ಅಮಳನೆರ(ಜಳಗಾವ ಜಿಲ್ಲೆ)ನಲ್ಲಿ ಮಕ್ಕಳ ಆಟದ ಜಗಳದಿಂದಾಗಿ ಮತಾಂಧರು ದಂಗೆ ಮಾಡಿದರು !

  • ಸಹಾಯಕ ಪೊಲೀಸ ನಿರೀಕ್ಷಕರ ಮೇಲೆ ಖಡ್ಗದಿಂದ ಆಕ್ರಮಣ

  • 6 ಪೊಲೀಸರಿಗೆ ಗಾಯ

  • ದತ್ತಮಂದಿರದ ದಿಕ್ಕಿನಲ್ಲಿಯೂ ಕಲ್ಲುತೂರಾಟ !

  • ಪೊಲೀಸರಿಂದ ಪ್ರತೀಕಾರ ಮಾಡುವ ಹಿಂದೂಗಳ ತಡೆ !

  • 61 ಜನರ ಮೇಲೆ ಅಪರಾಧ ದಾಖಲು; 29 ಜನರ ಬಂಧನ

ಅಮಳನೆರ – ಇಲ್ಲಿನ ಸಫಾರ ಗಲ್ಲಿಯಲ್ಲಿನ ಜಿನಗರ ಗಲ್ಲಿಯಲ್ಲಿ ರಾತ್ರಿಗೆ ಮಕ್ಕಳ ನಡುವೆ ಕ್ರಿಕೆಟ್ ಆಟದಿಂದಾಗಿ ನಡೆದ ಜಗಳವು ದೊಡ್ಡದಾಗಿ ಮತಾಂಧರು ಹಿಂದೂಗಳ ಮೇಲೆ ದೊಡ್ಡ ಪ್ರಮಾಣದಲ್ಲಿ ಕಲ್ಲುತೂರಾಟ ಮಾಡಿದ್ದರಿಂದ ದಂಗೆ ನಡೆದಿದೆ. (ಮತಾಂಧರು ಕಲ್ಲುಗಳನ್ನು ಸಂಗ್ರಹಿಸಿ ಇಟ್ಟಿರುತ್ತಾರೆ, ಎಂಬುದು ಯಾವಾಗಲೂ ಗಮನಕ್ಕೆ ಬರುತ್ತಿರುವುದರಿಂದ ಆಗಾಗ ಮತಾಂಧರ ಮನೆಗಳ ಮೇಲೆ ದಾಳಿ ಮಾಡಿ `ಕಲ್ಲುಗಳಿವೆಯೇ ?’ ಎಂಬುದನ್ನು ಪರಿಶೀಲಿಸಬೇಕು, ಎಂದು ಯಾರಿಗಾದರೂ ಅನಿಸಿದರೆ ಅದರಲ್ಲಿ ತಪ್ಪೇನು ? – ಸಂಪಾದಕರು)

(ಸೌಜನ್ಯ – TIMES NOW)

1. `ಕಲ್ಲುತೂರಾಟ ನಡೆಯುತ್ತಿದೆ’, ಎಂಬುದು ತಿಳಿಯುತ್ತಲೇ ಪೊಲೀಸ ಅಧಿಕಾರಿಗಳು ಘಟನಾಸ್ಥಳವನ್ನು ತಲುಪಿದರು. ಆಗ ಮತಾಂಧರು ಕಲ್ಲು, ಇಟ್ಟಿಗೆ, ಟೈಲ್ಸ್ ಗಳ ಸಹಾಯದಿಂದ ಪೊಲೀಸರು ಹಾಗೂ ಅಧಿಕಾರಿಗಳ ಮೇಲೆ ಆಕ್ರಮಣ ಮಾಡಿದರು.

2. ಇರಫಾನ ಜಹೂರ ದಿಲದಾರನು ಖಡ್ಗದಿಂದ ಸಹಾಯಕ ಪೊಲೀಸ ನಿರೀಕ್ಷಕರಾದ ರಾಕೇಶ ಸಿಂಹರವರ ಮೇಲೆ ಆಕ್ರಮಣ ಮಾಡಿದನು. ಅವರು ಆ ಹೊಡೆತವನ್ನು ತಪ್ಪಿಸಿಕೊಂಡರು; ಆದರೂ ಅವರ ಕಾಲಿನ ಮೂಳೆಯ ಫ್ರಾಕ್ಚರ್ ಅಗಿರುವುದಾಗಿ ಹೇಳಲಾಗುತ್ತಿದೆ.

3. ಆನಂತರ ಪೊಲೀಸರು ಹೆಚ್ಚಿನ ಪಡೆಯನ್ನು ಕರೆಯಿಸಿಕೊಂಡರು. ಆಗ ಹಿಂದೂಗಳು ದಂಗೆಕೊರರಿಗೆ ಪ್ರತ್ಯುತ್ತರ ನೀಡಿದರು. ಇಲ್ಲಿಯವರೆಗೆ 61 ಜನರನ್ನು ಬಂಧಿಸಲಾಗಿದ್ದು 29 ಜನರ ಮೇಲೆ ಅಪರಾಧವನ್ನು ದಾಖಲಿಸಲಾಗಿದೆ. ಇಲ್ಲಿ ಕಲಂ 144 ನ್ನು ಜ್ಯಾರಿಗೊಳಿಸಲಾಗಿದ್ದು 2 ದಿನಗಳ ವರೆಗೆ ಸಂಚಾರನಿಷೇಧವನ್ನು ಜ್ಯಾರಿಗೊಳಿಸಲಾಗಿದೆ. ಇಲ್ಲಿ ರಾತ್ರಿ ದೊಡ್ಡ ಪ್ರಮಾಣದಲ್ಲಿ ಪೊಲೀಸ ಬಂದೋಬಸ್ತು ಇಡಲಾಗಿತ್ತು.

4. ಚಿಂದರ ಗಲ್ಲಿಯಲ್ಲಿ ಕಲ್ಲುತೂರಾಟದ ನಂತರ ನಗರದಲ್ಲಿ ಇತರ ಕಡೆಗಳಲ್ಲಿಯೂ ದಂಗೆಯ ಅಲೆ ಹರಡಿತು. ಪಾನಖಿಡಕಿ, ಖಡ್ಡಾಜೀನ, ಸುಭಾಷ ಚೌಕ, ಗಾಂಧೀಪುರಾ ಪರಿಸರಗಳಲ್ಲಿಯೂ ಹಿಂದೂ ಮುಸಲ್ಮಾನರ ನಡುವೆ ದೊಡ್ಡ ಪ್ರಮಾಣದಲ್ಲಿ ಕಲ್ಲುತೂರಾಟ ನಡೆಯಿತು.

5. ಪೊಲೀಸರು ತತ್ಪರತೆಯಿಂದ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ರಸ್ತೆಗಳ ಮೇಲೆ ಇಟ್ಟಿಗೆಯ ದೊಡ್ಡ ರಾಶಿ ಬಿದ್ದಿತ್ತು. ಸಿಸಿಟಿವಿಯನ್ನು ಪರಿಶೀಲಿಸಿ ಪೊಲೀಸರು ದಂಗೆಯ ಹಿಂದಿನ ಕಾರಣದೊಂದಿಗೆ ಆರೋಪಿಗಳನ್ನೂ ಹುಡುಕುತ್ತಿದ್ದಾರೆ.

6 . ಆವಶ್ಯಕವೆನಿಸಿದರೆ ಸಂಚಾರನಿಷೇಧವನ್ನು ಇನ್ನೂ ಹೆಚ್ಚಿಸಲಾಗುವುದು. ನಗರದಲ್ಲಿನ ನಾಗರೀಕರು ಈ ಸಮಯದಲ್ಲಿ ತಮ್ಮ ತಮ್ಮ ಮನೆಗಳಲ್ಲಿಯೇ ಉಳಿದು ಆಡಳಿತಕ್ಕೆ ಸಹಾಯ ಮಾಡಬೇಕಾಗಿ ಕರೆ ನೀಡಲಾಗಿದೆ. ಅತ್ಯಂತ ಆವಶ್ಯಕ ಸೇವೆ, ಹಾಗೆಯೇ ಮದುವೆ, ಅಂತ್ಯಸಂಸ್ಕಾರ ಇತ್ಯಾದಿಗಳಿಗಾಗಿ ಸಂಚಾರನಿಷೇಧವಿಲ್ಲ.

ಪವನ ಚೌಕಿಯಲ್ಲಿ ಪ್ರತೀಕಾರ ಮಾಡುವ ಹಿಂದೂಗಳನ್ನು ಪೊಲೀಸರು ತಡೆದಿದ್ದಾರೆ !

ಆಠವಡಾ ಬಜಾರ ಭಾಗದಲ್ಲಿನ ತಿರಂಗಾ ಚೌಕಿಯಲ್ಲಿರುವ ದತ್ತ ಮಂದಿರದ ಮೇಲೆಯೂ ಮತಾಂಧರು ಕಲ್ಲುತೂರಾಟ ಮಾಡಿದ್ದಾರೆ. ಈ ವಿಷಯವು ಪವನಚೌಕ ಭಾಗದಲ್ಲಿರುವ ಹಿಂದೂ ಯುವಕರಿಗೆ ತಿಳಿಯುತ್ತಲೇ ಆ ಯುವಕರು ಪ್ರತೀಕಾರ ಮಾಡಲು ಹೊರಗೆ ಬರುತ್ತಿರುವುದು ಕಂಡುಬಂದಾಗ ಪೊಲೀಸರು ಅವರನ್ನು ತಡೆಹಿಡಿದರು. `ಪೊಲೀಸರು ಇದ್ದರೂ ಯಾವುದೇ ಉಪಯೋಗವಿಲ್ಲ. ಪೊಲೀಸರು ಹಿಂದೂಗಳನ್ನು ತಡೆಯುತ್ತಾರೆ; ಆದರೆ ಮುಸಲ್ಮಾನರನ್ನು ತಡೆಯುವುದಿಲ್ಲ’, ಎಂಬಂತಹ ಪ್ರತಿಕ್ರಿಯೆಯನ್ನು ಅಲ್ಲಿನ ಯುವಕರು ವ್ಯಕ್ತಪಡಿಸಿದ್ದಾರೆ.(ಹಿಂದೂಗಳು ಹೊಡೆತ ತಿನ್ನಬೇಕು, ಪ್ರತೀಕಾರ ಮಾಡಲೂಬಾರದು, ಎಂಬಂತಹ ಸ್ಥಿತಿಯು ಹಿಂದೂಗಳದ್ದಾಗಿದೆ. ಪೊಲೀಸರು ಮತಾಂಧರಿಗೆ ಪಾಠ ಕಲಿಸಿದ್ದರೆ ಹಿಂದೂಗಳಿಗೆ ಪ್ರತೀಕಾರ ಮಾಡುವ ಪ್ರಮೇಯವೇ ಬರುತ್ತಿರಲಿಲ್ಲ, ಎಂಬುದನ್ನು ಪೊಲೀಸರು ಗಮನದಲ್ಲಿಡಬೇಕು !)

ಸಂಪಾದಕೀಯ ನಿಲುವು

ಮತಾಂಧರು ದಂಗೆಗಳನ್ನು ಮಾಡಲು ಕಾರಣಗಳನ್ನು ಹೇಗೆ ಹುಡುಕುತ್ತಿದ್ದಾರೆ, ಎಂಬುದು ಇದರಿಂದ ಗಮನಕ್ಕೆ ಬರುತ್ತದೆ. ಈಗ `ಸರಕಾರವು ದಂಗೆಗಳು ನಡೆಯುವಂತೆ ಪ್ರೇರೇಪಿಸುತ್ತದೆ, ಎಂದು ಆರೋಪಿಸುವವರಿಗೆ ಏನಾದರೂ ಹೇಳಲಿಕ್ಕಿದೆಯೇ ?

ಮತಾಂಧರು ಪೊಲೀಸ ಅಧಿಕಾರಿಗಳ ಮೇಲೆ ಪ್ರಾಣಘಾತಕ ಆಕ್ರಮಣ ಮಾಡುವಷ್ಟು ಉದ್ಧಟರಾಗಿದ್ದಾರೆ, ಎಂಬುದೇ ಇದರಿಂದ ಸ್ಪಷ್ಟವಾಗುತ್ತದೆ. ಪೊಲೀಸರು ಇಂತಹವರಿಗೆ ಪಾಠ ಕಲಿಸಲು ಏನು ಮಾಡುವರು ?