ಭೂಮಿಯ ಮಧ್ಯಭಾಗವನ್ನು ಕಂಡುಹಿಡಿಯಲು ಚೀನಾ ೩೨ ಸಾವಿರದ ೮೦೮ ಅಡಿ ಉತ್ಖನನ !

೪೫೭ ದಿನಗಳಲ್ಲಿ ಉತ್ಖನನ ಪೂರ್ಣಗೊಳ್ಳಲಿದೆ !

ಬೀಜಿಂಗ್ (ಚೀನಾ) – ಭೂಮಿಯ ಮಧ್ಯಭಾಗವನ್ನು ಕಂಡುಹಿಡಿಯಲು ಚೀನಾ ೩೨,೮೦೮ ಅಡಿ ಆಳದ ಉತ್ಖನನವನ್ನು ಪ್ರಾರಂಭಿಸಿದೆ. ಶಿನಜಿಯಾಂಗ್ ಪ್ರದೇಶದ ತಾರಿಮ್ ತೈಲ ಕ್ಷೇತ್ರದ ಬಳಿ ಉತ್ಖಲನ ಮಾಡಲಾಗುತ್ತಿದೆ. ಚೀನಾ ಇದನ್ನು ‘ಸಂಶೋಧನಾ ಪ್ರಕಲ್ಪ’ ಎಂದು ಕರೆದಿದೆ, ಇದನ್ನು ೪೫೭ ದಿನಗಳಲ್ಲಿ ಮುಕ್ತಾಯಗೊಳ್ಳಬಹುದು. ೧೯೮೯ರಲ್ಲಿ ರಷ್ಯಾ ಭೂಮಿಯ ಮಧ್ಯಭಾಗದಲ್ಲಿ ೪೦,೨೩೦ ಅಡಿ ಆಳದ ಗುಂಡಿ ತೋಡಿತ್ತು. ಅದಕ್ಕೆ ೨೦ ವರ್ಷ ತಗಲಿತ್ತು. ಅದಕ್ಕೆ ‘ಕೋಲಾ ಸೂಪರ್‌ದೀಪ್ ಬೋಅರಹೋಲ್’ ಎಂದು ಹೆಸರಿಸಲಾಯಿತು.