`ಆದಿಪುರುಷ’ ಸಹಿತ ಎಲ್ಲ ಹಿಂದಿ ಚಲನಚಿತ್ರಗಳ ಮೇಲೆ ಕಾಠ್ಮಂಡೂವಿನಲ್ಲಿ ನಿಷೇಧ !

ಸೀತಾಮಾತಾ ಭಾರತದ ಮಗಳಾಗಿರುವ ಸಂಭಾಷಣೆಯ ಮೇಲೆ ಆಕ್ಷೇಪ !

ಕಾಠ್ಮಂಡು (ನೇಪಾಳ) – ಕಾಠ್ಮಂಡು ನಗರದ ಮಹಾಪೌರ ಬಲೆನ ಶಾಹ ಇವರು ಎಲ್ಲ ಚಲನಚಿತ್ರಗೃಹದಲ್ಲಿ ಯಾವುದೇ ಹಿಂದಿ ಚಲನಚಿತ್ರವನ್ನು ಪ್ರದರ್ಶಿಸಬಾರದೆಂದು ಆದೇಶಿಸಿದ್ದಾರೆ. ಈ ವಿಷಯದಲ್ಲಿ ಅಧಿಕೃತ ಘೋಷಣೆ ಮಾಡುವಾಗ ಅವರು ಈ ಸಂಬಂಧದ ಪತ್ರವನ್ನೂ ಎಲ್ಲ ಚಲನಚಿತ್ರಗೃಹಗಳಿಗೆ ಕಳುಹಿಸಿದ್ದಾರೆ. ನೇಪಾಳದಲ್ಲಿ `ಆದಿಪುರುಷ’ ಚಲನಚಿತ್ರಕ್ಕೆ ವಿರೋಧದ ಬಳಿಕ ಅವರು ಈ ನಿರ್ಣಯವನ್ನು ತೆಗೆದುಕೊಂಡಿದ್ದಾರೆ. ಆದಿಪುರುಷ ಚಲನಚಿತ್ರದಲ್ಲಿ ಸೀತಾಮಾತೆಯನ್ನು `ಭಾರತದ ಮಗಳು’ ಎಂದು ಸಂಬೋಧಿಸಲಾಗಿದೆ. ಅದಕ್ಕೆ ನೇಪಾಳಿ ಜನರು ಆಕ್ಷೇಪಿಸಿದ್ದಾರೆ. `ಸೀತಾಮಾತೆಯ ಜನನ ನೇಪಾಳದಲ್ಲಿ ಆಗಿದೆ. ಮಿಥಿಲಾ ರಾಜ್ಯ ನೇಪಾಳದಲ್ಲಿದೆ. ಅಲ್ಲಿ ಸೀತಾಮಾತೆ ಹುಟ್ಟಿರುವಾಗ ಅವಳು ಭಾರತದ ಮಗಳು ಹೇಗೆ ಆಗುತ್ತಾಳೆ ?’ ಎಂದು ನೇಪಾಳಿ ನಾಗರಿಕರು ಪ್ರಶ್ನಿಸಿದ್ದಾರೆ. ಈ ವಿಷಯದಲ್ಲಿ ಚಲನಚಿತ್ರದ ಸಂಭಾಷಣೆಕಾರ ಮನೋಜ ಮುಂತಶೀರ ಶಿಕ್ಲಾ ಇವರು, ” ರಾಮಾಯಣದ ಸಮಯದಲ್ಲಿ ನೇಪಾಳ ಹೆಸರಿನ ಯಾವುದೇ ದೇಶ ಅಸ್ತಿತ್ವದಲ್ಲಿ ಇಲ್ಲದಿರುವುದರಿಂದ ಮಿಥಿಲಾ ಭಾರತದ ಭಾಗವಾಗಿತ್ತು. ಇದರಿಂದ ಸೀತಾಮಾತೆ ಭಾರತದ ಮಗಳಾಗಿದ್ದಾಳೆ.” ಇದನ್ನು ವಿರೋಧಿಸಿದ್ದರಿಂದ ಚಲನಚಿತ್ರದಿಂದ ಈ ವಾಕ್ಯವನ್ನು ತೆಗೆದು ಹಾಕಲಾಗಿದೆ. ತದನಂತರ ನೇಪಾಳದಲ್ಲಿ ಈ ಚಲನಚಿತ್ರವನ್ನು ಪ್ರದರ್ಶಿಸಲು ಅನುಮತಿ ನೀಡಲಾಗಿದ್ದರೂ, ಯಾವುದೇ ಚಲನಚಿತ್ರಗೃಹಗಳು ಅದನ್ನು ಪ್ರದರ್ಶಿಸಿಲ್ಲ.