ಚಿಕ್ಕ ಸಂಘಟನೆಗಳನ್ನು ಒಗ್ಗೂಡಿಸಿ ಹಿಂದುತ್ವದ ಕಾರ್ಯವನ್ನು ಮಾಡಬೇಕು ! – ಪೂ. ರಾಮಬಾಲಕ ದಾಸಜಿ ಮಹಾತ್ಯಾಗಿ ಮಹಾರಾಜ, ಸಂಚಾಲಕರು, ಶ್ರೀ ಜಾಮಡಿ ಪಾಟೇಶ್ವರಧಾಮ ಸೇವಾ ಸಂಸ್ಥಾನ, ಪಾಟೇಶ್ವರಧಾಮ, ಛತ್ತೀಸಗಢ

ಪೂ. ರಾಮಬಾಲಕ ದಾಸಜಿ ಮಹಾತ್ಯಾಗಿ ಮಹಾರಾಜ, ಸಂಚಾಲಕರು, ಶ್ರೀ ಜಾಮಡಿ ಪಾಟೇಶ್ವರಧಾಮ ಸೇವಾ ಸಂಸ್ಥಾನ, ಪಾಟೇಶ್ವರಧಾಮ, ಛತ್ತೀಸಗಢ

ವಿದ್ಯಾಧೀರಾಜ ಸಭಾಗೃಹ, ಜೂನ್ ೨೧ (ಸುದ್ಧಿ.) – ಕೇವಲ ಬ್ಯಾಸಪೀಠದಿಂದ ಘೋಷಣೆ ಮಾಡಿದರೆ ಹಿಂದೂ ರಾಷ್ಟ್ರದ ಸ್ಥಾಪನೆ ಆಗುವುದಿಲ್ಲ. ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಪ್ರತ್ಯಕ್ಷ ಕಾರ್ಯ ಮಾಡುವ ಅವಶ್ಯಕತೆ ಇದೆ. ಬೇರೆ ಬೇರೆ ಪದ್ಧತಿಯಿಂದ ಕೆಲಸ ಮಾಡುವುದರಿಂದ ಹಿಂದುಗಳ ಶಕ್ತಿ ವಿಭಜಿಸಲ್ಪಡುತ್ತದೆ. ಗ್ರಾಮ ಗ್ರಾಮಗಳಲ್ಲಿ ಮಹಿಳೆಯರ ಗುಂಪುಗಳು ಸರಕಾರಿ ಯೋಜನೆಯ ಮೂಲಕ ಕೆಲಸ ಮಾಡುತ್ತವೆ. ಈ ಮಹಿಳಾ ಗುಂಪುಗಳನ್ನು ಧರ್ಮಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಗ್ರಾಮಗಳಲ್ಲಿ ಯಾವ ರೀತಿ ಸ್ವಚ್ಛತಾ ಅಭಿಯಾನ ನಡೆಸಲಾಗುತ್ತದೆ, ಅದೇ ರೀತಿ ಸಂಸ್ಕಾರಗಳ ಪ್ರಸಾರಕ್ಕಾಗಿ ಅಭಿಯಾನ ನಡೆಸಬೇಕು. ಈ ರೀತಿ ಸಂಸ್ಕಾರ ವಾಹಿನಿಯ ಮೂಲಕ ಛತ್ತೀಸಗಡದಲ್ಲಿ ೧೫ ಸಾವಿರ ಜನರು ಕಾರ್ಯನಿರತರಾಗಿದ್ದಾರೆ. ಈ ಸಂಖ್ಯೆ ೧ ಲಕ್ಷದ ವರೆಗೆ ತಲುಪಿಸುವುದು ಸಂಕಲ್ಪ ನಮ್ಮದಾಗಿದೆ. ಎಲ್ಲಾ ಕೆಲಸ ಮಾಡುವುದಕ್ಕಾಗಿ ಯಾವ ಸಾಹಿತ್ಯ ಅವಶ್ಯಕತೆಯಾಗಿದೆ, ಅದೆಲ್ಲವೂ ಸಂಸ್ಕಾರ ವಾಹಿನಿಯಿಂದ ಉಪಲಬ್ಧ ಮಾಡಿಕೊಡಲಾಗುತ್ತದೆ. ಈ ಸಾಹಿತ್ಯ ನೀಡುವುದಕ್ಕಾಗಿ ನಿಧಿಯ ಅವಶ್ಯಕತೆ ಇರುತ್ತದೆ; ಆದರೆ ಸಂತರ ಮಾರ್ಗದರ್ಶನದಲ್ಲಿ ಕಾರ್ಯ ಮಾಡುವುದರಿಂದ ಈ ಅಡಚಣೆಗಳು ಬರುವುದಿಲ್ಲ. ರಾಜಕೀಯ ಕಾರ್ಯದ ಹೊರಗೆ ಬಂದು ಧರ್ಮಕ್ಕಾಗಿ ಕಾರ್ಯ ಮಾಡಬೇಕು. ಆರ್ಯ ಚಾಣಕ್ಯರು ರಾಜಕೀಯ ಶಕ್ತಿಯ ಉಪಯೋಗ ಧರ್ಮಕಾರ್ಯಕ್ಕಾಗಿ ಮಾಡಿಕೊಂಡರು. ಅದೇ ಆದರ್ಶ ಪಡೆದು ನಾವು ಧರ್ಮಕಾರ್ಯ ಮಾಡುತ್ತಿದ್ದೇವೆ. ಈ ಹಿಂದೆ ರಾಜಕೀಯ ಪಕ್ಷಗಳು ನಮ್ಮನ್ನು ಉಪಯೋಗಿಸಿದರು. ಈಗ ಮಾತ್ರ ರಾಜಕೀಯ ಶಕ್ತಿಯನ್ನು ನಾವು ಧರ್ಮಕಾರ್ಯಕ್ಕಾಗಿ ಉಪಯೋಗಿಸಿಕೊಳ್ಳಬೇಕು. ಕ್ರೈಸ್ತ ಮಿಶನರಿಗಳು ಆಮಿಷವೊಡ್ಡಿ ಬಡ ಹಿಂದುಗಳನ್ನು ಮತಾಂತರಿಸುತ್ತಾರೆ; ಆದರೆ ನಾವು ಹಿಂದುಗಳಿಗೆ ಅವಶ್ಯಕ ಇರುವ ಸಾಹಿತ್ಯ ಉಪಲಬ್ಧ ಮಾಡಿಕೊಡುತ್ತೇವೆ. ಆದ್ದರಿಂದ ಛತ್ತಿಸಗಡದಲ್ಲಿ ಮತಾಂತರ ತಡೆಯಲಾಗುತ್ತಿದೆ. ಯಾರು ಮತಾಂತರಗೊಂಡಿದ್ದಾರೆ ಅವರನ್ನು ದೂರಸರಿಸದೇ ಅವರ ಜೊತೆಗೆ ಪ್ರೀತಿಯಿಂದ ಬಾಂಧವ್ಯ ಬೆಳೆಸಬೇಕು. ಹೀಗೆ ಮಾಡಿದರೆ ಹಿಂದುಗಳು ಮತಾಂತರವಾಗುವುದಿಲ್ಲ. ಪ್ರಭು ಶ್ರೀರಾಮನು ವನವಾಸ ಕಾಲದಲ್ಲಿ ವಾನರರ ಜೊತೆಗೆ ವನವಾಸಿಗಳಿಗೂ ಪ್ರೀತಿಸಿ ಅವರನ್ನು ತಮ್ಮ ಕಾರ್ಯದಲ್ಲಿ ಜೋಡಿಸಿದರು. ಪ್ರಭು ಶ್ರೀರಾಮನ ಆದರ್ಶ ಪಡೆದು ನಾವು ಕಾರ್ಯ ಮಾಡಬೇಕು, ಎಂದು ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ಆರನೇ ದಿನದಂದು ಛತ್ತೀಸಗಡದ ಶ್ರೀ ಜಾಮಡಿ ಪಾಟೇಶ್ವರಧಾಮ ಸೇವಾ ಸಂಸ್ಥಾನದ ಸಂಚಾಲಕರಾದ ಪೂ. ರಾಮಬಾಲಕ ದಾಸಜಿ ಮಹಾತ್ಯಾಗಿ ಮಹಾರಾಜರು ಹೇಳಿದರು