ರಾಮನಾಥಿ , ಜೂನ್ ೨೧(ವಾರ್ತೆ) – ಧರ್ಮದ ರಕ್ಷಣೆ ಮಾಡಬೇಕಿದ್ದರೆ, ಮೊದಲು ಸ್ವತಃ ಧರ್ಮಚರಣೆ ಮಾಡಬೇಕು. ಹಿಂದೂ ಯುವಕರ ಹಣೆಯಲ್ಲಿ ತಿಲಕ ಕಾಣುವುದಿಲ್ಲ. ನಮ್ಮ ಪೂರ್ವಿಕರು ಜನಿವಾರ, ತಿಲಕ ಮತ್ತು ಶಿಖೆ (ಜುಟ್ಟು) ಇದರ ರಕ್ಷಣೆಗಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ಹಿಂದೂ ಯುವಕರು ಮಾತ್ರ ಹಣೆಗೆ ತಿಲಕ ಹಚ್ಚುವುದಿಲ್ಲ. ಹಿಂದೂ ಧರ್ಮದ ರಕ್ಷಣೆಗಾಗಿ ಯುವಕರನ್ನು ಪ್ರೇರೇಪಿಸಬೇಕು. ಉಲ್ಲಾಸನಗರದಲ್ಲಿ ಸಿಂಧಿ ಬಂದವರು ಮಧ್ಯಾಹ್ನದ ನಂತರ ಅಂಗಡಿ ಬಾಗಿಲು ಮುಚ್ಚುತ್ತಾರೆ. ಮಧ್ಯಾಹ್ನ ನಂತರದ ಸಮಯದಲ್ಲಿ ಈ ಅಂಗಡಿಗಳು ಕ್ರೈಸ್ತರು ಬಾಡಿಗೆ ಪಡೆದು ಅಲ್ಲಿ ಅವರ ಕಾರ್ಯ ಆರಂಭಿಸಿದ್ದಾರೆ. ಇಲ್ಲಿಯ ಕೆಲವು ಮನೆಗಳಲ್ಲಿ ಕ್ರೈಸ್ತರು ಪ್ರಾರ್ಥನೆ ಆರಂಭಿಸಿದ್ದಾರೆ. ಇಂತಹ ಸಿಂಧಿ ಜನರ ಸಂಬಂಧಿಕರ ಮನೆಯಲ್ಲಿ ನಾವು ಸತ್ಸಂಗ ಆರಂಭಿಸಿದ್ದೇವೆ. ಹಿಂದೂಗಳು ನಮ್ಮ ಧರ್ಮ ಗ್ರಂಥದ ಅಭ್ಯಾಸ ಮಾಡಿದರೆ ಹಿಂದೂಗಳ ಮತಾಂತರ ಆಗುವುದಿಲ್ಲ ಎಂದು ಭಾರತೀಯ ಸಿಂಧೂ ಸಭೆಯ ಪಶ್ಚಿಮ ವಿದರ್ಭ ಸಂಪರ್ಕ ಪ್ರಮುಖರಾದ ಶ್ರೀ. ಪ್ರಕಾಶ ಸಿರವಾಣಿ ಇವರು ಹೇಳಿದರು. ಅವರು ಇಲ್ಲಿ ನಡೆಯುತ್ತಿರುವ ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ಆರನೆಯ ದಿನ (೩೧.೬.೨೦೨೩ ರಂದು ) ಉಪಸ್ಥಿತರಿಗೆ ಸಂಭೋಧಿಸುತ್ತಿದ್ದರು.
(ಸೌಜನ್ಯ : ಹಿಂದೂ ಜನಜಾಗೃತಿ ಸಮಿತಿ)