ಏಕರೂಪ ನಾಗರಿಕ ಸಂಹಿತೆ ಮುನ್ನೆಲೆಗೆ : ಜನಾಭಿಪ್ರಾಯ ಕೇಳಿದ ಕಾನೂನು ಆಯೋಗ !

ಮಾನ್ಯತೆ ಪಡೆದ ಧಾರ್ಮಿಕ ಸಂಘಟನೆಗಳಿಂದಲೂ ೩೦ ದಿನಗಳಲ್ಲಿ ಅಭಿಪ್ರಾಯ ತಿಳಿಸಲು ಕರೆ

ನವ ದೆಹಲಿ – ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವ ಬಗ್ಗೆ ಹಿಂದೂಗಳ ಕಳೆದ ಅನೇಕ ವರ್ಷಗಳ ಒತ್ತಾಯವು ಈಗ ಮುನ್ನೆಲೆಗೆ ಬಂದಿದೆ. ಕರ್ನಾಟಕ ಉಚ್ಚ ನ್ಯಾಯಾಲಯದ ಮಾಜಿ ನ್ಯಾಯಮೂರ್ತಿ ಋತುರಾಜ ಅವಸ್ಥಿ ಇವರ ಅಧ್ಯಕ್ಷತೆಯಲ್ಲಿ ದೇಶದ ೨೨ ನೇಯ ಕಾನೂನು ಆಯೋಗದಿಂದ ಏಕರೂಪ ನಾಗರಿಕ ಸಂಹಿತೆ ಬಗ್ಗೆ ಜನರಿಂದ ಅಭಿಪ್ರಾಯ ಕೇಳಿದೆ. ಇದರ ಜೊತೆಗೆ ಆಯೋಗವು ಮಾನ್ಯತೆ ಪಡೆದ ಧಾರ್ಮಿಕ ಸಂಘಟನೆಗಳಿಂದ ಕೂಡ ಅದರ ಅಭಿಪ್ರಾಯ ಕಳಿಸಲು ಕರೆ ನೀಡಿದೆ. ನಾಗರೀಕ ಮತ್ತು ಧಾರ್ಮಿಕ ಸಂಘಟನೆಗಳು ತಮ್ಮ ತಮ್ಮ ಅಭಿಪ್ರಾಯಗಳನ್ನು ೩೦ ದಿನದೊಳಗೆ ಕಳುಹಿಸುವುದು ಅವಶ್ಯಕವಾಗಿದೆ.

ಈ ಹಿಂದೆ ಅಂದರೆ ೨೧ ನೇಯ ಕಾನೂನು ಆಯೋಗ ಕೂಡ ಮೂರು ವರ್ಷಗಳ ಹಿಂದೆ ಏಕರೂಪ ನಾಗರಿಕ ಸಂಹಿತೆಯ ವಿಷಯದ ಬಗ್ಗೆ ಅಧ್ಯಯನ ನಡೆಸಿತ್ತು. ಅದರ ನಂತರ ಕೇಂದ್ರೀಯ ಕಾನೂನು ಮತ್ತು ನ್ಯಾಯಾಂಗ ಸಚಿವಾಲಯಕ್ಕೆ ಕಳುಹಿಸಿದ ಪತ್ರದ ನಂತರ ಪ್ರಸ್ತುತ ಕಾನೂನು ಆಯೋಗದಿಂದ ಈ ವಿಷಯದ ಪ್ರಕ್ರಿಯೆ ಆರಂಭವಾಯಿತು.
ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಯಾದರೆ ಎಲ್ಲಾ ನಾಗರಿಕರಿಗಾಗಿ ವಿವಾಹ, ವಿಚ್ಛೇದನ, ದತ್ತು ಪಡೆಯುವುದು, ಪಿತ್ರಾರ್ಜಿತ ಆಸ್ತಿ ಮತ್ತು ಉತ್ತರಾಧಿಕಾರ ಇಂತಹ ವೈಯಕ್ತಿಕ ಪ್ರಕರಣಗಳಲ್ಲಿ ಸಮಾನ ನ್ಯಾಯ ದೊರೆಯುವುದು.