ದೇಶದ್ರೋಹದ ಕಾನೂನು ರದ್ದುಗೊಳಿಸಲು ಸಾಧ್ಯವಿಲ್ಲ ! – ಕಾನೂನು ಆಯೋಗ

ಸರ್ವೋಚ್ಚ ನ್ಯಾಯಾಲಯವು ಈ ಕಾನೂನಿನ ಅಡಿಯಲ್ಲಿ ಪ್ರಾರಂಭಿಸಿರುವ ಮೊಕದ್ದಮೆಗಳನ್ನು ತಡೆಹಿಡಿದು ಕಾನೂನನ್ನು ರದ್ದುಗೊಳಿಸುವಂತೆ ಸಲಹೆಯನ್ನು ನೀಡಿತ್ತು !

ನವದೆಹಲಿ – ದೇಶದ್ರೋಹದ ಕಾನೂನು ರದ್ದುಗೊಳಿಸಲು ಸಾಧ್ಯವಿಲ್ಲವೆಂದು ಕಾನೂನು ಆಯೋಗವು ಜೂನ 1 ರಂದು ಕೇಂದ್ರಸರಕಾರಕ್ಕೆ ವರದಿಯನ್ನು ಒಪ್ಪಿಸಿದೆ. ದೇಶದ್ರೋಹದ ಪ್ರಕರಣಗಳನ್ನು ಪರಿಶೀಲಿಸಲು ಇರುವ ಭಾರತೀಯ ದಂಡ ಸಂಹಿತೆಯ ಕಲಂ ‘124 ಅ’ ಮುಂದುವರಿಸುವುದು ಆವಶ್ಯಕವಾಗಿದೆ. ಆದರೂ ಅದರ ಉಪಯೋಗದಲ್ಲಿ ಸುಸ್ಪಷ್ಟತೆ ತರಲು ಅದರಲ್ಲಿ ಸುಧಾರಣೆಗಳನ್ನು ಮಾಡುವುದು ಆವಶ್ಯಕವಾಗಿದೆಯೆಂದು ಈ ವರದಿಯಲ್ಲಿ ತಿಳಿಸಲಾಗಿದೆ.

1. ಈ ವರದಿಯಲ್ಲಿ, ಕಲಂ ‘124 ಅ’ ದುರುಪಯೋಗವಾಗಬಾರದು ಎಂದು ಅದರಲ್ಲಿ ಸರಕಾರ ಆವಶ್ಯಕ ಮಾರ್ಗದರ್ಶಿ ಅಂಶಗಳನ್ನು ಜಾರಿಗೊಳಿಸಬೇಕು. ಆದರೂ ಅದನ್ನು ರದ್ದುಗೊಳಿಸಿದರೆ ದೇಶದ ಅಖಂಡತೆ ಮತ್ತು ಸುರಕ್ಷತೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.

2. ಕೇಂದ್ರ ಸರಕಾರವು ದೇಶದ್ರೋಹದ ಕಾನೂನಿನಲ್ಲಿ ಸುಧಾರಣೆಯನ್ನು ಮಾಡಲು ಸಿದ್ಧತೆಯನ್ನು ಮಾಡುತ್ತಿದೆ. ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಸರಕಾರ ಪ್ರಸ್ತಾವನೆಯನ್ನು ಮಂಡಿಸಬಹುದಾಗಿದೆ.

3. ಕಳೆದ ವರ್ಷ ಮೇ 1 ರಂದು ಸರ್ವೋಚ್ಚ ನ್ಯಾಯಾಲಯವು ಕಲಂ ‘124 ಅ’ ನ್ಯಾಯಸಮ್ಮತ ಬಗ್ಗೆ ತೀರ್ಪು ನೀಡುವಾಗ ಈ ಕಾನೂನನ್ನು ಸ್ಥಗಿತಗೊಳಿಸಿತ್ತು. ನ್ಯಾಯಾಲಯವು, ಈ ಕಾನೂನಿನ ಅಡಿಯಲ್ಲಿ ನಡೆಯುತ್ತಿರುವ ಎಲ್ಲ ಮೊಕದ್ದಮೆಗಳನ್ನು ತಡೆಹಿಡಿಯಬೇಕು. ಸರಕಾರವು ಈ ಕಾನೂನಿನಲ್ಲಿ ಬದಲಾವಣೆ ಮಾಡಬೇಕು ಅಥವಾ ಅದನ್ನು ರದ್ದುಗೊಳಿಸಬೇಕು ಎಂದು ಹೇಳಿತ್ತು.