ಬೊಜ್ಜು ಕಡಿಮೆ ಮಾಡಲು ಬಯಸುವವರಿಗೆ ಸದವಕಾಶ

ಆರೋಗ್ಯಶಾಲಿ ಜೀವನಕ್ಕಾಗಿ ಆಯುರ್ವೇದ


ಬೊಜ್ಜು ಕಡಿಮೆ ಮಾಡಲು ಮಿತವಾದ ಊಟ ಮತ್ತು ವ್ಯಾಯಾಮ ಇವೆರಡನ್ನು ನಿಯಮಿತವಾಗಿ ಮಾಡುವುದು ಅವಶ್ಯಕವಾಗಿದೆ. ಬೇಸಿಗೆಯಲ್ಲಿ, ಮತ್ತು ಮಳೆಗಾಲದಲ್ಲಿ ನೈಸರ್ಗಿಕವಾಗಿ ಹಸಿವು ಕಡಿಮೆಯಾಗುತ್ತದೆ. ಇದರಿಂದ ಊಟವೂ ಕಡಿಮೆ ಯಾಗುತ್ತದೆ. ಆದುದರಿಂದ ಮಿತವಾಗಿ ಊಟ ಮಾಡುವುದನ್ನು ಸಾಧಿಸಲು ನಿಸರ್ಗವು ಅನುಕೂಲವಾಗಿರುತ್ತದೆ. ಈ ಅವಕಾಶವನ್ನು ಸಾಧಿಸಿ ಊಟದ ಮೇಲೆ ನಿಗ್ರಹ ಇಡಬೇಕು ಮತ್ತು ನಿಯಮಿತವಾಗಿ ವ್ಯಾಯಾಮ ಮಾಡಬೇಕು. ಇದರಿಂದ ಬೊಜ್ಜು ಕಡಿಮೆಯಾಗಲು ಸಹಾಯವಾಗುತ್ತದೆ.

ವೈದ್ಯ ಮೇಘರಾಜ ಪರಾಡಕರ್

ನಿಯಮಿತ ವ್ಯಾಯಾಮದಿಂದಾಗುವ ಲಾಭಗಳು

೧. ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ಶರೀರದ ಶಕ್ತಿ, ಹಾಗೆಯೇ ಕಾರ್ಯ ಮಾಡುವ ಕ್ಷಮತೆಯು ಹೆಚ್ಚಾಗುತ್ತದೆ.

೨. ವ್ಯಾಯಾಮದಿಂದ ಜೀರ್ಣಶಕ್ತಿಯು ಸುಧಾರಿಸುತ್ತದೆ. ನಿಯಮಿತವಾಗಿ ವ್ಯಾಯಾಮವನ್ನು ಮಾಡುವವರಿಗೆ ಆಹಾರದಲ್ಲಿನ ಸಣ್ಣಪುಟ್ಟ ಬದಲಾವಣೆಗಳಿಂದ ಪರಿಣಾಮವಾಗುವುದಿಲ್ಲ.

೩. ವ್ಯಾಯಾಮವನ್ನು ಮಾಡುವುದರಿಂದ ಶರೀರದಲ್ಲಿನ ಅನಾವಶ್ಯಕ ಕೊಬ್ಬು ಕಡಿಮೆಯಾಗಿ ಶರೀರವು ಕೃಶವಾಗುತ್ತದೆ.

೪. ವ್ಯಾಯಾಮದಿಂದ ಶರೀರದ ರೋಗಪ್ರತಿರೋಧಕ ಶಕ್ತಿಯು ಹೆಚ್ಚಾಗ್ಚುತ್ತದೆ. ಆದ್ದರಿಂದ ವಾತಾವರಣದಲ್ಲಿ ಬದಲಾವಣೆಯಿಂದಾಗುವ ನೆಗಡಿ, ಕೆಮ್ಮು, ಜ್ವರ ಇಂತಹ ಕಾಯಿಲೆಗಳನ್ನು ತಡೆಯಲು ಸಹಾಯವಾಗುತ್ತದೆ.

೫. ವ್ಯಾಯಾಮದಿಂದ ಮನಸ್ಸಿನ ಕಾರ್ಯಕ್ಷಮತೆ ಹೆಚ್ಚಾಗುತ್ತದೆ, ಮತ್ತು ಕಠಿಣ ಪ್ರಸಂಗವನ್ನು ಎದುರಿಸುವ ಕ್ಷಮತೆ ಬೆಳೆಯುತ್ತದೆ.

ಕಲಬೆರಕೆ ಇಲ್ಲದ ಹಾಗೂ ಉತ್ತಮ ಗುಣಮಟ್ಟದ ಸನಾತನದ ಔಷಧಿ ಚೂರ್ಣಗಳನ್ನು ಬಳಸಿ

‘ಅನೇಕ ಬಾರಿ ಔಷಧಿಗಳ ಬೆಲೆ ಕಡಿಮೆ ಮಾಡಲು ಕಲಬೆರಕೆ ಮಾಡಲಾಗುತ್ತದೆ. ಇದು ಜನಸಾಮಾನ್ಯರ ಗಮನಕ್ಕೆ ಬರುವುದಿಲ್ಲ. ಕಲಬೆರಕೆಯ ಕೆಲವು ಉದಾಹರಣೆಗಳು ಮುಂದಿನಂತಿದೆ. ಶುಂಠಿ ಚೂರ್ಣ ಮಾಡುವಾಗ ಅದರಲ್ಲಿ ಹಿಟ್ಟು ಬೆರೆಸುವುದು. ನೆಲ್ಲಿಕಾಯಿಚೂರ್ಣ ಮಾಡುವಾಗ ಬೀಜಗಳ ಸಮೇತ ನೆಲ್ಲಿಕಾಯಿ ಬೀಸುವುದು. ಜೇಷ್ಠಮಧದ ಹಗುರವಾದ ಕಡ್ಡಿಗಳಿಂದ ಚೂರ್ಣ ಮಾಡುವುದು. ಆದರೆ ಸನಾತನದ ಆಯುರ್ವೇದದ ಔಷಧಿ ತಯಾರಿಸುವಾಗ ಉತ್ತಮ ಗುಣಮಟ್ಟವನ್ನು ಕಾಪಾಡಲು ಪ್ರಯತ್ನಿಸಲಾಗಿದೆ. ಶುಂಠಿ ಚೂರ್ಣದಲ್ಲಿ ಸ್ವಲ್ಪವೂ ಹಿಟ್ಟನ್ನು ಕಲಬೆರಕೆ ಮಾಡಿಲ್ಲ. ನೆಲ್ಲಿಕಾಯಿಯ ಬೀಜ ತೆಗೆದು ಕೇವಲ ತಿರುಳನ್ನು ಒಣಗಿಸಿ ಚೂರ್ಣ ಮಾಡಲಾಗುತ್ತದೆ. ಉತ್ತಮ ಗುಣಮಟ್ಟದ ಜೇಷ್ಠಮಧದಿಂದ ಅದರ ಚೂರ್ಣ ಮಾಡಲಾಗುತ್ತದೆ. ಇತರ ಚೂರ್ಣಗಳಲ್ಲೂ ಒಳ್ಳೆಯ ಗುಣಮಟ್ಟದ ಕಚ್ಚಾ ಸಾಮಗ್ರಿಗಳನ್ನು ಉಪಯೋಗಿಸಲಾಗಿದೆ. ಇದರಿಂದಲೇ ‘ಸನಾತನದ ಔಷಧಿ ಚೂರ್ಣಗಳಿಂದ ಉತ್ತಮ ಪರಿಣಾಮ ಕಂಡು ಬರುತ್ತದೆ, ಎಂದು ಅನೇಕರು ಅನುಭವಿಸಿದ್ದಾರೆ.

– ವೈದ್ಯ ಮೇಘರಾಜ ಮಾಧವ ಪರಾಡಕರ (೧.೨.೨೦೨೩)