ರಾಮನಾಥ ದೇವಸ್ಥಾನ – ಲಿಂಗಾಯತ ಇದು ಆಡುಭಾಷೆಯಾಗಿದೆ. ಆದ್ದರಿಂದ ‘ವೀರಶೈವ ಲಿಂಗಾಯತ’ ಎಂದು ಹೇಳಬೇಕು. ಅವರು ಹಿಂದೂ ಧರ್ಮಕ್ಕನುಸಾರ ಉಪಾಸನೆ ಮಾಡುತ್ತಿರುವುದರಿಂದ ಅವರೆಲ್ಲರೂ ಹಿಂದುಗಳೇ ಆಗಿದ್ದಾರೆ. ವೀರಶೈವ ಲಿಂಗಾಯತರು ಹಿಂದೂ ಧರ್ಮದಿಂದ ಬೇರೆಯಾಗಿರದೇ ಅಭಿನ್ನರಾಗಿದ್ದಾರೆ. ನಮ್ಮ ಹಿಂದೂ ರಾಷ್ಟ್ರದ ಕಾರ್ಯದಲ್ಲಿ ಸದಾ ಸಹಭಾಗಿಯಾಗುವೆವು ಹಾಗೂ ದಕ್ಷಿಣದ ರಾಜ್ಯಗಳಲ್ಲಿ ಎಲ್ಲೇ ಹಿಂದೂ ಧರ್ಮದ ಮೇಲೆ ಆಘಾತವಾದರೆ ಆಗ ಅಲ್ಲಿ ಕೂಡ ನಾವೆಲ್ಲರೂ ನಿಮ್ಮ ಜೊತೆಗೆ ಇರುತ್ತೇವೆ, ಎಂದು ಪೂ. ಶ್ರೀ.ಷ.ಬ್ರ.ಪ್ರ.೧೦೮(ಡಾ.) ವಿರೂಪಾಕ್ಷ ಶಿವಾಚಾರ್ಯ ಮಹಾಸ್ವಾಮೀಜಿ ಇವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
(ಸೌಜನ್ಯ – Hindu Janajagruti Samiti)
ಸ್ವಾಮೀಜಿಯವರು ಮಾತು ಮುಂದುವರೆಸುತ್ತಾ, ”ಅಖಂಡ ಹಿಂದೂಸ್ಥಾನ ಇದು ಹಿಂದೂ ರಾಷ್ಟ್ರವೇ ಆಗಿದೆ. ಆದರೆ ಅದನ್ನು ಸೆಕ್ಯುಲರ್ ಎಂದು ನಿರ್ಧರಿಸಲು ಪ್ರಯತ್ನ ಮಾಡಲಾಗುತ್ತದೆ. ಭಾರತದಲ್ಲಿ ವಿವಿಧ ಸಂಪ್ರದಾಯಗಳಿದ್ದರೂ ಎಲ್ಲರೂ ಹಿಂದೂ ಧರ್ಮದಂತೆ ಆಚರಣೆ ಮಾಡುತ್ತಾರೆ. ಆದ್ದರಿಂದ ಎಲ್ಲರೂ ಹಿಂದುಗಳೇ ಆಗಿದ್ದಾರೆ. ಕಳೆದ ೧೦ ವರ್ಷಗಳಿಂದ ಲಿಂಗಾಯತ ಮತ್ತು ವೀರಶೈವರನ್ನು ಬೇರೆಬೇರೆ ಎಂದು ಹೇಳುವ ಪ್ರಯತ್ನ ನಡೆಯುತ್ತಿದೆ. ಅಷ್ಟೇ ಅಲ್ಲದೆ ಅದನ್ನು ಒಡೆಯಿರಿ ಮತ್ತು ರಾಜ್ಯವಾಳಿರಿ ಈ ನೀತಿ ಅವಲಂಬಿಸಿ ಅವರನ್ನು ಹಿಂದೂ ಧರ್ಮದಿಂದ ಬೇರ್ಪಡಿಸುವ ಪ್ರಯತ್ನ ಮಾಡಲಾಗುತ್ತಿದೆ. ಶಿವನ ಉಪಾಸನೆ ಮಾಡುವವರು ಲಿಂಗಾಯತರು. ಕತ್ತಿನಲ್ಲಿ ಲಿಂಗಧಾರಣೆ ಮಾಡುವುದರಿಂದ ಅವರನ್ನು ಲಿಂಗಾಯತರು ಎನ್ನುತ್ತಾರೆ. ಲಿಂಗವು ಶಿವನ ಪ್ರತೀಕವಾಗಿದೆ. ಆದ್ದರಿಂದ ಅವರು ವೀರಶೈವರು. ಶಿವ ಮತ್ತು ಜೀವ ಐಕ್ಯಗೊಳಿಸುವ ವಿದ್ಯೆ ಕಲಿಯುವಾತ ವೀರಶೈವನಾಗಿದ್ದಾನೆ.