ರಾಮನಾಥ ದೇವಸ್ಥಾನ – ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ಐದನೇ ದಿನದಂದು ಮಾತನಾಡುತ್ತಾ ಛತ್ತೀಸಗಡದ ನ್ಯಾಯವಾದಿ (ಸೌ.) ರಚನಾ ನಾಯ್ಡು ಇವರು, ‘ಛತ್ತೀಸಗಡದ ಆದಿವಾಸಿಗಳು ಹಿಂದೂಗಳೇ ಆಗಿದ್ದಾರೆ. ಅವರ ಮೇಲೆ ಕ್ರಿಶ್ಚಿಯನ್ ಧರ್ಮಪ್ರಚಾರಕರು ಮತ್ತು ನಕ್ಸಲೀಯರಿಂದ ಬಹಳ ದೌರ್ಜನ್ಯವಾಗುತ್ತಿದೆ; ಆದರೆ ಪ್ರಸಾರಮಾಧ್ಯಮಗಳು ಈ ಎಲ್ಲ ಘಟನೆಗಳನ್ನು ಪ್ರಚಾರ ಮಾಡುವುದಿಲ್ಲ. ಇಂದು ಆದಿವಾಸಿ ಹಿಂದೂಗಳು ಏಕಾಂಗಿಯಾಗಿ ಹೋರಾಡುತ್ತಿದ್ದಾರೆ. ಆದುದರಿಂದ ಅವರಿಗೆ ದೇಶವ್ಯಾಪಿ ಬೆಂಬಲದ ಅವಶ್ಯಕತೆ ಇದೆ’, ಎಂದು ಹೇಳಿದರು
ನಕ್ಸಲೀಯರು ಮತ್ತು ಕ್ರೈಸ್ತ ಧರ್ಮಪ್ರಚಾರಕರ ಮೈತ್ರಿ ಇದೆ. ಹೇರಳವಾದ ಖನಿಜ ಸಂಪನ್ಮೂಲಗಳು ಮತ್ತು ಆದಿವಾಸಿಗಳು ಇರುವಲ್ಲಿಯೇ, ಕ್ರಿಶ್ಚಿಯನ್ ಧರ್ಮಪ್ರಚಾರಕರು ಮತ್ತು ನಕ್ಸಲೀಯರು ತಮ್ಮ ನೆಲೆಯನ್ನು ಸ್ಥಾಪಿಸಿದ್ದಾರೆ. ಕ್ರೈಸ್ತ ಧರ್ಮಪ್ರಚಾರಕರು ಒಳಸಂಚು ಹೂಡಿ ಹಿಂದೂ ವನವಾಸಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಮತಾಂತರಿಸುತ್ತಿದ್ದಾರೆ. ಛತ್ತೀಸಗಡನಲ್ಲಿ ಏಷ್ಯಾ ಖಂಡದ ಎಲ್ಲಕ್ಕಿಂತ ದೊಡ್ಡ ಚರ್ಚ್ ಇದೆ. ಅವರು ಆದಿವಾಸಿಗಳಿಗೆ ಆಮಿಷ ತೋರಿಸಿ ಅವರದ್ದೆಲ್ಲವನ್ನೂ ಕಬಳಿಸುತ್ತಿದ್ದಾರೆ. ಅವರ ವ್ಯವಸ್ಥೆ ಎಷ್ಟು ದೊಡ್ಡದಿದೆಯೆಂದರೆ ಅವರಿಂದ ತಪ್ಪಿಸಿಕೊಂಡರೂ ಅವರು ದೋಚಿದ ಸಂಪತ್ತನ್ನು ಮರಳಿ ಪಡೆಯಲು ಸಾಧ್ಯವಿಲ್ಲ.
(ಸೌಜನ್ಯ – Hindu Janajagruti Samiti)
ನಕ್ಸಲ್‌ವಾದಿಗಳು ಪ್ರತಿದಿನ ಸ್ಫೋಟ್‌ಗಳನ್ನು ನಡೆಸುವ ಮೂಲಕ ಬಸ್ತಾರ್ ಭೂಮಿಯನ್ನು ರಕ್ತರಂಜಿತ ಮಾಡಿದ್ದಾರೆ. ನಕ್ಸಲ್‌ವಾದಿಗಳು ಆದಿವಾಸಿ ಮಕ್ಕಳ ಕೈಗಳಲ್ಲಿ ಬಲವಂತವಾಗಿ ಬಂದೂಕುಗಳನ್ನು ತುರುಕುತ್ತಿದ್ದಾರೆ. ನಕ್ಸಲ್‌ವಾದಿ ಸಂಘಟನೆಗಳಲ್ಲಿ ಪಾಲ್ಗೊಳ್ಳಲು ನಿರಾಕರಿಸುವವರನ್ನು ಬರ್ಬರವಾಗಿ ಕೊಲ್ಲಲಾಗುತ್ತದೆ. ಇಂದು ದೊಡ್ಡ ದೊಡ್ಡ ವಕೀಲರು ನಕ್ಸಲ್‌ವಾದಿಗಳ ಬೆಂಬಲಕ್ಕೆ ನಿಂತಿದ್ದಾರೆ, ನಕ್ಸಲ್‌ವಾದಿಗಳಿಗೆ ಜಿಹಾದಿ ಭಯೋತ್ಪಾದಕ ಸಂಘಟನೆ ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ದೊಂದಿಗೆ ಸಂಬಂಧ ಹೊಂದಿದೆ, ಹಾಗೆಯೇ ಕಿಸಾನ್ ಆಂದೋಲನ, ಶಾಹೀನ ಬಾಗ್‌ದಂತಹ ಎಲ್ಲ ರಾಷ್ಟ್ರವಿರೋಧಿ ಕಾರ್ಯಾಚರಣೆಗಳಿಗೂ ಬೆಂಬಲ ನೀಡಿದೆ. ಆದಿವಾಸಿಗಳ ಮೇಲಿನ ದೌರ್ಜನ್ಯವನ್ನು ಮಾನವ ಹಕ್ಕು ಅಧಿಕಾರ ಸಂಘಟನೆ ಮತ್ತು ಸರಕಾರ ದುರ್ಲಕ್ಷಿಸುತ್ತಿದೆ, ಎಂದೂ ನ್ಯಾಯವಾದಿ (ಸೌ.) ನಾಯ್ಡು ಇವರು ಹೇಳಿದರು.