ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದಲ್ಲಿ ದೇವಸ್ಥಾನಗಳ ವಿಶ್ವಸ್ಥರ ನಿರ್ಧಾರ !
ರಾಮನಾಥಿ (ಫೋನ್ದಾ) ಜೂನ್ ೨೦ (ವಾರ್ತೆ) – ದೇವಸ್ಥಾನ ಸಂಸ್ಕೃತಿಯನ್ನು ರಕ್ಷಿಸಲು ೪ ತಿಂಗಳಲ್ಲಿ ಮಹಾರಾಷ್ಟ್ರದಲ್ಲಿನ ೧೩೧ ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆಯನ್ನು ಜ್ಯಾರಿಗೊಳಿಸಲಾಗಿದೆ. ವಸ್ತ್ರಸಂಹಿತೆಯನ್ನು ಜ್ಯಾರಿಗೊಳಿಸುವುದರೊಂದಿಗೆ ಇನ್ನು ಮುಂದೆ ದೇವಸ್ಥಾನದ ಪರಿಸರವು ಸ್ವಚ್ಛ ಹಾಗೂ ಸಾತ್ತ್ವಿಕವಾಗಿರಬೇಕು ಅದಕ್ಕಾಗಿ ಅದನ್ನು ಮದ್ಯ-ಮಾಂಸ’ದಿಂದ ಮುಕ್ತಗೊಳಿಸಲು ಹೋರಾಟ ನಡೆಸಲಾಗುವುದು ಎಂಬ ನಿರ್ಧಾರವನ್ನು ಮಹಾರಾಷ್ಟ್ರ ಮಂದಿರ ಮಹಾಸಂಘದ ಕೋರ್ ಸಮಿತಿಯ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ. ಈ ಮಾಹಿತಿಯನ್ನು ಮಹಾರಾಷ್ಟ್ರ ಮಂದಿರ ಮಹಾಸಂಘದ ಸಮನ್ವಯಕಾರದ ಶ್ರೀ. ಸುನೀಲ ಘನವಟರವರು ನೀಡಿದ್ದಾರೆ. ಗೋವಾ ರಾಜ್ಯದಲ್ಲಿನ ಫೋನ್ದಾದಲ್ಲಿ ನಡೆಯುತ್ತಿರುವ ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದಲ್ಲಿ `ದೇವಸ್ಥಾನಗಳ ಸುವ್ಯವಸ್ಥಾಪನೆ’, `ದೇವಸ್ಥಾನಗಳ ಸಂರಕ್ಷಣೆ’ ಹಾಗೂ ದೇವಸ್ಥಾನಗಳ ಸರಕಾರೀಕರಣ ಮತ್ತು ಅತಿಕ್ರಮಣದಿಂದ ಮುಕ್ತಿ’ ಇತ್ಯಾದಿ ವಿವಿಧ ವಿಷಯಗಳ ಮೇಲೆ ಚರ್ಚೆ ಮತ್ತು ವಿಚಾರಮಂಥನ ನಡೆಸಲಾಯಿತು.
ಈ ಸಂದರ್ಭದಲ್ಲಿ ಸುನೀಲ ಘನವಟರವರು ಮುಂದುವರಿದು `ವಿವಿಧ ಚಲನಚಿತ್ರಗಳ ಚಿತ್ರೀಕರಣವು ದೇಶದಲ್ಲಿನ ಪೌರಾಣಿಕ, ಐತಿಹಾಸಿಕ ದೇವಸ್ಥಾನಗಳ ಪರಿಸರದಲ್ಲಿ ನಡೆಯುತ್ತದೆ. ಈ ಚಿತ್ರೀಕರಣದ ಸಮಯದಲ್ಲಿ ದೇವಸ್ಥಾನಗಳ ಪಾವಿತ್ರ್ಯ, ದೇವಸ್ಥಾನದಲ್ಲಿನ ವಸ್ತ್ರಸಂಹಿತೆ, ಹಾಗೆಯೇ ದೇವಸ್ಥಾನದ ಪರಿಸರದಲ್ಲಿನ ನಿಯಮಗಳ ಪಾಲನೆಯಾಗುವುದಿಲ್ಲ. ಈ ನಿಯಮಗಳ ಪಾಲನೆಗಾಗಿ ವಿವಿಧ ದೇವಸ್ಥಾನಗಳಿಗೆ ಮನವಿ ನೀಡಿ ಇದಕ್ಕಾಗಿ ಪ್ರಯತ್ನಿಸಲಾಗುವುದು. ಇದರೊಂದಿಗೆ ಜಿಲ್ಲಾ ಮಟ್ಟದಲ್ಲಿ ಊರುಗಳ ವರೆಗೆ `ಅರ್ಚಕರ ಸಂಪರ್ಕ’ ಅಭಿಯಾನವನ್ನು ನಡೆಸಲಾಗುವುದು’ ಎಂದು ಹೇಳಿದರು.
ಈ ಸಭೆಯಲ್ಲಿ ಗೋವಾದಲ್ಲಿನ ಗೋಮಾಂತಕ ಮಂದಿರ ಮಹಾಸಂಘದ ಸಂಚಾಲಕರಾದ ಶ್ರೀ. ಜಯೇಶ ಥಳಿ, ಮಹಾರಾಷ್ಟ್ರದಲ್ಲಿನ ಜ್ಯೋತಿರ್ಲಿಂಗ ಶ್ರೀ ಭೀಮಾಶಂಕರ ದೇವಸ್ಥಾನದ ಅಧ್ಯಕ್ಷರಾದ ಶ್ರೀ. ಸುರೇಶ ಕೌದರೆ, ವಿದರ್ಭ ದೇವಸ್ಥಾನ ಸಮಿತಿಯ ಸಂಚಾಲಕರಾದ ಶ್ರೀ. ಅನೂಪ ಜಯಸ್ವಾಲ, ಮಹಾರಾಷ್ಟ್ರ ಹಾಗೂ ಗೋವಾ ಬಾರ್ ಕೌನ್ಸಿಲ್ ನ ಮಾಜಿ ಅಧ್ಯಕ್ಷರಾದ ನ್ಯಾಯವಾದಿ ಶ್ರೀ. ಭರತ ದೇಶಮುಖ, ಮಂಗಳಗ್ರಹ ಸೇವಾ ಸಂಸ್ಥಾನದ ಶ್ರೀ. ಶರದ ಕುಲಕರ್ಣಿ, ನಗರದಲ್ಲಿನ ಶ್ರೀ. ಭವಾನಿ ಮಾತೆಯ ದೇವಸ್ಥಾನದ ನ್ಯಾಯವಾದಿ ಅಭಿಷೇಕ ಭಗತ, ನಾಗಪೂರದಲ್ಲಿನ ಶ್ರೀ ಬೃಹಸ್ಪತಿ ದೇವಸ್ಥಾನದ ವಿಶ್ವಸ್ಥರಾದ ಶ್ರೀ. ರಾಮನಾರಾಯಣ ಮಿಶ್ರಾ ಹಾಗೂ ಸಂಕಟಮೋಚನ ಪಂಚಮುಖಿ ಹನುಮಾನ ದೇವಸ್ಥಾನದ ಶ್ರೀ. ದಿಲೀಪ ಕುಕಡೆಯವರೊಂದಿಗೆ ೪೦ ಗಣ್ಯರು ಉಪಸ್ಥಿತರಿದ್ದರು.