ಶವದ ಮೇಲೆ ಬಲಾತ್ಕಾರ ಮಾಡಿರುವವರ ಮೇಲೆ ಕಠಿಣ ಶಿಕ್ಷೆಯೊಂದಿಗೆ ಕಾನೂನನ್ನು ರೂಪಿಸಿ ! – ಕರ್ನಾಟಕ ಉಚ್ಚ ನ್ಯಾಯಾಲಯ

  • ಕಾನೂನಿನಲ್ಲಿ ಸುಧಾರಣೆ ಮಾಡುವಂತೆ ಕೇಂದ್ರಸರಕಾರಕ್ಕೆ ಆದೇಶ !

  • ಕಾನೂನಿನಲ್ಲಿರುವ ಕೊರತೆಗಳಿಂದ ಆರೋಪಿ ಬಲಾತ್ಕಾರದ ಅಪರಾಧದಿಂದ ಮುಕ್ತ !

  • ಹತ್ಯೆಯ ಪ್ರಕರಣದಲ್ಲಿ ನೀಡಿರುವ ತೀರ್ಪು ಮಾತ್ರ ಶಾಶ್ವತ

ನವ ದೆಹಲಿ – ಓರ್ವ ಅಪ್ರಾಪ್ತ ಹುಡುಗಿಯ ಹತ್ಯೆ ಮಾಡಿ ಅವಳ ಶವದ ಮೇಲೆ ಬಲಾತ್ಕಾರ ಮಾಡಿರುವ ಆರೋಪಿಗೆ ಕೊಲೆ ಅಪರಾಧಕ್ಕಾಗಿ ಶಿಕ್ಷೆಯನ್ನು ನೀಡಲಾಯಿತು; ಆದರೆ ಕಾನೂನಿನ ಲೋಪದೋಷಗಳ ದುರುಪಯೋಗವನ್ನು ಪಡೆದುಕೊಂಡಿರುವುದರಿಂದ ಅವನಿಗೆ ಬಲಾತ್ಕಾರದ ಅಪರಾಧಕ್ಕಾಗಿ ಶಿಕ್ಷೆಯನ್ನು ನೀಡಲಾಗಿಲ್ಲ. ಸಂಬಂಧಿಸಿದ ಪ್ರಕರಣದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯವು ಆರೋಪಿಗೆ ಬಲಾತ್ಕಾರದ ಅಪರಾಧದಿಂದ ಖುಲಾಸೆ ಮುಕ್ತಗೊಳಿಸಿದೆ. ನ್ಯಾಯಾಲಯವು ಈ ಕುರಿತು ಕೇಂದ್ರಸರಕಾರಕ್ಕೆ, ಸಂವಿಧಾನದ ಕಲಂ 377 ರ ಅಡಿಯಲ್ಲಿ ಶವದ ಮೇಲೆ ಮಾಡಿರುವ ಬಲಾತ್ಕಾರದ ಮೇಲೆ ಶಿಕ್ಷೆಗಾಗಿ ಕಾನೂನಿನಲ್ಲಿ ಯಾವುದೇ ನಿಬಂಧನೆಗಳಿಲ್ಲದಿರುವುದರಿಂದ ಸರಕಾರವು ಮುಂದಿನ 6 ತಿಂಗಳಿನಲ್ಲಿ ಕಾನೂನಿನಲ್ಲಿ ಬದಲಾವಣೆ ಮಾಡಬೇಕು. ಕಾನೂನಿನಲ್ಲಿ ಈ ಅಪರಾಧಕ್ಖಾಗಿ ಜೀವಾವಧಿ ಅಥವಾ ಕಡಿಮೆಯೆಂದರೂ 10 ವರ್ಷಗಳ ಕಾರಾಗೃಹವಾಸದ ಶಿಕ್ಷೆಯ ನಿಯಮಾವಳಿಗಳನ್ನು ರಚಿಸಬೇಕು.

ಸಂಬಂಧಿಸಿದ ಪ್ರಕರಣ ರಾಜ್ಯದ ತುಮಕೂರಿನದ್ದಾಗಿದ್ದು, ಜೂನ 2015 ರಲ್ಲಿ ರಂಗರಾಜು ಹೆಸರಿನ ವ್ಯಕ್ತಿಯು ಓರ್ವ ಅಪ್ರಾಪ್ತ ವಯಸ್ಸಿನ ಹುಡುಗಿಯನ್ನು ಹತ್ಯೆ ಮಾಡಿ ಅವಳ ಶವದ ಮೇಲೆ ಬಲಾತ್ಕಾರ ಮಾಡಿದ್ದನು. ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಅವನಿಗೆ ಹತ್ಯೆ ಮತ್ತು ಬಲಾತ್ಕಾರ ಹೀಗೆ ಎರಡೂ ಆರೋಪಗಳಡಿಯಲ್ಲಿ ಶಿಕ್ಷೆಯನ್ನು ವಿಧಿಸಿತ್ತು. ಇದಕ್ಕೆ ರಂಗರಾಜು ಉಚ್ಚ ನ್ಯಾಯಾಲಯಕ್ಕೆ ಮೊರೆ ಹೋದನು. ಇದರ ಮೇಲೆ ನ್ಯಾಯಾಲಯವು ಮೇಲಿನಂತೆ ಆದೇಶವನ್ನು ನೀಡಿತು.

ಸಂವಿಧಾನದ ಕಲಂ 377 ಇದು ಪುರುಷ, ಸ್ತ್ರೀ ಅಥವಾ ಪ್ರಾಣಿಗಳ ಸಂದರ್ಭದಲ್ಲಿ ಮಾಡಿದ ಅಪ್ರಾಕೃತಿಕ ಲೈಂಗಿಕ ಸಂಬಂಧದ ವಿಷಯದಲ್ಲಿ ವಿವರಿಸುತ್ತದೆ ಮತ್ತು ಆ ಸಂದರ್ಭದಲ್ಲಿರುವ ಅಪರಾಧದ ಮೇಲಿನ ಶಿಕ್ಷೆಯ ನಿಯಮಗಳನ್ನು ಹೇಳುತ್ತದೆ; ಆದರೆ ಇದರಲ್ಲಿ ಪುರುಷ ,ಸ್ತ್ರೀ ಅಥವಾ ಪ್ರಾಣಿಗಳ ಶವದ ಮೇಲೆ ಮಾಡಿರುವ ಅತ್ಯಾಚಾರದ ವಿಷಯದಲ್ಲಿ ಯಾವುದೇ ಸ್ಪಷ್ಟತೆಯಿಲ್ಲ ಎಂದು ಹೇಳಿದೆ.

ಸಂಪಾದಕೀಯ ನಿಲುವು

  • ಪ್ರತಿ ಬಾರಿಯೂ ನ್ಯಾಯಾಲಯ ಸರಕಾರಕ್ಕೆ ವಿವಿಧ ಕಾನೂನುಗಳಲ್ಲಿ ಸುಧಾರಣೆಗಳನ್ನು ಮಾಡುವಂತೆ ಹೇಳುವಂತೆ ಆಗಬಾರದು ! ಸರಕಾರವೇ ಕಾನೂನಿನಲ್ಲಿರುವ ಕೊರತೆಗಳನ್ನು ಕಂಡು ಹಿಡಿದು ತಾವಾಗಿಯೇ ಅದರಲ್ಲಿ ಬದಲಾವಣೆಗಳನ್ನು ಮಾಡುವುದು ಆವಶ್ಯಕವಾಗಿದೆ. ಜೊತೆಗೆ ಇಲ್ಲಿಯವರೆಗೆ ದೇಶದಲ್ಲಿರುವ ವಿವಿಧ ನ್ಯಾಯಾಲಯಗಳು ಕಾನೂನಿನಲ್ಲಿ ಬದಲಾವಣೆ ಮಾಡುವಂತೆ ಯಾವುದೆಲ್ಲ ಆದೇಶಗಳನ್ನು ಸರಕಾರಕ್ಕೆ ನೀಡಿವೆಯೋ, ಅದಕ್ಕೆ ಸರಕಾರಗಳು ಏನು ಮಾಡಿವೆ ? ಈ ಸಂದರ್ಭದಲ್ಲಿ ಒಂದು ಸಮಿತಿಯನ್ನು ರಚಿಸಿ ಅದರ ವರದಿಯನ್ನು ನಿಯಮಿತವಾಗಿ ಸಾದರಪಡಿಸಬೇಕು ಇದೇ ರೀತಿ ಸಂವೇದನಾಶೀಲ ಮತ್ತು ನ್ಯಾಯಪ್ರಿಯ ಜನತೆಗೆ ಅನಿಸುತ್ತದೆ !
  • ಸಮಾಜಪುರುಷ ಅಧ್ಯಾತ್ಮದಿಂದ ದೂರಹೋಗುತ್ತಿವುದರ ದ್ಯೋತಕವಾಗಿದೆ. ಸಮಾಜದ ಮನಸ್ಸಿನ ಮೇಲೆ ನೈತಿಕ ಮೌಲ್ಯಗಳು ಮತ್ತು ಸಾಧನೆಯ ಸಂಸ್ಕಾರ ಮಾಡಿದ ಬಳಿಕವೇ ಸಮಾಜ ನೈತಿಕವಾಗಲಿದೆ. ಇದಕ್ಕಾಗಿಯೇ ಹಿಂದೂ ರಾಷ್ಟ್ರದ ಆವಶ್ಯಕತೆಯಿದೆ !