ತಮಿಳುನಾಡಿನಲ್ಲಿ ಹಿಂದೂ ವಿರೋಧಿ ಚಟುವಟಿಕೆಗಳಿಗೆ ಸರಕಾರದ ಬೆಂಬಲ ! – ಶ್ರೀ. ಅರ್ಜುನ ಸಂಪತ, ಸಂಸ್ಥಾಪಕ ಅಧ್ಯಕ್ಷ, ಹಿಂದೂ ಮಕ್ಕಲ ಕತ್ಛಿ, ತಮಿಳುನಾಡು

ಶ್ರೀ. ಅರ್ಜುನ ಸಂಪತ, ಸಂಸ್ಥಾಪಕ ಅಧ್ಯಕ್ಷ, ಹಿಂದೂ ಮಕ್ಕಲ ಕತ್ಛಿ, ತಮಿಳುನಾಡು

ತಮಿಳುನಾಡಿನಲ್ಲಿ ಮುಸಲ್ಮಾನ ಕಟ್ಟರವಾದಿ, ಕ್ರೈಸ್ತ ಮಿಶನರಿ, ಕಮ್ಯುನಿಸ್ಟ, ಪ್ರಸಾರ ಮಾಧ್ಯಮಗಳು ಮತ್ತು ಆಡಳಿತಾರೂಢ ದ್ರಮುಕ ಪಕ್ಷ ಇವುಗಳು ಹಿಂದೂ ವಿರೋಧಿ ಚಟುವಟಿಕೆ ನಡೆಸುತ್ತವೆ. ರಾಜ್ಯದಲ್ಲಿನ ದೇವಸ್ಥಾನಗಳ ಸರಕಾರಿಕರಣ ಮಾಡಲಾಗಿದೆ. ಉತ್ತರ ಪ್ರದೇಶದಲ್ಲಿನ ಯೋಗಿ ಆದಿತ್ಯನಾಥ ದೇಶ ವಿರೋಧಿ ಶಕ್ತಿಯ ಆಸ್ತಿಯ ಮೇಲೆ ಬುಲ್ಡೋಜರ್ ಹಾಯಿಸುತ್ತಿದ್ದಾರೆ. ತಮಿಳುನಾಡಿನಲ್ಲಿ ಮಾತ್ರ ಮುಖ್ಯಮಂತ್ರಿ ಸ್ಟಾಲಿನ್ ರಾಜ್ಯದಲ್ಲಿನ ದೇವಸ್ಥಾನಗಳ ಮೇಲೆ ಬುಲ್ಡೋಜರ್ ಹಾಯಿಸುತ್ತಿದ್ದಾರೆ. ಸರಕಾರವು ೧೬೦ ದೇವಸ್ಥಾನಗಳನ್ನು ನೆಲೆಸಮ ಮಾಡಿದೆ. ತಮಿಳುನಾಡಿನಲ್ಲಿನ ದಲಿತರಲ್ಲಿ ಹಿಂದೂ ವಿರೋಧಿ ಪ್ರಚಾರ ಮಾಡಲಾಗುತ್ತಿದೆ. ಶಾಲೆಗಳಲ್ಲಿ ಕ್ರೈಸ್ತ ಮಿಶಿನರಿ ಕ್ರೈಸ್ತ ಧರ್ಮದ ಪ್ರಚಾರ ಮಾಡುತ್ತಿದೆ. ಅದಕ್ಕೆ ಸರಕಾರವು ಸಹಾಯ ಮಾಡುತ್ತಿದೆ. ಸರಕಾರದಿಂದ ಬ್ರಾಹ್ಮಣ, ಸಂಸ್ಕೃತ ಮತ್ತು ಹಿಂದಿ ಇದರ ವಿರುದ್ಧ ಚಟುವಟಿಕೆ ನಡೆಯುತ್ತಿದೆ. ಕ್ರೈಸ್ತ ಮಶಿನರಿಗಳಿಂದ ನಗರದ ನಕ್ಸಲವಾದಿ ಚಟುವಟಿಕೆಗೆ ಸಹಾಯ ಮಾಡುತ್ತಿದೆ. ತಮಿಳುನಾಡಿನಲ್ಲಿ ದೊಡ್ಡ ಪ್ರಮಾಣದಲ್ಲಿ ಹಿಂದೂ ವಿರೋಧಿ ಚಟುವಟಿಕೆ ನಡೆಯುತ್ತಿದ್ದರೂ, ತಮಿಳುನಾಡು ಇದು ಮೂಲ ಹಿಂದೂಗಳ ಪುಣ್ಯ ಭೂಮಿಯಾಗಿದೆ. ಹೊಸ ಸಂಸತ್ತಿಗೆ ಕಳುಹಿಸಿದ್ದ ‘ಸಾಂಗೋಲ’ (ಧರ್ಮದಂಡ) ಈ ಭೂಮಿ ಇಂದಲೇ ಕೊಂಡೊಯ್ಯಲಾಗಿದೆ. ಯಾವ ಸ್ಥಳದಲ್ಲಿ ಸ್ಟಾಲಿನ್ ಇವರು ಹಿಂದೂ ವಿರೋಧಿ ಬೈಠಕ ನಡೆಸುತ್ತಿದ್ದರೋ, ಅದೇ ಸ್ಥಳದಲ್ಲಿ ನಮ್ಮ ಶಿವಾಚಾರ್ಯ ಸಂಪ್ರದಾಯದ ಜೊತೆಗೆ ಬೈಠಕಿನ ಆಯೋಜನೆ ನಡೆಸಿ ಹಿಂದೂಗಳನ್ನು ಸಂಘಟಿತಗೊಳಿಸಲಾಯಿತು. ದೇವಸ್ಥಾನಗಳು ಮತ್ತು ಗೋಮಾತೆಯ ರಕ್ಷಣೆಗಾಗಿ ನಾವು ಅಭಿಯಾನ ಆರಂಭಿಸಿದ್ದೇವೆ. ತಮಿಳುನಾಡಿನ ಪ್ರತಿಯೊಂದು ಜಿಲ್ಲೆಯಲ್ಲಿ ಹಿಂದುಗಳ ಸಂಘಟನೆ ಮಾಡುವುದಕ್ಕಾಗಿ ನಾವು ಪ್ರಯತ್ನ ಮಾಡುತ್ತಿದ್ದೇವೆ. ಭಾರತದಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆ ತಮಿಳುನಾಡಿನಿಂದ ಆಗುವುದಕ್ಕಾಗಿ ನಾವು ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.

(ಸೌಜನ್ಯ – Hindu Janajagruti Samiti)