ಮುಂಬ್ರಾದ ಶಹಾನವಾಜನ ಮೊಬೈಲ್ ನಲ್ಲಿತ್ತು 30 ಪಾಕಿಸ್ತಾನಿಗಳ ಕ್ರಮಾಂಕ ಮತ್ತು ಇ- ಮೇಲ್ ವಿಳಾಸಗಳು

ಗಾಝಿಯಾಬಾದ ಮತ್ತು ಮುಂಬ್ರಾದಲ್ಲಿನ ಆನ್ ಲೈನ್ `ಆಟದ ಜಿಹಾದ್’ ಪ್ರಕರಣ

(`ಆಟದ ಜಿಹಾದ್ ’ ಎಂದರೆ ಆನ್ ಲೈನ್ ಆಟಗಳ ಮಾಧ್ಯಮದಿಂದ ಹಿಂದೂಗಳ ಬ್ರೈನ್ ವಾಷ್ ಮಾಡಿ ಅವರನ್ನು ಮತಾಂತರಗೊಳಿಸುವುದು)

ಆರೋಪಿ ಶಹಾನವಾಜ ಮಕಸೂದ ಖಾನ

ಮುಂಬ್ರಾ(ಠಾಣೆ ಜಿಲ್ಲೆ ) – ಗಾಝಿಯಾಬಾದ ಮತ್ತು ಮುಂಬ್ರಾದಲ್ಲಿನ ಆನ್ ಲೈನ್ `ಆಟದ ಜಿಹಾದ್ ’ ದ ಪ್ರಕರಣದಲ್ಲಿ ಪೊಲೀಸರಿಗೆ ಅಲಿಬಾಗದಿಂದ ಬಂಧಿಸಲಾಗಿರುವ ಆರೋಪಿ ಶಹಾನವಾಜ ಮಕಸೂದ ಖಾನನ ಮೊಬೈಲ್ ನಲ್ಲಿ 30 ಪಾಕಿಸ್ತಾನಿ ಜನರ ಮೊಬೈಲಸಂಖ್ಯೆ ಸಿಕ್ಕಿದೆ. ಅವನು 6 ಇ- ಮೇಲ್ ವಿಳಾಸವನ್ನು ಉಪಯೋಗಿಸುತ್ತಿದ್ದನು ಮತ್ತು ಅದರಲ್ಲಿ ಒಂದು ಇ-ಮೇಲ್ ವಿಳಾಸದ ಮೇಲೆ ಪಾಕಿಸ್ತಾನದಿಂದ ಬಂದಿರುವ ಇ-ಮೇಲ್ ಕಂಡುಬಂದಿದೆಯೆಂದು ಉತ್ತರಪ್ರದೇಶ ಪೊಲೀಸರು ಮಾಹಿತಿಯನ್ನು ನೀಡಿದ್ದಾರೆ. ಪಾಕಿಸ್ತಾನಿ ವ್ಯಕ್ತಿಗಳ ಮೊಬೈಲ ಕ್ರಮಾಂಕಗಳ ವಿಷಯದಲ್ಲಿ ಏನಾದರೂ ಆಕ್ಷೇಪಾರ್ಹ ಕಂಡುಬಂದರೆ, ಪೊಲೀಸರು ಶಾಹನವಾಜ ವಿರುದ್ಧ ರಾಷ್ಟ್ರೀಯ ಭದ್ರತಾ ಕಾನೂನಿನ ಅಡಿಯಲ್ಲಿ ಕ್ರಮ ಕೈಕೊಳ್ಳುವ ಸಾಧ್ಯತೆಯಿದೆ.

ಶಹಾನವಾಜನ ಮೇಲೆ ಆಟದ ಮಾಧ್ಯಮದಿಂದ 400 ಹಿಂದೂ ಹುಡುಗರನ್ನು ಮತಾಂತರಗೊಳಿಸಿರುವ ಆರೋಪವಿದೆ. ಮುಂಬ್ರಾದಲ್ಲಿ ಶಹಾನವಾಜನು ನಕಲು `ಯೂಸರ ಐ.ಡಿ(ಖಾತೆ) ರಚಿಸಿ ಅವುಗಳ ಮಾಧ್ಯಮದಿಂದ ಅವನು ಸಂಬಂಧಿಸಿದ ಆಟವನ್ನು ಪಡೆದುಕೊಳ್ಳುತ್ತಿದ್ದನು ಮತ್ತು ಸೋತ ಹುಡುಗರಿಗೆ ಸೋಲಬಾರದೆಂದು ಆಮಿಷವನ್ನು ತೋರಿಸಿ ಕಲಮಾಗಳನ್ನು ಓದಲು ಒತ್ತಾಯಪಡಿಸುತ್ತಿದ್ದನು. ಮತಾಂತರದ ಯಾವುದೇ ದೂರು ಬಂದಿಲ್ಲವೆಂದು ಮುಂಬ್ರಾ ಪೊಲೀಸರು ಹೇಳಿದ್ದಾರೆ. (ದೂರು ಬಂದಿಲ್ಲವೆಂದರೆ ಮತಾಂತರವಾಗಿಲ್ಲ ಎಂದರ್ಥವಲ್ಲ ಎನ್ನುವುದನ್ನು ಪೊಲೀಸರು ಗಮನಕ್ಕೆ ತೆಗೆದುಕೊಳ್ಳಬೇಕು- ಸಂಪಾದಕರು)

ಸಂಪಾದಕೀಯ ನಿಲುವು

ಇದರ ಬಗ್ಗೆ ರಾಷ್ಟ್ರವಾದಿ ಕಾಂಗ್ರೆಸ್ಸಿನ ಮುಂಬ್ರಾದ ಶಾಸಕ ಜಿತೇಂದ್ರ ಆವ್ಹಾಡರು ಏನು ಹೇಳಲಿಕ್ಕಿದೆ ?