ವಿಶಾಲಗಡ ಮೇಲಿನ ದರ್ಗಾದಲ್ಲಿ ಪ್ರಾಣಿಬಲಿ ನಿಷೇಧದ ಆದೇಶವನ್ನು ಸ್ಥಗಿತಗೊಳಿಸಲು ನಿರಾಕರಣೆ !

ದರ್ಗಾದ ಅರ್ಜಿದಾರರನ್ನು ಛೀಮಾರಿ ಹಾಕಿದ ಮುಂಬಯಿ ಉಚ್ಚ ನ್ಯಾಯಾಲಯ !

ಮುಂಬಯಿ – ಕೊಲ್ಲಾಪುರದಲ್ಲಿರುವ ವಿಶಾಲಗಡ ಪರಿಸರದ ದರ್ಗಾದಲ್ಲಿ ಈ ಹಿಂದೆ ನಡೆಯುತ್ತಿರುವ ಪ್ರಾಣಿಬಲಿ ಪದ್ಧತಿಯನ್ನು ನಿಷೇಧಿಸಲಾಗಿದೆ. ಪ್ರಾಣಿಬಲಿಯ ನಿಷೇಧದ ಆದೇಶವನ್ನು ಸ್ಥಗಿತಗೊಳಿಸಲು ದರ್ಗಾದ ವಿಶ್ವಸ್ಥ ಮಂಡಳಿಯವರು ಅರ್ಜಿಯನ್ನು ದಾಖಲಿಸಿದ್ದರು. ಇದಕ್ಕೆ ಮುಂಬಯಿ ಉಚ್ಚ ನ್ಯಾಯಾಲಯವು ನಿರಾಕರಿಸಿದೆ. ಮುಂಬಯಿ ಉಚ್ಚ ನ್ಯಾಯಾಲಯವು ರಾಜ್ಯ ಸರಕಾರಕ್ಕೆ ಈ ಸಂದರ್ಭದಲ್ಲಿ ಜುಲೈ 5ರ ವರೆಗೆ ಉತ್ತರಿಸುವಂತೆ ಆದೇಶಿಸಿದೆ.

ಈ ಸಂದರ್ಭದ ಅರ್ಜಿಯ ಬಗ್ಗೆ ವಿವರಣೆಯನ್ನು ನೀಡುವಾಗ ನ್ಯಾಯಾಲಯವು, `’ಇದಕ್ಕೆ ಧಾರ್ಮಿಕ ಬಣ್ಣವನ್ನು ಬಳಿಯಬೇಡಿರಿ. ವಿಶಾಲಗಡ ಪರಿಸರದಲ್ಲಿ ಪ್ರಾಣಿಗಳ ಈ ರೀತಿ ನಿಯಮಬಾಹಿರ ಹತ್ಯೆಗೆ ಅನುಮತಿ ನೀಡಲು ಸಾಧ್ಯವಿಲ್ಲ. ಈ ಹಬ್ಬದ ಆಯೋಜಕರು ಸಾರ್ವಜನಿಕ ಸ್ವಚ್ಛತೆಯ ಅರಿವನ್ನು ಇಟ್ಟುಕೊಳ್ಳಬೇಕು” ಎಂದು ಹೇಳಿದೆ.

`ಕಟ್ಟರ ಹಿಂದುತ್ವವಾದಿ ಸಂಘಟನೆಗಳು ಉದ್ದೇಶಪೂರ್ವಕವಾಗಿ ವಾತಾವರಣವನ್ನು ಹಾಳು ಮಾಡುತ್ತಿದ್ದಾರಂತೆ !’ – ದರ್ಗಾದ ವಿಶ್ವಸ್ಥರ ಹುರುಳಿಲ್ಲದ ಆರೋಪ

ಸರಕಾರ ಹೇರಿರುವ ಈ ನಿಷೇಧ ಕೇವಲ ರಾಜಕೀಯ ಉದ್ದೇಶದಿಂದ ಕೂಡಿದೆ. ಮೂಲದಲ್ಲಿ ಈ ಧಾರ್ಮಿಕ ಪದ್ಧತಿ ಹಿಂದೂ-ಮುಸಲ್ಮಾನ ಏಕತೆಯು ಪೀಳಿಗೆಗಳಿಂದ ಮುಂದುವರಿದಿರುವಾಗ ಈಗ ಅಕಸ್ಮಿಕವಾಗಿ ವಿಶ್ವ ಹಿಂದೂ ಪರಿಷತ್ತು, ಬಜರಂಗದಳ, ರಾಷ್ಟ್ರೀಯ ಸ್ವಯಂಸೇವಕ ಸಂಘಗಳಂತಹ ಕಟ್ಟರ ಹಿಂದುತ್ವನಿಷ್ಠ ಸಂಘಟನೆಗಳು ಉದ್ದೇಶಪೂರ್ವಕ ವಾತಾವರಣವನ್ನು ಹಾಳು ಮಾಡುತ್ತಿವೆ. ಈ ಕಾರಣದಿಂದಲೇ ಸರಕಾರ ಈ ನಿಷೇಧವನ್ನು ಹೇರಿದೆಯೆಂದು ನೇರವಾಗಿ ಆರೋಪಿಸುತ್ತಾ, ಹಜರತ ಪೀ ರಮಲಿಕ ರೇಹಾನ ಮಿರಾ ಸಾಹೆಬ ದರ್ಗಾ ವಿಶ್ವಸ್ಥರು ಮುಂಬಯಿ ಉಚ್ಚ ನ್ಯಾಯಾಲಯದಲ್ಲಿ ದೂರನ್ನು ದಾಖಲಿಸಿದ್ದಾರೆ.

`ಪರಮೇಶ್ವರನಿಗಾಗಿ ಬಲಿ ನೀಡುವ ಹೆಸರಿನಲ್ಲಿ ಪಶುಪಕ್ಷಿಗಳ ಕಾನೂನುಬಾಹಿರ ಹತ್ಯೆಗಳಿಗೆ ಈ ಬಾರಿ ನಿಷೇಧ ವಿಧಿಸಲಾಗಿದೆ’ ಎಂದು ಪುರಾತತ್ವ ಇಲಾಖೆಯ ಉಪನಿರ್ದೇಶಕರು ತಮ್ಮ ಆದೇಶದಲ್ಲಿ ಹೇಳಿದ್ದಾರೆ. ಹಾಗೆಯೇ ಸ್ಥಳೀಯ ಅಧಿಕಾರಿಗಳು ಈ ನಿಷೇಧದ ಆದೇಶವನ್ನು ಜಾರಿಗೊಳಿಸಿದ್ದಾರೆ. (ದರ್ಗಾದಲ್ಲಿ ಪರಮೇಶ್ವರನಿಗಾಗಿ ಅಲ್ಲ, ಯಾರ ದರ್ಗಾ ಇದೆಯೋ, ಅವರಿಗಾಗಿ ಬಲಿ ನೀಡಲಾಗುತ್ತಿರಬಹುದು. ಪುರಾತತ್ವ ಇಲಾಖೆಯು `ಪರಮೇಶ್ವರ’ ಈ ಶಬ್ದಪ್ರಯೋಗವನ್ನು ಮಾಡಿ ಏಕೆ ದಿಕ್ಕು ತಪ್ಪಿಸಿದರು ?- ಸಂಪಾದಕರು)

 

ಸಂಪಾದಕೀಯ ನಿಲುವು

  • ಮೂಲದಲ್ಲಿ ಇಂತಹ ಅನಧಿಕೃತ ದರ್ಗಾಗಳು ಐತಿಹಾಸಿಕ ಕೋಟೆಯ ಮೇಲೆ ಹೇಗೆ ನಿರ್ಮಾಣವಾಗುತ್ತದೆ ? ಮತ್ತು ವರ್ಷಗಟ್ಟಲೇ ಸರಕಾರದಿಂದ ಸಂರಕ್ಷಿಸಲ್ಪಟ್ಟಿರುವ ಸ್ಥಳದಲ್ಲಿ ತಮ್ಮ ಸ್ವಂತ ಧಾರ್ಮಿಕ ಕಾರ್ಯಕ್ರಮಗಳನ್ನು ಹೇಗೆ ನಡೆಸುತ್ತಾರೆ ?, ಇದರ ಬಗ್ಗೆ ಮೊದಲು ವಿಚಾರಣೆಯಾಗಬೇಕು !
  • ಕೋಟೆ ಇದು ಛತ್ರಪತಿ ಶಿವಾಜಿ ಮಹಾರಾಜರ ಮೊಗಲರ ಮೇಲಿನ ವಿಜಯದ ಸಾಕ್ಷಿ ಆಗಿವೆ; ಹೆಚ್ಚಿನವು ಅವುಗಳ ಸಹಾಯದಿಂದಲೇ ಅವರು ಐವರು ರಾಜರ ಮೇಲೆ ವಿಜಯವನ್ನು ಸಾಧಿಸಿದರು. ಆದ್ದರಿಂದ ಕೋಟೆಯ ಮೇಲೆ ಮೊಗಲ ಆಕ್ರಮಣಕಾರಿಗಳ ದರ್ಗಾಗಳು ಇರುವುದು ಹಿಂದೂಗಳಿಗೆ ಲಜ್ಜಾಸ್ಪದವಾಗಿದೆ !