ಸಾಧನೆಯ ಬಲದಿಂದ ಸಮಾಜದಲ್ಲಿನ ನಕಾರಾತ್ಮಕತೆಯ ವಿರುದ್ಧ ಹೋರಾಡಿ ಹಿಂದೂ ರಾಷ್ಟ್ರವನ್ನು ತರಬಹುದು ! – ವಕೀಲ ಕೃಷ್ಣಮೂರ್ತಿ ಪಿ., ಕೊಡಗು, ಕರ್ನಾಟಕ

ವಕೀಲ ಕೃಷ್ಣಮೂರ್ತಿ ಪಿ

ವಿದ್ಯಾಧಿರಾಜ ಸಭಾಂಗಣ, ಜೂ.18 (ವಾರ್ತೆ) – ನಾನು ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ (ಪಿಎಫ್‌ಐ) ವಿರುದ್ಧದ ಪ್ರಕರಣದಲ್ಲಿ ಹೋರಾಡುತ್ತಿದ್ದೇನೆ. ಈ ಹಿಂದೆ ಪ್ರಕರಣದಲ್ಲಿ ಹೋರಾಡುತ್ತಿದ್ದ ವಕೀಲರು ಪ್ರಕರಣದಿಂದ ಹಿಂದೆ ಸರಿದರು; ಏಕೆಂದರೆ ಮೈಸೂರು ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಪಿಎಫ್‌ಐ ಕಾರ್ಯಕರ್ತರು ವಕೀಲರ ಛಾಯಾಚಿತ್ರ ಮತ್ತು ವಿಡಿಯೋ ತೆಗೆದು ಬೆದರಿಕೆ ಹಾಕುತ್ತಿದ್ದರು. ನನ್ನ ಸಂದರ್ಭದಲ್ಲಿಯೂ ಹಾಗೆ ಮಾಡಿದರು; ಆದರೆ ನಾಮ ಜಪ ಮಾಡುತ್ತಿದ್ದರಿಂದ ನನಗೆ ಅದರ ಭಯವಾಗಲಿಲ್ಲ. ನನಗೆ ಬರುತ್ತಿರುವ ಬೆದರಿಕೆಗಳ ಬಗ್ಗೆ ನ್ಯಾಯಾಧೀಶರಿಗೆ ತಿಳಿದಾಗ, ನನಗೆ ಭದ್ರತೆ ನೀಡಲಾಯಿತು, ಆದರೂ ನನ್ನ ಮೇಲೆ ದಾಳಿ ನಡೆಯಿತು. ಈಗ ನಾಮ ಜಪ ಮಾಡುತ್ತಿರುವುದರಿಂದ ನನಗೆ ಯಾವುದೇ ರೀತಿಯ ಭಯವಾಗುವುದಿಲ್ಲ. ಆದ್ದರಿಂದ, ಹಿಂದುತ್ವನಿಷ್ಠ ವಕೀಲರು, ಪ್ರಯಾಣ ಮಾಡುವಾಗ, ತಮ್ಮ ಆಲಿಕೆಯು ಪ್ರಾರಂಭವಾಗುವವರೆಗೆ ಸಮಯ ಸಿಕ್ಕಿದಾಗಲೆಲ್ಲಾ ನಾಮಸ್ಮರಣೆ ಮಾಡಬೇಕು. ಸನಾತನ ಸಂಸ್ಥೆಯು ಕಲಿಸುತ್ತಿರುವ ಸ್ವಭಾವದೋಷ ನಿರ್ಮೂಲನೆಯನ್ನು ಕಲಿತು ಕೃತಿಯಲ್ಲಿ ತನ್ನಿ. ಇದರಿಂದ ಸಮಾಜದಲ್ಲಿನ ನಕಾರಾತ್ಮಕ ಶಕ್ತಿಗಳ ವಿರುದ್ಧ ಹೋರಾಡುವ ಮೂಲಕ ನಾವು ಹಿಂದೂ ರಾಷ್ಟ್ರವನ್ನು ತರಬಹುದು ಎಂದು ಕರ್ನಾಟಕದ ಹಿಂದುತ್ವನಿಷ್ಠ ವಕೀಲ ಕೃಷ್ಣಮೂರ್ತಿ ಪಿ. ಹೇಳಿದರು. ಅವರು ವೈಶ್ವಿಕ ಹಿಂದೂ ರಾಷ್ಟ್ರ ಅಧಿವೇಶದ ‘ಪಿಎಫ್‌ಐ’. : ಭವಿಷ್ಯದ ಬಿಕ್ಕಟ್ಟು’ ಎಂಬ ವಿಷಯದ ಕುರಿತು ಮಾತನಾಡುತ್ತಿದ್ದರು.

1. ಈ ಸಮಯದಲ್ಲಿ ‘ವಕೀಲ ಕೃಷ್ಣಮೂರ್ತಿ ಅವರನ್ನು ನೋಡಿದಾಗ ಏನನ್ನಿಸುತ್ತದೆ’, ಎಂದು ಉಪಸ್ಥಿತರಿಂದ ಸೂಕ್ಷ್ಮ ಪ್ರಯೋಗವನ್ನು ಮಾಡಿಸಲಾಯಿತು. ಆಗ ಅನೇಕರು ‘ವಕೀಲ ಕೃಷ್ಣಮೂರ್ತಿಯವರನ್ನು ನೋಡಿ ಆನಂದವಾಗುತ್ತದೆ’, ‘ಅವರ ಮುಖದಲ್ಲಿ ಸಾಧನೆಯ ತೇಜಸ್ಸಿನ ಅನುಭವವಾಯಿತು’, ಎಂದರು. ವಕೀಲ ಕೃಷ್ಣಮೂರ್ತಿಯವರ ಕುರಿತು ಮಾತನಾಡುವಾಗ ನಾಸಿಕ್ ನ ಹಿಂದುತ್ವನಿಷ್ಠ ರವೀಂದ್ರ ಪಾಟೀಲ್, ಯತಿ ಮಾ ಚೇತನಾನಂದ ಸರಸ್ವತಿ, ಪ್ರಸನ್ನ ಅಯ್ಯರ್, ಕುಮಾರ್ ರೆಡ್ಡಿ ಮುಂತಾದವರು ವಕೀಲರ ಬಗ್ಗೆ ಗಮನಕ್ಕೆ ಬಂದ ಅಂಶವನ್ನು ಹೇಳಿದರು.

2. ಈ ಸಂದರ್ಭದಲ್ಲಿ ಸನಾತನ ಸಂಸ್ಥೆಯ ಧರ್ಮಪ್ರಚಾರಕ ಪೂ. ರಮಾನಂದ ಗೌಡ ಇವರು ಮಾತನಾಡಿ, ”ವಕೀಲ ಕೃಷ್ಣಮೂರ್ತಿ ಅವರು ಧರ್ಮನಿಷ್ಠ ವಕೀಲರಾಗಿದ್ದಾರೆ. ಅವರಿಂದ ಅಖಂಡವಾಗಿ ನಾಮಜಪ ನಡೆಯುತ್ತಿರುತ್ತದೆ. ಪ್ರಯಾಣದ ಸಮಯದಲ್ಲಿ, ಅವರು ಪ.ಪೂ. ಭಕ್ತರಾಜ ಮಹಾರಾಜರ ಭಜನೆಗಳನ್ನು ಕೇಳುತ್ತಾರೆ. ‘ಪ್ರಯಾಣ ಹೇಗೆ ಮುಗಿಯಿತೋ ಎಂದು ಗೊತ್ತಾಗಲಿಲ್ಲ ಎಂದು ಹೇಳುತ್ತಾರೆ. ‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಮತ್ತು ಶ್ರೀಕೃಷ್ಣನ ಬಗ್ಗೆ ಅವರ ಮನಸ್ಸಿನಲ್ಲಿ ಅಪಾರ ಭಾವವಿದೆ, ಅವರು ಅವರ ಬಗ್ಗೆ ಎಷ್ಟು ಹೊತ್ತು ಬೇಕಾದರೂ ಮಾತನಾಡಬಲ್ಲರು. ಅವರು ತಮ್ಮ ಸ್ವಂತ ಹಣವನ್ನು ನ್ಯಾಯಾಲಯದ ಪ್ರಕರಣಗಳಿಗೆ ಮತ್ತು ಪ್ರಯಾಣಕ್ಕೆ ಖರ್ಚು ಮಾಡುತ್ತಾರೆ. ಒಂದು ಪ್ರಕರಣಕ್ಕಾಗಿ ಒಮ್ಮೆ 3-4 ಗಂಟೆಗಳ ಪ್ರಯಾಣ ಮಾಡಿ ನ್ಯಾಯಾಲಯಕ್ಕೆ ಬಂದಿದ್ದರು; ಆದರೆ ಅಲ್ಲಿಗೆ ಹೋದಾಗ ನ್ಯಾಯಾಧೀಶರು ರಜೆಯಲ್ಲಿರುವುದು ಅವರ ಗಮನಕ್ಕೆ ಬಂತು. ಆಗ ಮತ್ತೊಬ್ಬ ವಕೀಲರು ಈ ಬಗ್ಗೆ ಕೇಳಿದಾಗ, ಅವರು ‘ದೇವರ ಇಚ್ಛೆ’ ಎಂದು ಹೇಳುತ್ತಾರೆ. ಅವನ ಮನಸ್ಸಿನಲ್ಲಿ ಯಾವುದೇ ವಿಚಾರ ಅಥವಾ ಪ್ರತಿಕ್ರಿಯೆ ಇರಲಿಲ್ಲ. ಕೆಲವು ದಿನಗಳ ಹಿಂದೆ ಅವರ ಮೇಲೆ ದಾಳಿ ನಡೆದಾಗ, ‘ಪರಮ ಪೂಜ್ಯ ಗುರುದೇವರು ನನ್ನನ್ನು ರಕ್ಷಿಸಿದ್ದಾರೆ. ನನಗೆ ಇನ್ನೂ ಸಾಕಷ್ಟು ಕಾರ್ಯವನ್ನು ಮಾಡುವುದಿದೆ ಎಂದು ಹೇಳಿದರು. ಈಗ ಅವರು ಕರ್ನಾಟಕದಲ್ಲಿ ವಕೀಲರನ್ನು ಸಂಘಟಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.