ಧರ್ಮಶಿಕ್ಷಣ, ಧರ್ಮಜಾಗೃತಿ ಮತ್ತು ಧರ್ಮರಕ್ಷಣೆಗಾಗಿ ಸಂಸ್ಕೃತ ಭಾಷೆಯು ಉಪಯುಕ್ತ ! – ಡಾ. ಅಜಿತ ಚೌಧರಿ, ಪ್ರಾಂಶುಪಾಲರು, ಯಶವಂತರಾವ ಚವ್ವಾಣ ಪಾಲಿಟೆಕ್ನಿಕ್ ,ಬೀಡ

ಡಾ. ಅಜಿತ ಚೌಧರಿ, ಪ್ರಾಂಶುಪಾಲರು, ಯಶವಂತರಾವ ಚವ್ವಾಣ ಪಾಲಿಟೆಕ್ನಿಕ್ ,ಬೀಡ

ರಾಮನಾಥಿ, ಜೂನ 21(ಸುದ್ದಿ) – ಈ ದೇಶ ಅನಾದಿ ಕಾಲದಿಂದಲೂ ಹಿಂದೂ ರಾಷ್ಟ್ರವಾಗಿತ್ತು ಮತ್ತು ಮುಂದೆಯೂ ಹಿಂದೂ ರಾಷ್ಟ್ರವೇ ಆಗಿರಲಿದೆ. ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಧರ್ಮಶಿಕ್ಷಣ, ಧರ್ಮಜಾಗೃತಿ ಮತ್ತು ಧರ್ಮರಕ್ಷಣೆಗಾಗಿ ಪ್ರಯತ್ನಿಸಬೇಕು. ಅದಕ್ಕಾಗಿ ಸಂಸ್ಕೃತ ಭಾಷೆಯಲ್ಲದೇ ಪರ್ಯಾಯವಿಲ್ಲ. ನಮ್ಮ ಸಂಸ್ಕೃತಿಯಲ್ಲಿ ಎಲ್ಲ ಧರ್ಮಶಿಕ್ಷಣಗಳು ಸಂಸ್ಕೃತ ಭಾಷೆಯಲ್ಲಿವೆ. ಇದನ್ನು ಅರಿತುಕೊಳ್ಳಲು ಸಂಸ್ಕೃತ ಭಾಷೆಯನ್ನು ತಿಳಿದುಕೊಳ್ಳುವುದು ಆವಶ್ಯಕವಾಗಿದೆ. ಪರಿಣಾಮಕಾರಿ ರೀತಿಯಲ್ಲಿ ಧರ್ಮಜಾಗೃತಿಗೊಳಿಸಲು ಹಿಂದೂ ಧರ್ಮದ ಸ್ವರೂಪವನ್ನು ತಿಳಿದುಕೊಳ್ಳಬೇಕು. ಇದಕ್ಕಾಗಿ ಸಂಸ್ಕೃತ ಭಾಷೆ ಬರಬೇಕು.ಹಾಗೆಯೇ ಧರ್ಮದ ಮೇಲಿನ ಆಘಾತವನ್ನು ತಡೆಯಲು ಕೂಡ ಸಂಸ್ಕೃತ ಭಾಷೆ ಉಪಯುಕ್ತವಾಗಿದೆಯೆನ್ನುವುದನ್ನು ಶ್ರೀರಾಮಜನ್ಮಭೂಮಿ ಮೊಕದ್ದಮೆ ತೋರಿಸಿಕೊಟ್ಟಿದೆ. ಶ್ರೀರಾಮಜನ್ಮಭೂಮಿಯು ಪ್ರಭು ಶ್ರೀರಾಮನದ್ದೇ ಆಗಿದೆ ಎನ್ನುವುದನ್ನು ಸಿದ್ಧಗೊಳಿಸಲು ಸರ್ವೋಚ್ಚ ನ್ಯಾಯಾಲಯದ ಎದುರು ನಮ್ಮ ನ್ಯಾಯವಾದಿಗಳಿಗೆ ಸಂಸ್ಕೃತದಲ್ಲಿರುವ ಧರ್ಮಗ್ರಂಥಗಳ ದಾಖಲೆಗಳನ್ನು ಹಾಜರುಪಡಿಸಬೇಕಾಯಿತು ಎಂದು ಬೀಡನ ಯಶವಂತರಾವ ಚವ್ವಾಣ ಪಾಲಿಟೆಕ್ನಿಕ್ ಪ್ರಾಂಶುಪಾಲರು ಡಾ. ಅಜಿತ ಚೌಧರಿ ಇವರು `ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದ 6ನೇ ದಿನದಂದು (21.6.2023 ರಂದು) ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಅವರು ಮಾತನಾಡುತ್ತಾ, `ಜಗತ್ತಿನಾದ್ಯಂತ ಎಲ್ಲಿಯೋ ವಾಸಿಸುವ ಹಿಂದೂಗಳಲ್ಲಿ ಸಂಸ್ಕೃತದ ಒಡನಾಟವಿದೆ. ನಮ್ಮ ಧರ್ಮಾಚರಣೆಯ ಸಂಸ್ಕಾರ ಸಂಸ್ಕೃತದಲ್ಲಿದೆ.ನಮ್ಮ ದಿನದ ಪ್ರಾರಂಭ ಮತ್ತು ಅಂತ್ಯವೂ ಸಂಸ್ಕೃತ ಶ್ಲೋಕದಿಂದಲೇ ಆಗುತ್ತದೆ. ಮೆಕಾಲೆ ಶಿಕ್ಷಣಪದ್ಧತಿಯು ನಮ್ಮನ್ನು ಸಂಸ್ಕೃತ ಭಾಷೆಯಿಂದ ಪ್ರತ್ಯೇಕಿಸಿದ್ದರೂ, ಇಂದಿಗೂ ದೇವಭಾಷೆ ನಮ್ಮ ಜೀವನದ ಅಭಿನ್ನ ಅಂಶವಾಗಿದೆ. ಇಂದು ವಿವಿಧ ಸಂಶೋಧಕರಿಂದ ಸಂಸ್ಕೃತ ಗಣಕಯಂತ್ರದ `ಪ್ರೊಸೆಸಿಂಗ’ ಗಾಗಿ ಅತ್ಯಂತ ಉಪಯುಕ್ತವಾಗಿದೆಯೆಂದು ಸಿದ್ಧವಾಗಿದೆ. ನಮ್ಮ ಪ್ರಾಚೀನ ದೇವಸ್ಥಾನಗಳು ಕೇವಲ ಪ್ರಾರ್ಥನಾಸ್ಥಳಗಳಾಗಿರಲಿಲ್ಲ, ಅವು ಶಿಕ್ಷಣ ಮತ್ತು ತಂತ್ರಜ್ಞಾನಗಳ ಕೇಂದ್ರವಾಗಿತ್ತು. ಸಾವಿರಾರು ವರ್ಷಗಳ ಮೊದಲು ನಮ್ಮ ಋಷಿಮುನಿಗಳು ಸಂಸ್ಕೃತ ಭಾಷೆಯಲ್ಲಿ ಅನೇಕ ಸಂಶೋಧನೆಯನ್ನು ಬರೆದಿಟ್ಟಿದ್ದಾರೆ. ಎಲ್ಲ ಅರ್ಥಗಳಿಂದಲೂ ಆದರ್ಶವಾಗಿರುವ ಇಂತಹ ದೇವವಾಣಿ ಸಂಸ್ಕೃತವನ್ನು ವ್ಯಾವಹಾರಿಕ ಭಾಷೆಯೆಂದು ಮಾಡಲು ಪ್ರಯತ್ನಿಸಬೇಕು; ಪ್ರತಿಯೊಂದು ಕುಟುಂಬವೂ ಅವರ ಮಕ್ಕಳನ್ನು ಚಿಕ್ಕಂದಿನಿಂದಲೇ ಆಂಗ್ಲಭಾಷೆಯಲ್ಲ, ಸಂಸ್ಕೃತ ಭಾಷೆಯನ್ನು ಕಲಿಸುವುದು ಆವಶ್ಯಕವಾಗಿದೆ ಎಂದು ಹೇಳಿದರು.