ಶ್ರೀ ತುಳಜಾಭವಾನಿ ದೇವಸ್ಥಾನದಲ್ಲಿನ ಭ್ರಷ್ಟಾಚಾರದ ವಿರುದ್ಧ ಸರ್ವೋಚ್ಚ ನ್ಯಾಯಾಲಯದವರೆಗೆ ಹೋರಾಟ ನಡೆಸೋಣ ! – ಕಿಶೋರ ಗಂಗಣೆ, ಮಹಾರಾಷ್ಟ್ರ ದೇವಸ್ಥಾನ ಮಹಾಸಂಘ, ಧಾರಾಶಿವ

ಶ್ರೀ ಕಿಶೋರ ಗಂಗಣೆ, ಮಹಾರಾಷ್ಟ್ರ ದೇವಸ್ಥಾನ ಮಹಾಸಂಘ, ಧಾರಾಶಿವ

ತುಳಜಾಪುರದ ಶ್ರೀ ತುಳಜಾಭವಾನಿ ದೇವಸ್ಥಾನದಲ್ಲಿನ ಭ್ರಷ್ಟಾಚಾರದ ಪ್ರಕರಣವು ೨೦೧೦ ರಿಂದ ಮುಂಬಯಿ ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ಈ ಭ್ರಷ್ಟಾಚಾರದ ಸಿ.ಐ.ಡಿ. ತನಿಖೆ ಪೂರ್ಣಗೊಂಡು ೪ ವರ್ಷಗಳಾದವು; ಆದರೆ ಇಲ್ಲಿಯವರೆಗೆ ಕ್ರಮಕೈಗೊಂಡಿಲ್ಲ’ ಇದು ವಿಷಾದಕರವಾಗಿದೆ. ಸದ್ಯದ ಸ್ಥಿತಿಯಲ್ಲಿಯೂ ದೇವಸ್ಥಾನಗಳಲ್ಲಿ ಭ್ರಷ್ಟಾಚಾರ ಮುಂದುವರಿದಿದೆ. ಭಗವಂತನ ಕೃಪೆಯಿಂದ ದೇವಸ್ಥಾನದಲ್ಲಿನ ಭ್ರಷ್ಟಾಚಾರದ ವಿರುದ್ಧ ನಾನು ಹೋರಾಡುತ್ತಿದ್ದೇನೆ. ನಾವು ಶ್ರೀ ತುಳಜಾಭವಾನಿ ದೇವಸ್ಥಾನದ ಭ್ರಷ್ಟಾಚಾರದ ವಿರುದ್ಧ ಸರ್ವೋಚ್ಚ ನ್ಯಾಯಾಲಯದವರೆಗೆ ಹೋರಾಟ ನಡೆಸೋಣ.

(ಸೌಜನ್ಯ – Hindu Janajagruti Samiti)