|
ರಾಯಗಢ (ಛತ್ತೀಸ್‌ಗಢ) – ಹಿಂದೂ ಯುವತಿಯರು ಮತ್ತು ಮಹಿಳೆಯರಿಗೆ ಕಂಠಕವಾಗಿರುವ ಲವ್ ಜಿಹಾದ್ ಪ್ರಕರಣ ಇದೀಗ ಛತ್ತೀಸ್‌ಗಢ ರಾಜ್ಯದ ರಾಯಗಡದಲ್ಲಿ ಬೆಳಕಿಗೆ ಬಂದಿದೆ. ಇಲ್ಲಿ ಮೊದಲೇ ವಿವಾಹವಾಗಿದ್ದ ದಾನಿಶ ಹೆಸರಿನ ಯುವಕನು ಓರ್ವ ಹಿಂದುಳಿದ ವರ್ಗದ ಹಿಂದೂ ಯುವತಿಯನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿ ಅವಳೊಂದಿಗೆ `ಲಿವ್ ಇನ್ ರಿಲೇಶನಶಿಪ್’ ನಲ್ಲಿ (ವಿವಾಹವಾಗದೇ ಒಟ್ಟಿಗೆ ಇರುವುದು) ಇರುತ್ತಿದ್ದನು. ಯುವತಿ ಗರ್ಭಿಣಿಯಾದಾಗ ದಾನಿಶನು ಅವಳಿಗೆ ಬಲವಂತವಾಗಿ ಔಷಧಿ ನೀಡಿ ಗರ್ಭಪಾತ ಮಾಡಿಸಿದನು. ತದನಂತರ ಅವಳ ಆರೋಗ್ಯ ಹದಗೆಟ್ಟಿದ್ದರಿಂದ ಅವಳನ್ನು ಆಸ್ಪತ್ರೆಗೆ ದಾಖಲಿಸಿದನು. ಅಲ್ಲಿ ಅವಳು ಸಾವನ್ನಪ್ಪಿದಳು.
Chhattisgarh(#LoveJihaad)
A Dalit Hindu girl was in a Live-in Relationship with Danish Khan. She died a few months back.
– Now, Her family has accused Danish of feeding her Abortion pills forcefully & assaulting for not accepting Islam🤲
This is after they accessed her chats📱 pic.twitter.com/rko4xJNztR
— The Analyzer (News Updates🗞️) (@Indian_Analyzer) June 1, 2023
ಈ ಪ್ರಕರಣದಲ್ಲಿ ಸಾಯುವ ಮೊದಲು ಸಂತ್ರಸ್ತೆಯು ಮಾಡಿದ ಒಂದು ವಿಡಿಯೋ ಬಹಿರಂಗವಾಗಿದೆ. ಅದರಲ್ಲಿ ಅವಳು `ದಾನಿಶ ನನ್ನ ಮೇಲೆ ಹಲ್ಲೆ ಮಾಡಿ ಅವಮಾನ ಮಾಡುತ್ತಿದ್ದನು. ನಾನು ಅವನಿಂದ ಬೇರೆಯಾಗಲು ಇಚ್ಛಿಸಿದ್ದೆನು; ಆದರೆ ಅವನು ನನ್ನನ್ನು ಬಿಡುತ್ತಿರಲಿಲ್ಲ. ನನಗೆ ಮೇಲಿಂದ ಮೇಲೆ ತೊಂದರೆ ಕೊಡುತ್ತಿದ್ದನು. ದಾನಿಶನಿಂದ ನಾನು ಈ ಮೊದಲೂ ಒಂದು ಮಗುವಿಗೆ ಜನ್ಮ ನೀಡಿದ್ದೆನು. ಆದರೆ ದಾನಿಶನು ಮಗುವಿನ ಜನಿಸಿದ ಎರಡು ದಿನಗಳ ಬಳಿಕ ಮಗುವನ್ನು ಕಣ್ಮರೆ ಮಾಡಿದನು’ ಎಂದು ಹೇಳಿದ್ದಾಳೆ.
ಮೃತ ಯುವತಿಯ ಸಹೋದರನು, ದಾನಿಶ ತನ್ನ ಗುರುತನ್ನು ಮುಚ್ಚಿಟ್ಟು ನನ್ನ ಸಹೋದರಿಯೊಂದಿಗೆ ಸಂಬಂಧ ಬೆಳೆಸಿದನು. ಅವನು ಅವಳಿಗೆ ಇಸ್ಲಾಂ ಧರ್ಮವನ್ನು ಸ್ವೀಕರಿಸುವಂತೆ ಒತ್ತಡ ಹೇರುತ್ತಿದ್ದನು. ಅವಳು ವಿರೋಧಿಸಿದಾಗ ಅವಳನ್ನು ಥಳಿಸುತ್ತಿದ್ದನು ಎಂದು ಆರೋಪಿಸಿದ್ದಾನೆ. ದಾನಿಶ ವಿರುದ್ಧ ದೂರು ದಾಖಲಿಸಿ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳ ಅಧ್ಯಕ್ಷತೆಯಲ್ಲಿ ವಿಶೇಷ ತನಿಖಾ ದಳವನ್ನು ಸ್ಥಾಪಿಸುವಂತೆ ಯುವತಿಯ ಸಹೋದರನು ಕೋರಿದ್ದಾನೆ.
ಸಂಪಾದಕರ ನಿಲುವುಇಂತಹ ಘಟನೆಗಳನ್ನು ನೋಡಿದಾಗ ಈಗ ಕೇವಲ `ದಿ ಕೇರಳ ಸ್ಟೋರಿ’ ವರೆಗೆ ಸೀಮಿತಗೊಳ್ಳದೇ, `ದಿ ಇಂಡಿಯಾ ಫಾಯಿಲ್ಸ್’ ಹೆಸರಿನ ಚಲನಚಿತ್ರ ನಿರ್ಮಾಣ ಮಾಡಿ ಅದರಿಂದ ಲವ್ ಜಿಹಾದಗೆ ಬಲಿಯಾಗಿರುವ ದೇಶಾದ್ಯಂತವಿರುವ ಸಾವಿರಾರು ಹಿಂದೂ ಯುವತಿಯರ ಮತ್ತು ಸ್ತ್ರೀಯರ ದಯನೀಯ ಸ್ಥಿತಿಯನ್ನು ತೋರಿಸುವುದು ಅತ್ಯಾವಶ್ಯಕವಾಗಿದೆ. |