ಹಿಂದೂಗಳ ಗುರುತುಗಳಿಗೆ ಅಕ್ರಮಣಕಾರರು ನೀಡಿರುವ ಹೆಸರ ಬದಲಾಯಿಸುವುದು, ಇದು ನಮ್ಮ ರಾಷ್ಟ್ರೀಯ ಕರ್ತವ್ಯ ! – ದುರ್ಗೇಶ ಪರುಳಕರ, ಲೇಖಕರು ಮತ್ತು ವ್ಯಾಖ್ಯಾನಕಾರರು, ಠಾಣೆ

ದುರ್ಗೇಶ ಪರುಳಕರ, ಲೇಖಕರು ಮತ್ತು ವ್ಯಾಖ್ಯಾನಕಾರರು, ಠಾಣೆ

ಮೊಘಲರ ಒಬ್ಬನೇ ಒಬ್ಬ ಬಾದಶಹ ಕೂಡ ಯಾವುದೇ ಮಾನವೀಯತೆಯ ಕಾರ್ಯ ಮಾಡಿಲ್ಲ. ಮೊಗಲ ಬಾದಶಹರ ಕ್ರೂರತೆ ಗುರುತಾಗಿದೆ. ತದ್ವಿರುದ್ಧ ಛತ್ರಪತಿ ಶಿವಾಜಿ ಮಹಾರಾಜ, ಛತ್ರಪತಿ ಸಂಭಾಜಿ ಮಹಾರಾಜ ಇವರು ರಾಷ್ಟ್ರಧರ್ಮ ಮತ್ತು ಸಂಪೂರ್ಣ ಮಾನವನ ಕಲ್ಯಾಣಕ್ಕಾಗಿ ಕಾರ್ಯ ಮಾಡಿದ್ದಾರೆ. ತಾಜಮಹಲ ಇದು ತೇಜೋಮಹಲ ಆಗಿದೆ, ಕುತುಬಮಿನಾರ ಇದು ವಿಷ್ಣು ಸ್ತಂಭವಾಗಿದೆ ಹಾಗೂ ತಥಾಕಥಿತ ಜ್ಞಾನವಾಪಿ ಮಸೀದಿ ಇದು ಭಗವಾನ ಶಿವನ ಮಂದಿರವಾಗಿದೆ. ಆಕ್ರಮಣಕಾರರು ನೀಡಿರುವ ಹೆಸರು, ಇದು ಆಕ್ರಮಣಕಾರರ ವೈಭವೀಕರಣವಾಗಿದೆ. ನಮ್ಮ ಇತಿಹಾಸ ಪರಾಭವದದ್ದಾಗಿಲ್ಲ ಅದು ವಿಜಯದ್ದಾಗಿದೆ. ಶರದ ಪವಾರ ಇವರಿಗೆ ಛತ್ರಪತಿ ಸಂಭಾಜಿ ನಗರಕ್ಕೆ ‘ಔರಂಗಾಬಾದ’ ಅನ್ನುವುದಿದ್ದರೆ ಅವರು ಅವಶ್ಯವಾಗಿ ಹೇಳಲಿ ಆದರೆ ನನ್ನ ಮುಂದೆ ಇರುವ ಪ್ರಶ್ನೆ ಎಂದರೆ ‘ಈ ರಾಷ್ಟ್ರದ ರಾಷ್ಟ್ರ ಪುರುಷ ಛತ್ರಪತಿ ಶಿವಾಜಿ ಮಹಾರಾಜರು ಅಥವಾ ಔರಂಗಜೇಬನೋ ?’ ‘ಛತ್ರಪತಿ ಸಂಭಾಜಿ ಮಹಾರಾಜರನ್ನು ಔರಂಗಜೇಬನು ಚಿತ್ರಹಿಂಸೆ ನೀಡಿ ಹತ್ಯೆ ಮಾಡಿದನು ಇದು ಯೋಗ್ಯವಾಗಿತ್ತೆ ?’ ‘ಶರದ ಪವಾರ ಇವರ ಮನಸ್ಸಿನಲ್ಲಿ ಛತ್ರಪತಿ ಸಂಭಾಜಿ ಮಹಾರಾಜರ ಕ್ಕಿಂತಲೂ ಔರಂಗಜೇಬನ ವಿಷಯವಾಗಿ ಹೆಚ್ಚು ಗೌರವ ಇದೆಯೇ ?’ ದೇಶ ಸ್ವತಂತ್ರ ಆದ ನಂತರ ಆಕ್ರಮಣಕಾರರು ಅಲ್ಲಲ್ಲಿಯ ಸ್ಥಳಗಳಿಗೆ ನೀಡಿರುವ ಹೆಸರನ್ನು ಬದಲಾಯಿಸುವುದು. ಇದು ನಮ್ಮ ರಾಷ್ಟ್ರೀಯ ಕರ್ತವ್ಯವಾಗಿದೆ. ಔರಂಗಜೇಬನು ನಮಗೆ ಪ್ರಾತಃ ಸ್ಮರಣೀಯವಲ್ಲ ಆದರೆ ಛತ್ರಪತಿ ಶಿವಾಜಿ ಮಹಾರಾಜ ಮತ್ತು ಧರ್ಮವೀರ ಸಂಭಾಜಿ ಮಹಾರಾಜ ಇವರು ನಮಗಾಗಿ ಪ್ರಾತಸ್ಮರಣೆ ಆಗಿದ್ದಾರೆ. ನಮ್ಮ ಪೂರ್ವಜರು ನೀಡಿರುವ ಹೆಸರು ಬದಲಾಯಿಸುವುದರ ಹಿಂದೆ ನಮ್ಮ ಸಂಸ್ಕೃತಿಯ ನಾಶ ಮಾಡುವುದಾಗಿತ್ತು, ಇದು ಆಕ್ರಮಣಕಾರರ ಷಡ್ಯಂತ್ರವಾಗಿತ್ತು. ಆದ್ದರಿಂದ ಆಕ್ರಮಕರು ನೀಡಿರುವ ಹೆಸರುಗಳ ಬದಲಾಯಿಸುವುದು ಇದು ನಮ್ಮ ರಾಷ್ಟ್ರೀಯ ಕರ್ತವ್ಯವಾಗಿದೆ, ಎಂದು ಠಾಣೆಯ ಲೇಖಕರು ಮತ್ತು ವ್ಯಾಖ್ಯಾನಕಾರರಾದ ಶ್ರೀ. ದುರ್ಗೇಶ ಪರುಳಕರ ಇವರು ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ಆರನೆಯ ದಿನ ಹೇಳಿದರು.


(ಸೌಜನ್ಯ – Hindu Janajagruti Samiti)