ರಷ್ಯಾದಿಂದ ಪಾಕಿಸ್ತಾನಕ್ಕೆ ದೊರೆಯುವ ತೈಲದ ಶುದ್ಧೀಕರಣ ಭಾರತದಲ್ಲಿ !

ರಷ್ಯಾದಿಂದ ಪಾಕಿಸ್ತಾನಕ್ಕೆ ವಿಧಿಸಿತ್ತು ಷರತ್ತು !

ಇಸ್ಲಾಮಾಬಾದ (ಪಾಕಿಸ್ತಾನ) – ರಷ್ಯಾದಿಂದ ಪಾಕಿಸ್ತಾನಕ್ಕೆ ಕಚ್ಚಾ ತೈಲ ಪೂರೈಕೆ ಪ್ರಾರಂಭವಾಗಿದೆ. ಪಾಕಿಸ್ತಾನದ ಪ್ರಧಾನಮಂತ್ರಿ ಶಹಾಬಾಜ ಶರೀಫ್ ಇವರು ರಷ್ಯಾದ ಜೊತೆ ೧ ಲಕ್ಷ ಟನ್ ತೈಲ ಖರೀದಿಯ ಒಪ್ಪಂದ ಮಾಡಿದ್ದು ಅದರಲ್ಲಿ ೪೫ ಸಾವಿರ ಟನ್ ತೈಲ ಪೂರೈಕೆ ಮಾಡಿದೆ , ಎಂದು ಮಾಹಿತಿಯನ್ನು ನೀಡಿದ್ದಾರೆ; ಆದರೆ ಈ ತೈಲದ ಶುದ್ಧೀಕರಣದ ಸಂಪೂರ್ಣ ಪ್ರಕ್ರಿಯೆ ಭಾರತದಲ್ಲಿ ನಡೆದಿರುವ ಮಾಹಿತಿ ಬೆಳಕಿಗೆ ಬಂದಿದೆ. ಈ ಮಾಹಿತಿಯನ್ನು ಪ್ರಧಾನಮಂತ್ರಿ ಶರೀಫ್ ಇವರು ಅವರ ದೇಶದ ನಾಗರಿಕರ ಎದುರು ಬಹಿರಂಗಪಡಿಸಿದಿರುವುದು ವಿಶೇಷ .

೧. ರಷ್ಯಾದ ಜೊತೆ ತೈಲ ಕರಾರು ಮಾಡುವಾಗ ಪಾಕಿಸ್ತಾನಕ್ಕೆ ದೊರೆಯುವ ತೈಲದ ಶುದ್ಧೀಕರಣ ಪ್ರಕ್ರಿಯೆಯು ಭಾರತದಲ್ಲಿ ಮಾಡಲಾಗುವುದು ಮತ್ತು ಪಾಕಿಸ್ತಾನವು ಅದರ ಹಣವನ್ನು ಚೀನಾದ ಕರೆನ್ಸಿ ‘ಯುವಾನ್’ನಲ್ಲಿ ನೀಡಬೇಕಾಗುವುದು. ಈ ಷರತ್ತಿಗನುಸಾರ ರಷ್ಯಾದಿಂದ ಪಾಕಿಸ್ತಾನಕ್ಕೆ ಶೇ. 20 ರಷ್ಟು ಕಡಿಮೆ ಬೆಲೆಗೆ ಕಚ್ಚಾ ತೈಲವನ್ನು ನೀಡಲಾಗುತ್ತಿದೆ. ಈ ಷರತ್ತನ್ನು ಪಾಕಿಸ್ತಾನ ಒಪ್ಪಿಕೊಂಡಿದೆ. ರಷ್ಯಾದಿಂದ ಬರುವ ಕಚ್ಚಾ ತೈಲವು ಗುಜರಾತಿನ ವಾಡಿನಗರ ಶುದ್ಧೀಕರಣ ಪ್ರಕಲ್ಪದಲ್ಲಿ ಶುದ್ಧಗೊಳಿಸಿ ಸಂಯುಕ್ತ ಅರಬ್ ಅಮೀರಾತಗೆ ಕಳುಹಿಸಲಾಗಿದೆ ಮತ್ತು ಅಲ್ಲಿಂದ ಅದು ಪಾಕಿಸ್ತಾನಕ್ಕೆ ತಲುಪಿದೆ. ರಷ್ಯಾದ ಕೆಲವು ಸರಕಾರಿ ಕಂಪನಿಗಳು ಸಂಯುಕ್ತ ಅರಬ್ ಅಮೀರಾತದಲ್ಲಿ ಕೆಲಸ ಮಾಡುತ್ತವೆ. ಇಂತಹ ಒಂದು ಕಂಪನಿಯು ಗುಜರಾತದಿಂದ ಅಮೀರತಗೆ ತೈಲ ತಂದು ಅಲ್ಲಿಂದ ಅದು ಕರಾಚಿಗೆ ಕೊಂಡು ಹೋಗಿದೆ.

೩. ರಷ್ಯಾವು ಪಾಕಿಸ್ತಾನಕ್ಕೆ ಶೇಕಡ ೨೦ ರಷ್ಟು ರಿಯಾಯಿತಿ ದರದಲ್ಲಿ ತೈಲ ನೀಡಿದೆ, ಅದರ ಶುದ್ಧೀಕರಣ ಮತ್ತು ಸಾರಿಗೆಯ ಖರ್ಚು ನೋಡಿದರೆ, ಅದು ಪಾಕಿಸ್ತಾನಕ್ಕೆ ವಿಶೇಷ ಲಾಭ ಕೊಡುವುದಾಗಿ ಕಾಣುತ್ತಿಲ್ಲ. ಪಾಕಿಸ್ತಾನಕ್ಕೆ ಸೌದಿ ಅರೇಬಿಯಾದಿಂದ ಯಾವ ಬೆಲೆಯಲ್ಲಿ ತೈಲ ದೊರೆಯುತ್ತದೆ , ಅದೇ ಬೆಲೆಗೆ ರಷ್ಯಾದಿಂದ ಪಾಕಿಸ್ತಾನಕ್ಕೆ ದೊರೆಯುತ್ತಿದೆ, ಹೀಗೆ ಇದರಿಂದ ತಿಳಿಯುತ್ತದೆ. ಆದ್ದರಿಂದ ಭವಿಷ್ಯದಲ್ಲಿ ಪಾಕಿಸ್ತಾನವು ರಷ್ಯಾದಿಂದ ಖರೀದಿಸಿರುವ ತೈಲದ ಬಗ್ಗೆ ಪುನರ್ವಿಚಾರ ಮಾಡುತ್ತಾ ಅದನ್ನು ನಿಲ್ಲಿಸಿದರೆ ಅದರಲ್ಲಿ ಆಶ್ಚರ್ಯವೇನಿಲ್ಲ, ಎಂದೂ ಹೇಳಲಾಗುತ್ತಿದೆ.