ರಾಮನಾಥಿ ( ಫೊಂಡಾ), ಜೂನ್ ೨೨ (ವಾರ್ತೆ) – ಕಳೆದ ೧೩ ವರ್ಷಗಳಿಂದ ನಾವು ಗೋರಕ್ಷಣೆಯ ಕಾರ್ಯ ಮಾಡುತ್ತಿದ್ದೇವೆ. ಇಲ್ಲಿಯವರೆಗೆ ಕಟುಕರ ಕೈಯಿಂದ ನಾವು ೨ ಲಕ್ಷ ಗೋವುಗಳನ್ನು ಬಿಡುಗಡೆಗೊಳಿಸಿದ್ದೇವೆ. ಗೋಮಾತೆಯ ಕಳ್ಳ ಸಾಗಾಣಿಕೆ ಮಾಡುವ ವಾಹನಗಳಲ್ಲಿ ಹಸುಗಳನ್ನು ತುರುಕಲಾಗುತ್ತದೆ. ಅವುಗಳ ಮೂಗಿಗೆ ಹಗ್ಗ ಹಾಕಿ ಅವುಗಳ ದುರಾವಸ್ಥೆ ಮಾಡಲಾಗುತ್ತದೆ. ಸರಕಾರದಿಂದ ೨ ಸಾವಿರ ನೋಟು ಬಂದಿ ಮಾಡುವ ನಿರ್ಣಯ ಕೂಡಲೇ ತೆಗೆದುಕೊಳ್ಳಬಹುದಾದರೇ ಗೋಮಾತೆಯನ್ನು ‘ರಾಷ್ಟ್ರಮಾತೆ’ ಎಂದು ಘೋಷಿಸುವ ನಿರ್ಣಯ ಕೂಡಲೇ ತೆಗೆದುಕೊಳ್ಳಲು ಏಕೆ ಸಾಧ್ಯವಿಲ್ಲ ? ರಾಷ್ಟ್ರಪತಿ ದ್ರೌಪದಿ ಮೂರ್ಮೂ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಇವರಿಗೆ, ಲೋಕಸಭೆಯ ಚುನಾವಣೆಯ ಮೊದಲು ಗೋಮಾತೆಯನ್ನು ರಾಷ್ಟ್ರಮಾತೆ ಎಂದು ಘೋಷಿಸಿರಿ ಇಲ್ಲವಾದರೆ ಬೀದಿಗೆ ಇಳಿದು ನಾವು ಪ್ರತಿಭಟನೆ ನಡೆಸುವೆವು ಎಂದು ವಿನಂತಿಸಿತ್ತೇವೆ. ಜನ್ಮದಾತೆ ತಾಯಿಯ ನಂತರ ಗೋವು ನಮ್ಮ ತಾಯಿ ಆಗಿದ್ದಾಳೆ. ನಾವು ಗೋಮಾತೆಯ ಹಾಲು ಕುಡಿಯುತ್ತೇವೆ; ಆದರೆ ಆಕೆಯ ರಕ್ಷಣೆ ಮಾಡುವಲ್ಲಿ ನಾವು ಕಡಿಮೆ ಬೀಳುತ್ತೇವೆ. ನಾಂದೇಡದಲ್ಲಿ ಗೋರಕ್ಷಕರ ಹತ್ಯೆ ಮಾಡಲಾಯಿತು. ಗೋರಕ್ಷಕರಿಗೆ ಸರಕಾರದಿಂದ ಸಹಾಯ ದೊರೆಯುವುದಿಲ್ಲ. ಗೋಮಾತೆಯ ರಕ್ಷಣೆ ಮಾಡುವುದಕ್ಕಾಗಿ ಎಲ್ಲಾ ಹಿಂದೂಗಳು ಒಗ್ಗಟ್ಟಾಗಬೇಕು, ಎಂದು ಅಮರಾವತಿಯ ಶ್ರೀ ಮಹಾಕಾಳಿ ಮಾತಾ ಪ್ರತಿಷ್ಠಾನದ ಶ್ರೀ ೧೦೦೮ ಮಹಾಶಕ್ತಿ ಪೀಠಾಧೀಶ್ವರ ಶ್ರೀ ಶಕ್ತಿಜಿ ಮಹಾರಾಜ ಇವರು ವೈಷ್ವಿಕ ಹಿಂದೂ ರಾಷ್ಟ್ರ ಮಹೋತ್ಸವದಲ್ಲಿ ಹೇಳಿದರು