ಭಾರತದ ಸಂಸತ್ತಿನಲ್ಲಿ ಹಾಕಲಾಗಿರುವ ಅಖಂಡ ಭಾರತದ ನಕಾಶೆ ರಾಜಕೀಯವಾಗಿರದೇ ಸಾಂಸ್ಕೃತಿಕವಾಗಿದೆ ! – ನೇಪಾಳ ಪ್ರಧಾನಮಂತ್ರಿ ‘ಪ್ರಚಂಡ’

ಕಾಠ್ಮಂಡು (ನೇಪಾಳ) – ಭಾರತದ ಹೊಸ ಸಂಸತ್ತಿನಲ್ಲಿ ಹಾಕಲಾಗಿರುವ ಅಖಂಡ ಭಾರತದ ನಕಾಶೆ ರಾಜಕೀಯವಾಗಿರದೇ ಸಾಂಸ್ಕೃತಿಕವಾಗಿದೆಯೆಂದು ನೇಪಾಳ ಪ್ರಧಾನಮಂತ್ರಿ ಪುಷ್ಪ ಕಮಲ ದಹಲ ಪ್ರಚಂಡ ಇವರು ನೇಪಾಳ ಸಂಸತ್ತಿನಲ್ಲಿ ಮಾಹಿತಿ ನೀಡಿದ್ದಾರೆ. ನೇಪಾಳದ ವಿರೋಧಿ ಪಕ್ಷಗಳು ಈ ನಕಾಶೆಯ ಕುರಿತು ಭಾರತವನ್ನು ಟೀಕಿಸಿದ್ದರು. ಅಖಂಡ ಭಾರತದ ನಕಾಶೆಯಲ್ಲಿ ನೇಪಾಳವನ್ನು ಭಾರತದ ಭಾಗವೆಂದು ತೋರಿಸಲಾಗಿರುವುದರಿಂದ ವಿರೋಧಿ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಈ ಬಗ್ಗೆ ಪ್ರಚಂಡ ಇವರು ಮಾಹಿತಿಯನ್ನು ನೀಡಿದರು.

ಪ್ರಧಾನಮಂತ್ರಿ ಪ್ರಚಂಡ ಇವರು ಇತ್ತೀಚೆಗೆ ಭಾರತದ ಪ್ರವಾಸದಲ್ಲಿದ್ದರು. ಆ ಸಮಯದಲ್ಲಿ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅವರನ್ನು ಭೇಟಿಯಾಗಿದ್ದರು. ಆಗ ಪ್ರಚಂಡ ಇವರು ಈ ನಕಾಶೆಯ ವಿಷಯದಲ್ಲಿ ಮೋದಿಯವರನ್ನು ವಿಚಾರಿಸಿದಾಗ ಮೋದಿಯವರು ಅದು ಸಾಂಸ್ಕೃತಿಕ ನಕಾಶೆಯಾಗಿದೆಯೆಂದು ಹೇಳಿದ್ದರು ಎಂದು ಪ್ರಚಂಡ ಇವರು ನೇಪಾಳ ಸಂಸತ್ತಿನಲ್ಲಿ ಮಾಹಿತಿ ಹೇಳಿದರು.