಕಾನ್ಫರೆನ್ಸ ಈ ಪ್ರತ್ಯೇಕತಾವಾದದ ನಾಯಕ ಫಾರೂಕ್ ಅಬ್ದುಲ್ ಇವರ ಸವಾಲನ್ನು ಸ್ವೀಕರಿಸಿ ನಾವು ಲಾಲ್ ಚೌಕದಲ್ಲಿ ತ್ರಿವರ್ಣ ಧ್ವಜಾರೋಹಣ ಮಾಡಿದ್ದೆವು. ನಾವು ಧರ್ಮಕ್ಕಾಗಿ ಎಲ್ಲವನ್ನು ಮಾಡಲು ಸಿದ್ಧರಾಗಿದ್ದೇವೆ ಎಂದು ರಾಜಸ್ಥಾನ ದ ರಾಷ್ಟ್ರೀಯ ರಾಜಪೂತ ಕರಣಿ ಸೇನೆಯ ಪ್ರದೇಶಾಧ್ಯಕ್ಷ ಮನೋಹರ ಸಿಂಹ ಘೋಡಿವಾರಾ ಇವರು ಉದ್ಗರಿಸಿದರು. ಅವರು ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ 7ನೇ ದಿನದಂದು ಉಪಸ್ಥಿತರನ್ನು ಸಂಬೋಧಿಸಿ ಮಾತನಾಡುತ್ತಿದ್ದರು