ದಮೋಹ (ಮಧ್ಯ ಪ್ರದೇಶ) ಇಲ್ಲಿಯ ಖಾಸಗಿ ಶಾಲೆಯಲ್ಲಿ ಹಿಂದೂ ವಿದ್ಯಾರ್ಥಿನಿಯರಿಗೆ ಹಿಜಾಬ್ ಹೋಲುವಂತಹ ಸಮವಸ್ತ್ರ !

ಸರಕಾರದಿಂದ ತನಿಖೆಗೆ ಆದೇಶ !

ಹಿಜಾಬ್ (ಮುಸಲ್ಮಾನ ಮಹಿಳೆಯರು ತಲೆ ಮತ್ತು ಕತ್ತನ್ನು ಮುಚ್ಚಿಕೊಳ್ಳಲು ಉಪಯೋಗಿಸುವ ವಸ್ತ್ರ)

ಗಂಗಾ ಜಮುನಾ ಶಾಲಾ ಪೋಸ್ಟರ್ನಲ್ಲಿ ಹಿಜಾಬ್ ಧರಿಸಿದ ಮುಸ್ಲಿಮೇತರ ಹುಡುಗಿಯರು

ದಮೋಹ (ಮಧ್ಯಪ್ರದೇಶ) – ದಮೋಹ ಜಿಲ್ಲೆಯ ‘ಗಂಗಾ ಜಮುನಾ ಉಚ್ಚ ಮಾಧ್ಯಮಿಕ ವಿದ್ಯಾಲಯ’ ಈ ಖಾಸಗಿ ಶಾಲೆಯಲ್ಲಿ ಹಿಂದೂ ವಿದ್ಯಾರ್ಥಿನಿಯರು ಹಿಜಾಬ್ ನಂತೆ ಹೋಲುವ ಸಮವಸ್ತ್ರ ಧರಿಸಿರುವುದು ಕಂಡುಬಂದಿದೆ. ಈ ಪ್ರಕರಣದಲ್ಲಿ ಮಧ್ಯಪ್ರದೇಶ ಸರಕಾರವು ತನಿಖೆಗೆ ಆದೇಶ ನೀಡಿದೆ.

೧. ಗಂಗಾ ಜಮುನಾ ಉಚ್ಚ ಮಾಧ್ಯಮಿಕ ಶಾಲೆಯ ಭಿತ್ತಿ ಪತ್ರಕದಲ್ಲಿ ಹಿಂದೂ ವಿದ್ಯಾರ್ಥಿನಿಯರು ಹಿಜಾಬ್ ಹೋಲುವ ಸಮವಸ್ತ್ರ ಧರಿಸಿರುವುದು ಕಂಡು ಬರುತ್ತದೆ. ಇದರಿಂದ ವಿವಾದ ನಿರ್ಮಾಣವಾದ ನಂತರ ರಾಜ್ಯದ ಗೃಹ ಸಚಿವರು ನರೋತ್ತಮ ಮಿಶ್ರ ಇವರು, ಈ ಪ್ರಕರಣದ ಜಿಲ್ಲಾ ಶಿಕ್ಷಣಾಧಿಕಾರಿಗಳ ವಿಚಾರಣೆ ಮೊದಲು ನಡೆಸಿತ್ತು. ಇದರ ಹಿನ್ನೆಲೆಯಲ್ಲಿ ಯಾವುದೇ ತಕರಾರು ಬಂದಿಲ್ಲ. ಈ ಪ್ರಕರಣದ ಗಾಂಭೀರ್ಯ ಗಮನಕ್ಕೆ ತೆಗೆದುಕೊಂಡು ಪೊಲೀಸ ಅಧಿಕಾರಿಗಳಿಗೆ ಇದರ ಆಳವಾದ ವಿಚಾರಣೆ ನಡೆಸಲು ಆದೇಶ ನೀಡಲಾಗಿದೆ ಎಂದು ಹೇಳಿದರು.

೨. ಈ ಪ್ರಕರಣದಲ್ಲಿ ಹಿಂದೂ ಸಂಘಟನೆಗಳು ಜಿಲ್ಲಾಧಿಕಾರಿಯ ಕಚೇರಿಯ ಎದುರು ಪ್ರತಿಭಟನೆ ನಡೆಸಿ ಶಾಲೆಯ ಮಾನ್ಯತೆ ರದ್ದು ಪಡಿಸಲು ಒತ್ತಾಯಿಸುತ್ತಿದೆ. ‘ಶಾಲೆಯಿಂದ ಹಿಂದೂ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಲು ಅನಿವಾರ್ಯಗೊಳಿಸಲಾಗುತ್ತಿದೆ’, ಎಂದು ಸಂಘಟನೆಗಳು ಆರೋಪಿಸಿದೆ.

೩. ದಮೋಹ ಜಿಲ್ಲಾಧಿಕಾರಿ ಮಯಂಕ ಅಗ್ರವಾಲ ಇವರು, ಈ ಹಿಂದೆ ನಡೆದಿರುವ ಸಮೀಕ್ಷೆಯಲ್ಲಿ ಮತಾಂತರದ ದಾವೆ ಸುಳ್ಳು ಎಂದು ಕಂಡು ಬಂದಿದೆ. ಗೃಹ ಸಚಿವರ ಸೂಚನೆಯ ನಂತರ ಈ ಪ್ರಕರಣದ ವಿಚಾರಣೆಗಾಗಿ ಒಂದು ತಂಡದ ಸ್ಥಾಪನೆ ಮಾಡಲಾಗಿದೆ ಎಂದು ಹೇಳಿದರು.

೪. ಪೊಲೀಸ್ ಅಧಿಕಾರಿ ರಾಕೇಶ ಕುಮಾರ ಸಿಂಹ ಇವರು, ಇಲ್ಲಿಯವರೆಗೆ ಪೋಷಕರು ಅಥವಾ ವಿದ್ಯಾರ್ಥಿನಿಯರಲ್ಲಿ ಯಾರೂ ಕೂಡ ಈ ವಿಷಯದ ಬಗ್ಗೆ ದೂರು ನೀಡಿಲ್ಲ ಎಂದು ಹೇಳಿದರು.

೫. ರಾಷ್ಟ್ರೀಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗದ ಅಧ್ಯಕ್ಷ ಪ್ರಿಯಾಂಕ ಕಾನೂನಗೋ ಇವರು ಟ್ವೀಟ್ ಮೂಲಕ, ಈ ಘಟನೆಯನ್ನು ಗಮನಕ್ಕೆ ತೆಗೆದುಕೊಂಡು ಅಗತ್ಯ ಕ್ರಮ ಕೈಗೊಳ್ಳುವುದಕ್ಕಾಗಿ ದಮೋಹದ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

‘ಸ್ಕಾರ್ಫ್’ ನನ್ನು ಹಿಜಾಬ್ ಎಂದು ತಿಳಿಯಲಾಗುತ್ತಿದೆ ! – ಶಾಲೆಯ ಸಂಚಾಲಕ ಮುಸ್ತಾಕ್ ಖಾನ್ ಇವರ ದಾವೆ

ದೇಶದ ಹೆಚ್ಚಿನ ಶಾಲೆಗಳಲ್ಲಿ ಸಮವಸ್ತ್ರದ ಜೊತೆ ವಿದ್ಯಾರ್ಥಿನಿಯರು ಸ್ಕಾರ್ಫ್ ಧರಿಸುವುದಿಲ್ಲ; ಆದರೆ ಈ ಶಾಲೆಯಲ್ಲಿ ನೇರ ಹೀಜಾಬ ಧರಿಸಲು ವಿರೋಧಿಸಲಾಗುವುದೆಂದು ಸ್ಕಾರ್ಫ್ ಧರಿಸಲು ಅನಿವಾರ್ಯಗೊಳಿಸಲಾಗುತ್ತಿದೆಯೆ ಎಂದು ವಿಚಾರಣೆ ನಡೆಸುವ ಅವಶ್ಯಕತೆ ಇದೆ !

(ಸ್ಕಾರ್ಫ್ ಎಂದರೆ ಒಂದು ರೀತಿಯ ಕರ ವಸ್ತ್ರದ ಹಾಗೆ ಇರುವ ದೊಡ್ಡ ಬಟ್ಟೆ, ಅದು ತಲೆಗೆ ಕಟ್ಟಿಕೊಳ್ಳಬಹುದು)

ಗಂಗಾ ಜಮುನ ಉಚ್ಚ ಮಾಧ್ಯಮಿಕ ವಿದ್ಯಾಲಯದ ಸಂಚಾಲಕ ಮುಸ್ತಾಕ್ ಖಾನ್ ಇವರು, ಶಾಲೆಯ ಸಮವಸ್ತ್ರದಲ್ಲಿ ‘ಸ್ಕಾರ್ಫ್’ನ ಸಮಾವೇಶವಿದೆ; ಆದರೆ ಅದನ್ನು ಧರಿಸುವುದಕ್ಕಾಗಿ ಯಾರನ್ನು ಅನಿವಾರ್ಯಗೊಳಿಸಲಾಗಿಲ್ಲ. ಈ ಸ್ಕಾರ್ಫನ್ನು ಹಿಜಾಬ್ ಎಂದು ತಿಳಿಯಲಾಗುತ್ತಿದೆ, ಎಂದು ಅವರು ದಾವೆ ಮಾಡಿದ್ದಾರೆ.