ಕೆನಡಾ ಸರಕಾರ ಭಾರತೀಯ ವಿದ್ಯಾರ್ಥಿಗಳ ಗಡೀಪಾರಿಗೆ ಸ್ತಗಿತ

ಕೆನಡಾದ ವಲಸೆ ಸಚಿವ ಸೀನ್ ಫ್ರೇಸರ್ (ಮಧ್ಯ)

ಓಟಾವಾ (ಕೆನಡಾ) – ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹಸ್ತಕ್ಷೇಪದ ನಂತರ ಕೆನಡಾ ಸರಕಾರವು ಭಾರತೀಯ ವಿದ್ಯಾರ್ಥಿಗಳ ಗಡಿಪಾರು ಮಾಡುವುದನ್ನು ಸ್ತಗಿತಗೊಳಿಸಿದೆ. ಇದಕ್ಕೂ ಮೊದಲು ಕೆನಡಾ ಸರಕಾರವು ಭಾರತೀಯ ವಿದ್ಯಾರ್ಥಿ ಲವ್‌ಪ್ರೀತ್ ಸಿಂಗ್‌ಗೆ ಜೂನ್ ೧೩ ರೊಳಗೆ ದೇಶವನ್ನು ತೊರೆಯುವಂತೆ ಆದೇಶಿಸಿತ್ತು. ಈ ಆದೇಶದ ನಂತರ ಭಾರತೀಯ ವಿದ್ಯಾರ್ಥಿಗಳು ಪ್ರತಿಭಟನೆ ಆರಂಭಿಸಿದ್ದರು.

ಭಾರತೀಯ ವಿದ್ಯಾರ್ಥಿಗಳನ್ನು ಗಡಿಪಾರು ಮಾಡುವ ನಿರ್ಧಾರದ ಮೇಲೆ ಕೆನಡಾದ ಸಂಸತ್ತಿನಲ್ಲಿ ಮತದಾನ ನಡೆಯಿತು. ಈ ಮತದಾನದಲ್ಲಿ ಭಾರತೀಯ ವಿದ್ಯಾರ್ಥಿಗಳ ಪರವಾಗಿ ಫಲಿತಾಂಶ ಬಂದಿದೆ. ಕೆನಡಾದ ಸಂಸದ ಜೆನಿ ಕೊವಾನ್ ಇವರು, ಭಾರತೀಯ ವಿದ್ಯಾರ್ಥಿಗಳು ವಂಚನೆಗೆ ಬಲಿಯಾಗಿದ್ದಾರೆ ಹಾಗಾಗಿ ಅವರಿಗೆ ಶಿಕ್ಷೆಯಾಗಬಾರದು. ಇದರಿಂದ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ದೇಶ ತೊರೆಯುವಂತೆ ಆದೇಶಿಸಲಾಗಿದೆ. ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಭಾರತೀಯ ವಿದ್ಯಾರ್ಥಿಗಳಿಗೆ ಸಾಧ್ಯವಿರುವಷ್ಟು ಎಲ್ಲ ಸಹಾಯವನ್ನು ನೀಡುವಂತೆ ಸೂಚಿಸಿದ್ದರು ಎಂದು ಹೇಳಿದರು.