ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದಲ್ಲಿ ‘ಸಾಧನೆ ಪ್ರತ್ಯಕ್ಷ ಕಲಿಸುವ ಪದ್ದತಿ’ – ಖಂಡ 1 ಇ-ಪುಸ್ತಕ ಲೋಕಾರ್ಪಣೆ !

ಹಿಂದೂ ರಾಷ್ಟ್ರ ಸ್ಥಾಪನೆಯ ಸಂಕಲ್ಪವನ್ನು ಪೂರ್ಣಗೊಳಿಸಲು ನಾವು ಹುಟ್ಟಿದ್ದೇವೆ ! – ಟಿ. ರಾಜಾ ಸಿಂಹ, ಶಾಸಕರು, ತೆಲಂಗಾಣ

ಟಿ. ರಾಜಾ ಸಿಂಹ, ಶಾಸಕರು, ತೆಲಂಗಾಣ

ನನಗೆ ಹಿಂದುತ್ವಕ್ಕಾಗಿ ಬದುಕಬೇಕಿದೆ. ಸಾವು ಇಂದೋ ನಾಳೆಯೋ ಬರುವುದು ಖಚಿತ. ಆದರೆ ಇತಿಹಾಸದಲ್ಲಿ ದಾಖಲಾಗುವಂತಹ ಸಾವು ಏಕೆ ಬೇಡ ? ದೇಶ ಮತ್ತು ಧರ್ಮಕ್ಕಾಗಿ ನಾವು ಸಾಯಲೂ ಸಿದ್ಧರಾಗಿದ್ದೇವೆ. ಹಿಂದೂ ರಾಷ್ಟ್ರ ಸ್ಥಾಪನೆಯ ಸಂಕಲ್ಪವನ್ನು ಪೂರ್ಣಗೊಳಿಸಲು ನಾವು ಹುಟ್ಟಿದ್ದೇವೆ. ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಆಡಳಿತಗಾರರು ಮತಾಂಧರ ಓಲೈಕೆ ಮಾಡುತ್ತಿದ್ದಾರೆ. ಮುಸಲ್ಮಾನರ ಓಲೈಕೆಗಾಗಿ ಮಸೀದಿಗಳನ್ನು ನಿರ್ಮಿಸಲು, ಮದರಸಾಗಳಿಗೆ ಅನುದಾನ ನೀಡಲು, ಮೌಲ್ವಿಗಳಿಗೆ ವೇತನ ನೀಡಲು ಹಣ ನೀಡಲಾಗುತ್ತದೆ; ಗೋರಕ್ಷಣೆ ಮಾಡುವ ಹಿಂದೂಗಳ ವಿರುದ್ಧ ಅಪರಾಧಗಳು ದಾಖಲಾಗುತ್ತವೆ. ಬಂಗಾಲದಂತೆ ತೆಲಂಗಾಣದಲ್ಲಿಯೂ ಹಿಂದೂಗಳ ಮೇಲೆ ದಬ್ಬಾಳಿಕೆ ನಡೆಯುತ್ತಿದೆ ಎಂದು ತೆಲಂಗಣಾದ ಭಾಜಪದ ಪ್ರಖರ ಹಿಂದುತ್ವನಿಷ್ಠ ಶಾಸಕ ಶ್ರೀ. ಟಿ. ರಾಜಾಸಿಂಹ ಇವರು ಪ್ರತಿಪಾದಿಸಿದರು. ಅವರು ‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದಲ್ಲಿ ‘ತೆಲಂಗಾಣದಲ್ಲಿ ಹಿಂದುದ್ರೋಹಿ ಸರಕಾರದ ದಮನನೀತಿ ಹಾಗೂ ಹಿಂದೂ ರಾಷ್ಟ್ರದ ಸಂಘರ್ಷ’ ಈ ವಿಷಯದಲ್ಲಿ ಮಾತನಾಡುತ್ತಿದ್ದರು.

(ಸೌಜನ್ಯ:  ಹಿಂದೂ ಜನಜಾಗೃತಿ ಸಮಿತಿ)

ಟಿ. ರಾಜಾಸಿಂಹ ಅವರು ತಮ್ಮ ಮಾತನ್ನು ಮುಂದುವರೆಸುತ್ತಾ, ”ಹಿಂದೂ ಧರ್ಮದ ಮೇಲಿನ ದಾಳಿಗಳನ್ನು ತಡೆಯಲು ಮತ್ತು ಹಿಂದುತ್ವವನ್ನು ರಕ್ಷಿಸಲು ಹಿಂದೂಗಳು ನನ್ನನ್ನು ಆರಿಸಿದ್ದಾರೆ. ಅನೇಕ ರಾಜ್ಯಗಳಲ್ಲಿ ಹಿಂದೂಗಳ ಹತ್ಯೆಯಾಗುತ್ತಿದ್ದು ಮುಂಬರುವ ಬಿಕ್ಕಟ್ಟಿನ ಬಗ್ಗೆ ಹಿಂದೂಗಳಿಗೆ ತಿಳಿದಿಲ್ಲ. ತನ್ನ ರಕ್ಷಣೆಗಾಗಿ ಹಿಂದೂ ಯುವಕರು ಮತ್ತು ಯುವತಿಯರು ಸ್ವರಕ್ಷಣಾ ತರಬೇತಿಯನ್ನು ತೆಗೆದುಕೊಳ್ಳುವುದು ಅವಶ್ಯಕವಾಗಿದೆ. ಆಗ ಮಾತ್ರ ಹಿಂದೂಗಳು ತಮ್ಮನ್ನು ಮತ್ತು ಧರ್ಮವನ್ನು ರಕ್ಷಿಸಲು ಸಾಧ್ಯ. ಎಲ್ಲಾ ಹಿಂದೂಗಳು ಒಗ್ಗೂಡಿ ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಲು ಒತ್ತಾಯಿಸಿದರೆ, ಭಾರತವು ಹಿಂದೂ ರಾಷ್ಟ್ರವಾಗಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಹಿಂದೂ ರಾಷ್ಟ್ರಕ್ಕಾಗಿ ಹಿಂದೂಗಳು ಸರಕಾರದ ಮೇಲೆ ಒತ್ತಡ ಹೇರಬೇಕು” ಎಂದು ಹೇಳಿದರು.

ಮುಂದಿನ ಅಧಿವೇಶನಕ್ಕೂ ಮುನ್ನ 1 ಸಾವಿರ ಹಳ್ಳಿಗಳಲ್ಲಿ ಹನುಮಾನ್ ಚಾಲೀಸಾವನ್ನು ಆರಂಭಿಸುವೆ ! – ಶ್ರೀ. ಕಮಲೇಶ ಕಟಾರಿಯಾ

ಶ್ರೀ. ಕಮಲೇಶ ಕಟಾರಿಯಾ

ಈ ಸಂದರ್ಭದಲ್ಲಿ ಛತ್ರಪತಿ ಸಂಭಾಜಿನಗರದಲ್ಲಿನ ‘ಸಂಕಲ್ಪ ಹಿಂದೂ ರಾಷ್ಟ್ರ ಅಭಿಯಾನಾ’ದ ಅಧ್ಯಕ್ಷ ಶ್ರೀ. ಕಮಲೇಶ ಕಟಾರಿಯಾ ಇವರು ಮಾತನಾಡುತ್ತಾ, ‘ಹಿಂದೂ ರಾಷ್ಟ್ರದ ಕಾರ್ಯದಲ್ಲಿ ಹಿಂದೂಗಳನ್ನು ತೊಡಗಿಸಿಕೊಳ್ಳಲು ನಾವು 114 ಹಳ್ಳಿಗಳಲ್ಲಿ ಪ್ರತಿ ಶನಿವಾರ ‘ಹನುಮಾನ್ ಚಾಲೀಸಾ’ ಪಠಿಸುತ್ತೇವೆ. ಈ ಮೂಲಕ 4 ಸಾವಿರಕ್ಕೂ ಹೆಚ್ಚು ಹಿಂದೂಗಳು ಒಂದಾಗುತ್ತಾರೆ. ಮುಂದಿನ ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವಕ್ಕೆ ಬರುವ ಮುನ್ನ 1 ಸಾವಿರ ಹಳ್ಳಿಗಳಲ್ಲಿ ಹನುಮಾನ್ ಚಾಲೀಸಾ ಮಾಡುವ ಮೂಲಕ 30 ಸಾವಿರ ಯುವಕರನ್ನು ಒಗ್ಗೂಡಿಸಲು ನಾವು ಸಂಕಲ್ಪ ಮಾಡಿದ್ದೇವೆ ಎಂದು ಹೇಳಿದರು.

(ಸೌಜನ್ಯ:  ಹಿಂದೂ ಜನಜಾಗೃತಿ ಸಮಿತಿ)

ನಾಂದೇಡನಲ್ಲಿ ಗೋರಕ್ಷಕರ ಮೇಲೆ ನಡೆದ ದಾಳಿಯ ಬಗ್ಗೆ ‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದಲ್ಲಿ ಖಂಡನೆ !

ನಾಂದೇಡ್ (ಮಹಾರಾಷ್ಟ್ರ) ನಲ್ಲಿ ಜೂನ್ 19 ರಂದು ರಾತ್ರಿ ಚತುಷ್ಚಕ್ರ ವಾಹನದಲ್ಲಿ ಹೋಗುತ್ತಿದ್ದ ಗೋರಕ್ಷಕರ ಮೇಲೆ ಗುಂಪೊಂದು ಮಾರಣಾಂತಿಕ ಹಲ್ಲೆ ಮಾಡಿತು. ಈ ದಾಳಿಯಲ್ಲಿ 4 ಗೋರಕ್ಷಕರು ಗಂಭೀರವಾಗಿ ಗಾಯಗೊಂಡಿದ್ದು, ಗೋರಕ್ಷಕರೊಬ್ಬರು ಸಾವನ್ನಪ್ಪಿದ್ದಾರೆ. ಗೋರಕ್ಷಕರ ಮೇಲಿನ ಈ ದಾಳಿಯನ್ನು ಖಂಡಿಸಿ ‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದಲ್ಲಿ ಖಂಡನಾ ಠರಾವನ್ನು ಅಂಗೀಕರಿಸಲಾಯಿತು.

ಈ ಸಂದರ್ಭದಲ್ಲಿ ಅಮರಾವತಿಯ ಶ್ರೀ 1008 ಮಹಾಶಕ್ತಿ ಪೀಠಾಧೀಶ್ವರ ಶ್ರೀ ಶಕ್ತಿಜಿ ಮಹಾರಾಜರ ಶುಭ ಹಸ್ತದಿಂದ ‘ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಅಠವಲೆ ಇವರ ಅಮೂಲ್ಯ ಬೋಧನೆಗಳು’ (ಖಂಡ 1) : ಸಾಧನೆ ಪ್ರತ್ಯಕ್ಷ ಕಲಿಸುವ ಪದ್ದತಿ’ ಈ ಮರಾಠಿ ಮತ್ತು ಹಿಂದಿ ಭಾಷೆಯ ‘ಇ-ಪುಸ್ತಕ’ದ ಲೋಕಾರ್ಪಣೆ ಮಾಡಲಾಯಿತು.

‘ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಅಠವಲೆ ಇವರ ಅಮೂಲ್ಯ ಬೋಧನೆಗಳು’ (ಖಂಡ 1) : ಸಾಧನೆ ಪ್ರತ್ಯಕ್ಷ ಕಲಿಸುವ ಪದ್ದತಿ’ ಈ ಮರಾಠಿ ಮತ್ತು ಹಿಂದಿ ಭಾಷೆಯ ‘ಇ-ಪುಸ್ತಕ’ದ ಲೋಕಾರ್ಪಣೆ ಮಾಡುತ್ತಿರುವ ಎಡದಿಂದ ಶ್ರೀ. ಕಮಲೇಶ ಕಟರಿಯಾ, ಶ್ರೀ 1008 ಮಹಾಶಕ್ತಿ ಪೀಠಾಧೀಶ್ವರ ಶ್ರೀ ಶಕ್ತಿಜಿ ಮಹಾರಾಜ, ಪೂ. ರಮಾನಂದ ಗೌಡ ಮತ್ತು ನ್ಯಾಯವಾದಿ ಆಲೋಕ ತಿವಾರಿ