ಬುಲಂದನಗರದಲ್ಲಿನ ೪ ದೇವಸ್ಥಾನಗಳಲ್ಲಿ ದೇವರ ಮೂರ್ತಿಗಳ ಧ್ವಂಸ !

  • ಹಿಂದೂಗಳಲ್ಲಿ ಆಕ್ರೋಶ

  • ಹೆಚ್ಚಿನ ಪ್ರಮಾಣದಲ್ಲಿ ಪೊಲೀಸ್ ಬಂದೋಬಸ್ತ

ಬುಲಂದನಗರದಲ್ಲಿನ ೪ ದೇವಸ್ಥಾನಗಳಲ್ಲಿ ದೇವರ ಮೂರ್ತಿಗಳ ಧ್ವಂಸ

ಬುಲಂದಶಹರ (ಉತ್ತರಪ್ರದೇಶ) – ಸಮಾಜಕಂಟಕರು ೪ ದೇವಸ್ಥಾನದಲ್ಲಿನ ಅನೇಕ ಮೂರ್ತಿಗಳನ್ನು ಬಗ್ನಗೊಳಿಸಿದ್ದಾರೆ. ಬುಲಂದಶಹರದಲ್ಲಿನ ಗುಲಾವಟಿಯಲ್ಲಿ ಬರಾಲ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಈ ಘಟನೆಯ ನಂತರ ಹಿಂದುತ್ವನಿಷ್ಠ ಸಂಘಟನೆಗಳ ಸಹಿತ ಎಲ್ಲಾ ಹಿಂದೂಗಳು ಅಸಮಾಧಾನ ವ್ಯಕ್ತಪಡಿಸುತ್ತಾ ದೇವಸ್ಥಾನಗಳಿಗೆ ಸಂರಕ್ಷಣೆ ನೀಡಲು ಒತ್ತಾಯಿಸಿದ್ದಾರೆ.

ಮೇ ೩೧ ರಂದು ರಾತ್ರಿ ಈ ಘಟನೆ ನಡೆದಿದೆ. ಮರುದಿನ ಬೆಳಿಗ್ಗೆ ಯಾವಾಗ ಭಕ್ತರು ಅದರಲ್ಲಿನ ಒಂದು ದೇವಸ್ಥಾನಕ್ಕೆ ಪೂಜಾ ಅರ್ಚನೆಗಾಗಿ ಹೋಗಿದ್ದರೋ ಆಗ ಅವರಿಗೆ ದೇವತೆಗಳ ಮೂರ್ತಿಯು ಭಗ್ನವಾಗಿರುವುದು ಕಂಡು ಬಂದಿದೆ. ಇದೇ ರೀತಿ ಇನ್ನೂ ೩ ದೇವಸ್ಥಾನಗಳಲ್ಲಿ ನಡೆದಿರುವುದು ಗಮನಕ್ಕೆ ಬಂದಿದೆ. ಕೆಲವು ಕ್ಷಣದಲ್ಲಿ ಈ ಮಾಹಿತಿ ಸಂಪೂರ್ಣ ಗ್ರಾಮದಲ್ಲಿ ಕಾಳಗಿಚ್ಚಿನಂತೆ ಹರಡಿದೆ. ಅದರ ನಂತರ ಸ್ಥಳೀಯ ಹಿಂದೂ ಗ್ರಾಮಸ್ಥರು ಹಾಗೂ ಹಿಂದುತ್ವನಿಷ್ಠ ಸಂಘಟನೆಯ ಪ್ರತಿನಿಧಿಗಳು ಘಟನಾಸ್ಥಳಕ್ಕೆ ಬಂದರು ಮತ್ತು ಅಪರಾಧಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಒತ್ತಾಯಿಸಿದರು. ಈ ೪ ದೇವಸ್ಥಾನಗಳಲ್ಲಿ ಒಂದು ದೇವಸ್ಥಾನ ೧೦೦ ವರ್ಷಗಳಷ್ಟು ಹಳೆಯದಾಗಿದೆ.

ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸುವೆವು ! – ಪೊಲೀಸ್ ಅಧಿಕ್ಷಕ ಸುರೇಂದ್ರನಾಥ ತಿವಾರಿ

ಈ ಘಟನೆಯ ನಂತರ ಪೊಲೀಸರು ಈ ದೇವಸ್ಥಾನಗಳನ್ನು ಮುಚ್ಚಿದ್ದಾರೆ. ಪೋಲಿಸ್ ಅಧಿಕ್ಷಕ ಸುರೇಂದ್ರನಾಥ ತಿವಾರಿ ಇವರು ಆರೋಪಿಯನ್ನು ಹುಡುಕಿ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಹಿಂದೂಗಳಿಗೆ ಆಶ್ವಾಸನೆ ನೀಡಿದರು. ಪ್ರಸ್ತುತ ಘಟನ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಬಂದೋಬಸ್ತ ಮಾಡಲಾಗಿದೆ.