ತಿರುಪತ್ತೂರ (ತಮಿಳುನಾಡು) ಇಲ್ಲಿ ಪ್ರೇಯಸಿಯೊಂದಿಗೆ ನಡೆದ ಜಗಳದಲ್ಲಿ ಯುವಕನು ರೇಲ್ವೆ ಸಿಗ್ನಲ್ ಬಾಕ್ಸ ಹಾನಿ ಮಾಡಿದ !

ಇಂತಹ ಕೃತ್ಯ ಮಾಡುವವರಿಗೆ ಕಠಿಣ ಶಿಕ್ಷೆಯನ್ನು ವಿಧಿಸಬೇಕು !

ತಿರುಪತ್ತೂರ (ತಮಿಳುನಾಡು) – ಇಲ್ಲಿ ಗೋಕುಲ ಹೆಸರಿನ 30 ವರ್ಷದ ವ್ಯಕ್ತಿಯು ಪ್ರೇಯಸಿಯೊಂದಿಗೆ ಜಗಳವಾದ ಬಳಿಕ ಸಿಟ್ಟಿನಲ್ಲಿ ರೇಲ್ವೆ ಸಿಗ್ನಲ್ ಬಾಕ್ಸ ಹಾನಿ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ರೇಲ್ವೆ ಅಧಿಕಾರಿಗಳು ಇಲ್ಲಿ ರೇಲ್ವೆ ಹಳಿಯ ತಪಾಸಣೆ ನಡೆಸಿದಾಗ ಸಿಗ್ನಲ್ ಬಾಕ್ಸ ಕೆಟ್ಟಿರುವುದು ಕಂಡು ಬಂದಿತು. ರೇಲ್ವೆ ಪೊಲೀಸರು ಘಟನಾಸ್ಥಳದಲ್ಲಿ ಗೋಕುಲನನ್ನು ಮದ್ಯಪಾನ ಸೇವಿಸಿರುವ ಸ್ಥಿತಿಯಲ್ಲಿ ನೋಡಿದರು. ಅವನ ವಿಚಾರಣೆ ನಡೆಸಿದಾಗ ಅವನು ಮೊದಲು ಸಿಗ್ನಲ್ ಬಾಕ್ಸ ಕೆಡಿಸಿರುವುದನ್ನು ನಿರಾಕರಿಸಿದನು. ಆದರೆ ತದನಂತರ ಬಾಕ್ಸ ಕೆಡಿಸಿರುವುದಾಗಿ ಒಪ್ಪಿಕೊಂಡನು. ಪ್ರೇಯಸಿಯೊಂದಿಗೆ ನಡೆದ ಜಗಳದಲ್ಲಿ ಸಿಟ್ಟಿನಲ್ಲಿ ಅವನು ಆ ರೀತಿ ಮಾಡಿರುವುದಾಗಿ ಹೇಳಿದನು.