ಕೊಲ್ಲಾಪುರದ ಶ್ರೀ ಮಹಾಲಕ್ಷ್ಮಿ ದೇವಿಯ ಮೂರ್ತಿಯ ಅವಮಾನ, ಇದು ದೇವಸ್ಥಾನ ಸರಕಾರೀಕರಣದ ದುಷ್ಪರಿಣಾಮ ! – ನ್ಯಾಯವಾದಿ ನೀಲೆಶ ಸಾಂಗೋಲಕರ, ನ್ಯಾಯವಾದಿ ಸಂಘಟಕ, ಹಿಂದೂ ಜನಜಾಗೃತಿ ಸಮಿತಿ

ನ್ಯಾಯವಾದಿ ನೀಲೆಶ ಸಾಂಗೋಲಕರ, ನ್ಯಾಯವಾದಿ ಸಂಘಟಕ

1920ರಲ್ಲಿ ಶ್ರೀ ಮಹಾಲಕ್ಷ್ಮಿದೇವಿಯ ಮೂರ್ತಿಯ ಎಡಗೈ ಭಗ್ನಗೊಂಡಿತ್ತು. ಆಗಿನಿಂದ ಆ ಕೈಯನ್ನು ಧಾತುವಿನ ಪಟ್ಟಿಗಳ ಸಹಾಯದಿಂದ ಮೂರ್ತಿಗೆ ಜೋಡಿಸಲಾಗಿದೆ. ಹಿಂದೂ ಧರ್ಮಶಾಸ್ತ್ರದಲ್ಲಿ ಪಾರಂಪರಿಕವಾದ ಪದ್ಧತಿಯಿಂದ ವಜ್ರಲೇಪನ ಮಾಡಲು ಅನುಮತಿಯಿದೆ; ಆದರೆ ಧರ್ಮಶಾಸ್ತ್ರದ ಅಧ್ಯಯನವಿಲ್ಲದ ಪುರಾತತ್ವ ಇಲಾಖೆಯ ಸೂಚನೆಯಂತೆ ಪ್ರತಿ 6 ತಿಂಗಳಿಗೊಮ್ಮೆ ಮೂರ್ತಿಯನ್ನು ರಾಸಾಯನಿಕ ಪುಷ್ಟೀಕರಣಗೊಳಿಸಲಾಗುತ್ತಿದೆ. ವಜ್ರಲೇಪನ ಮಾಡುವುದೆಂದರೆ ಒಂದು ರೀತಿಯಲ್ಲಿ ಶರೀರದ ಮೇಲೆ ಶಸ್ತ್ರಚಿಕಿತ್ಸೆ ನಡೆಸುವಂತಿರುತ್ತದೆ. ಪ್ರತಿ 6 ತಿಂಗಳಿಗೊಮ್ಮೆ ದೇವಿಯ ಮೂರ್ತಿಯ ಮೇಲೆ ಶಸ್ತ್ರಚಿಕಿತ್ಸೆ ಅಂದರೆ ಒಂದು ರೀತಿಯಲ್ಲಿ ಅತ್ಯಾಚಾರ ಮಾಡಲಾಗುತ್ತಿದೆ. ಮೂರ್ತಿ ಪೂಜೆ, ಅಭಿಷೇಕ ಇತ್ಯಾದಿಗಳಿಂದ ಮೂರ್ತಿಯಲ್ಲಿ ದೈವತ್ವ ಜಾಗೃತ ವಾಗುತ್ತಿರುತ್ತದೆ; ಆದರೆ ಮೂರ್ತಿಯಲ್ಲಿ ಹೆಚ್ಚಾಗುತ್ತಿರುವ ಸವೆತವನ್ನು ತಡೆಗಟ್ಟಲು 26 ವರ್ಷಗಳಿಂದ ಮೂಲ ಮೂರ್ತಿಗೆ ಸ್ನಾನ, ಅಭಿಷೇಕ ಮತ್ತು ನಿತ್ಯೋಪಚಾರವನ್ನು ನಿಲ್ಲಿಸಲಾಗಿತ್ತು. ಅದು ಇಂದಿಗೂ ಸ್ಥಗಿತಗೊಂಡಿದೆ. ಕಳೆದ ಅನೇಕ ವರ್ಷಗಳಲ್ಲಿ ದೇವಿಯ ಮೂರ್ತಿಯ ಕೆಲವು ಸ್ಥಾನಗಳು ಸವೆದಿದ್ದು, ಕೆಲವು ಸ್ಥಾನಗಳು ಭಗ್ನಗೊಂಡಿದೆ. ಅರ್ಚಕರ ಅಯೋಗ್ಯ ಕೃತಿಗಳಿಂದ ಮೂರ್ತಿ ಭಗ್ನಗೊಂಡಿದೆಯೆನ್ನುವ ಆರೋಪ ಬರಬಾರದು; ಎಂದು ಶ್ರೀಪೂಜಕ ಮಂಡಳಿಯು `ಮೂರ್ತಿ ಭಗ್ನಗೊಂಡಿಲ್ಲ’, ಎಂದು ಸುಳ್ಳು ಹೇಳುತ್ತಿದ್ದಾರೆ. ಇದರಿಂದ `ಸಧ್ಯಕ್ಕೆ ಕೊಲ್ಲಾಪುರ ಮಾತ್ರವಲ್ಲ ಎಲ್ಲೆಡೆಯ ದೇವಸ್ಥಾನಗಳ ಪೂಜಾರಿಗಳಿಗೆ ಧರ್ಮಶಿಕ್ಷಣ ನೀಡುವುದು ಎಷ್ಟು ಆವಶ್ಯಕವಾಗಿದೆ?’ ಎನ್ನುವುದು ಗಮನಕ್ಕೆ ಬರುತ್ತದೆ.

(ಸೌಜನ್ಯ – Hindu Janajagruti Samiti)

ವಿವಿಧ ಧರ್ಮಾಧಿಕಾರಿಗಳು, ರಾಜಕಾರಣಿಗಳು, ಅರ್ಚಕರು ಮತ್ತು ದೇವಸ್ಥಾನ ಆಡಳಿತ ಮಂಡಳಿ ಇವರೆಲ್ಲರ ವಿಭಿನ್ನ ನಡುವಳಿಕೆಯಿಂದ ಕೊಲ್ಲಾಪುರದ ಶ್ರೀ ಮಹಾಲಕ್ಷ್ಮಿದೇವಿಯ ಮೂರ್ತಿಯ ವಿಡಂಬನೆ ಪ್ರತಿದಿನ ಮುಂದುವರಿದಿದೆ. ಇದು ದೇವಸ್ಥಾನದ ಸರಕಾರೀಕರಣದ ದುಷ್ಪರಿಣಾಮವಾಗಿದೆಯೆನ್ನುವುದು ಗಮನಕ್ಕೆ ತೆಗೆದುಕೊಂಡು ಆದಷ್ಟು ಬೇಗನೆ ಈ ದೇವಸ್ಥಾನಗಳನ್ನು ಸರಕಾರೀಕರಣದಿಂದ ಮುಕ್ತಗೊಳಿಸುವುದೊಂದೇ ಇದರ ಮೇಲಿನ ಏಕಮಾತ್ರ ಉಪಾಯವಾಗಿದೆ ಎಂದು ಹೇಳಿದರು.